nbf@namma-bengaluru.org
9591143888

ನಗರಾಡಳಿತ

ಬಿಡಿಎ ಆರ್‌ಎಂಪಿ ೨೦೪೧ ‘ಬೇಡ’ ಎಂದ ನಾಗರಿಕ ಗುಂಪುಗಳು

ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಆರ್‌ಎಂಪಿ ೨೦೪೧ ಅನ್ನು ಸಿದ್ಧಪಡಿಸಲು ಸಲಹೆಗಾರರ ಆಯ್ಕೆಗಾಗಿ ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಕರೆದಿದ್ದ ಟೆಂಡರ್‌ಗೆ ಸಂಬಂಧಿಸಿ, ನಮ್ಮ ಬೆಂಗಳೂರು ಪ್ರತಿಷ್ಠಾನವು ವಿವಿಧ ನಗರ ಯೋಜಕರು, ತಜ್ಞರು, ವಸತಿ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳು(ಆರ್‌ಡಬ್ಲ್ಯುಎಗಳು) ಮತ್ತು ವಿವಿಧ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿ, ಬಿಡಿಎ ಕೈಗೊಂಡಿರುವ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿತು. ಏಕೆಂದರೆ, ನಗರಕ್ಕೆ ಸಂಬಂಧಿಸಿದ ಮಾಸ್ಟರ್‌ಪ್ಲ್ಯಾನ್ ತಯಾರಿಸಬೇಕಾಗಿರುವುದು ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ(ಬಿಎಂಪಿಸಿ)ಯೇ ಹೊರತು ಬಿಡಿಎಯಾಗಲೀ ಅಥವಾ ಇತರೆ ಸಂಸ್ಥೆಯಾಗಲೀ ಅಲ್ಲ. 

ಈ ಮೇಲಿನ ವಿಚಾರಗಳನ್ನು ಉಲ್ಲೇಖಿಸಿ ಸಂಬಂಧಪಟ್ಟ ಹಲವರು ಸಹಿ ಹಾಕಿದ ಪತ್ರವನ್ನು ಕರ್ನಾಟಕದ ಮುಖ್ಯಮಂತ್ರಿಗಳಾದ ಗೌರವಾನ್ವಿತ ಶ್ರೀ. ಬಸವರಾಜ ಬೊಮ್ಮಾಯಿ, ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಸಚಿವರಾದ ಗೌರವಾನ್ವಿತ ಶ್ರೀ.ಬಿ.ಎ. ಬಸವರಾಜ್, ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಶ್ರೀ ರಾಕೇಶ್ ಸಿಂಗ್, ನಗರಾಭಿವೃದ್ಧಿ ಇಲಾಖೆ ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಸಲ್ಲಿಸಲಾಯಿತು. 

Post a comment