nbf@namma-bengaluru.org
9591143888

ಪತ್ರಗಳು

ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಅದರ ನಾಗರಿಕ ತಂಡಗಳು, ಡಿಸಿಎಫ್ ಶ್ರೀ ರವಿಶಂಕರ್ ಅವರನ್ನು ಭೇಟಿಯಾಗಿ, ಯೋಜನೆಯ ಮೌಲ್ಯಮಾಪನ ಮಾಡಿ, ವರದಿ ನೀಡಲು ನಾಗರಿಕರಿಗೆ ೩ ತಿಂಗಳ ಕಾಲಾವಕಾಶ ನೀಡುವಂತೆ ಕೋರಿ ಮನವಿ ಪತ್ರವನ್ನು ಸಲ್ಲಿಸಿತು

ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಅದರ ನಾಗರಿಕ ತಂಡಗಳು, ಪ್ರತಿನಿಧಿಗಳು ಈ ಗಂಭೀರ ವಿಚಾರವನ್ನು ತನಿಖೆ ಮಾಡಿ, ಸಿಂಗನಾಯಕನಹಳ್ಳಿ ಕೆರೆಯಲ್ಲಿನ ನೈಸರ್ಗಿಕ ಆವಾಸಸ್ಥಾನವನ್ನು ಮತ್ತು ಮರಗಳನ್ನು ಉಳಿಸುವ ಕುರಿತು ಒಮ್ಮತಕ್ಕೆ ಬರುವಂತೆ ಅರಣ್ಯ ಇಲಾಖೆಗೆ ಬಲವಾಗಿ ಆಗ್ರಹಿಸಲಾಯಿತು. ತಂಡವು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಸಂಜಯ್ ಮೋಹನ್ ಮತ್ತು ಡಿಸಿಎಫ್ ಶ್ರೀ. ರವಿಶಂಕರ್ ಅವರನ್ನು ಭೇಟಿಯಾಗಿ, ಮನವಿ ಪತ್ರವನ್ನು ಸಲ್ಲಿಸಿ ಈ ಯೋಜನೆಯ ಮೌಲ್ಯಮಾಪನ ಮಾಡಿ, ವರದಿ ನೀಡಲು ನಾಗರಿಕರಿಗೆ ೩ ತಿಂಗಳ ಕಾಲಾವಕಾಶ ನೀಡುವಂತೆ ಕೋರಿತು. ಡಿಸಿಎಫ್ ರವಿಶಂಕರ್ ಅವರು, ಆಕ್ಷೇಪಣೆ ಸಲ್ಲಿಸಲು ನೀಡಲಾಗಿದ್ದ ಅವಧಿಯನ್ನು ಮತ್ತೆ ೨೦ ದಿನಗಳ ಕಾಲ ವಿಸ್ತರಿಸಿದ್ದಲ್ಲದೇ, ೨ ತಿಂಗಳೊಳಗಾಗಿ ಭೌತಿಕ ಸಾರ್ವಜನಿಕ ಸಮಾಲೋಚನೆಯನ್ನು ನಡೆಸುವುದಾಗಿಯೂ ಭರವಸೆ ನೀಡಿದರು.


ಪತ್ರಗಳನ್ನು ಓದಲು ಕ್ಲಿಕ್ ಮಾಡಿ:

Post a comment