nbf@namma-bengaluru.org
9591143888

ಅಭಿಯಾನಗಳು

ಉಕ್ಕಿನ ಸೇತುವೆ:#ಸ್ಟೀಲ್‍ಫ್ಲೈಓವರ್‍ಬೇಡ

ಮಾರ್ಚ್ 2014ರಲ್ಲಿ ಕರ್ನಾಟಕ ಸರ್ಕಾರ ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗೆ 6.72 ಕಿಮೀ ಉದ್ದದ ಉಕ್ಕಿನ ಫ್ಲೈಓವರ್ ನಿರ್ಮಿಸುವುದಾಗಿ ಘೋಷಿಸಿದಾಗ, ಈ ತಾತ್ಕಾಲಿಕ ಯೋಜನೆಯು ಹಿಂದೆಂದೂ ಇಲ್ಲದಂತೆ ಜನರನ್ನು ಸಂಘಟಿಸುತ್ತದೆ ಎನ್ನುವುದು ಸರ್ಕಾರಕ್ಕೆ ಗೊತ್ತಿರಲಿಲ್ಲ. ಸಕಾರದ ದಾರಿ ತಪ್ಪಿಸುವ, ಹಠಮಾರಿತನದ, ಅವಕಾಶವಾದಿ ಹಾಗೂ ನಿರ್ಲಕ್ಷ್ಯ ಮನೋಭಾವವನ್ನು ಸಹಿಸಲಾಗದ 8000ಕ್ಕೂ ಅಧಿಕ ಬೆಂಗಳೂರಿಗರು ಭಾನುವಾರ ಬೆಳಗ್ಗೆ ಮಾನವ ಸರಪಳಿಯನ್ನು ನಿಮಿಸುವ ಮೂಲಕ ಸರಳ ಆದರೆ ಪ್ರಬಲ ಸಂದೇಶವನ್ನು ರವಾನಿಸಿದರು: ಅದೇ #Sಣeeಟಈಟಥಿoveಡಿಃeಜಚಿ.  ಒಂದು…...

Read more

ಹೊಸ ವಲಯೀಕರಣ ಬೇಡ ಎನ್ನುವ ಕೂಗು

ನಮ್ಮ ಬೆಂಗಳೂರು ಪ್ರತಿಷ್ಠಾನವು ಸಿಟಿಜನ್ ಆಕ್ಷನ್ ಫೋರಂ ಹಾಗೂ ನರಗದ ನಾನಾ ಭಾಗಗಳ ಹಲವು ನಿವಾಸಿಗಳ ಕಲ್ಯಾಣ ಸಂಘಟನೆ(ಆರ್‍ಡಬ್ಲ್ಯುಎ)ಗಳೊಡನೆ ಕೈಜೋಡಿಸಿ, ನಗರಾಭಿವೃದ್ಧಿ ಇಲಾಖೆಯ ಇತ್ತೀಚಿನ ಹೊಸ ವಲಯ ನಿಯಮಗಳ ಕರಡಿಗೆ   “ಹೊಸ ಝೋನಿಂಗ್ ಬೇಡ’ ಎನ್ನುವ ಮೂಲಕ ಕರ್ನಾಟಕ ಸರ್ಕಾರಕ್ಕೆ ಪ್ರಬಲ ಸಂದೇಶವನ್ನು ರವಾನಿಸಿದೆ. ಕರಡು ಅಧಿಸೂಚನೆ ಪ್ರಕಾರ, 9 ಮೀಟರ್(29.5 ಅಡಿ) ಅಗಲವಿರುವ ರಸ್ತೆಯಿರುವ ವಸತಿ ಪ್ರದೇಶಗಳಲ್ಲಿ ತರಕಾರಿ ಮತ್ತು ಹೂವಿನ ಮಳಿಗೆಗಳು, ಫಾಸ್ಟ್ ಫುಡ್ ಹಾಗೂ ಕೊಂಡೊಯ್ಯುವ…...

Read more

ಬೆಂಗಳೂರಿನ ನಿಜವಾದ ಹೀರೋಗಳಿಗೆ ಗೌರವ

ಬೆಂಗಳೂರನ್ನು ಇನ್ನಷ್ಟು ಉತ್ತಮಗೊಳಿಸಲು ನೆರವಾಗುವ ವಿಶಿಷ್ಟ ವ್ಯಕ್ತಿಗಳನ್ನು ಗುರುತಿಸಲು ಹಾಗೂ ಗೌರವಿಸಲು ಪ್ರತಿ ವರ್ಷ ನೀಡಲಾಗುವ  ನಮ್ಮ ಬೆಂಗಳೂರು ಪ್ರಶಸ್ತಿಗೆ ಆಯ್ಕೆಯಾದವರಿಗೆ ತಲಾ 2 ಲಕ್ಷ ರೂ. ನೀಡಲಾಗುತ್ತದೆ. ಈ ವರ್ಷ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನಮ್ಮ ಬೆಂಗಳೂರು ಫೌಂಡೇಷನ್ ಆರೂ ಮಂದಿ ವಿಜೇತರಿಗೆ ಹೆಚ್ಚುವರಿ 2 ಲಕ್ಷ ರೂ.ಗಳನ್ನು ಸಂಗ್ರಹಿಸಿ ವಿತರಿಸಲು ನಿರ್ಧರಿಸಿದೆ. ಈ ವರ್ಷದ ವಿಶಿಷ್ಟ ಪ್ರಶಸ್ತಿ ವಿಜೇತರು ಹಾಗೂ ನೀವು ಅವರಿಗೆ ಹೇಗೆ ನೆರವಾಗಬಹುದು…...

Read more

ಬೆಂಗಳೂರಿನ ಸಂಚಾರ ಸಮಸ್ಯೆಗಳು

ಬೆಂಗಳೂರು ತ್ಯಾಜ್ಯ ನಿರ್ವಹಣೆ, ಜನ ಸಂಕಷ್ಟ, ಸಾಯುತ್ತಿರುವ ಕೆರೆಗಳು, ಸಂಕಷ್ಟಕ್ಕೀಡಾಗಿರುವ ಪರಿಸರ, ಅಸುರಕ್ಷಿತ ನೆರೆಹೊರೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಹಲವು ವರ್ಷಗಳಿಂದ ನಡೆದ ಯೋಜನೆರಹಿತ ಅಭಿವೃದ್ಧಿ, ತಾತ್ಕಾಲಿಕ ಹಾಗೂ ಪ್ರತಿಕ್ರಿಯಾತ್ಮಕ ಪರಿಹಾರಗಳು ಸಮಸ್ಯೆಯನ್ನು ಇನ್ನಷ್ಟು ಸಿಕ್ಕಾಗಿಸಿವೆ. ನಮ್ಮ ಬೆಂಗಳೂರು ಪ್ರತಿಷ್ಠಾನವು #Uಟಿiಣeಜಃeಟಿgಚಿಟuಡಿu,ಬ್ರೇಸ್ ಮತ್ತಿತರ ಸಹಭಾಗಿತ್ವವನ್ನು ಉತ್ತೇಜಿಸುತ್ತಿದ್ದು, ನಗರದಲ್ಲಿ ಈ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಚಲನೆ ಮತ್ತು ಸಾಗಣೆ ಬೆಂಗಳೂರಿಗರು ಎದುರಿಸುತ್ತಿರುವ ಅಂಥ ಒಂದು ಸಮಸ್ಯೆಯಾಗಿದ್ದು, ಜುಲೈ…...

Read more

ಉಕ್ಕಿನ ಮೇಲ್ಸೆತುವೆ ಬೇಡ: ಚರಿತ್ರೆ ನಿರ್ಮಿಸಿದ ಬೆಂಗಳೂರು

ಪ್ರಯತ್ನ: # ಸ್ಟೀಲ್ ಫ್ಲೈಓವರ್ ಬೇಡ ಎಂದು ಘೋಷಣೆ ಹಾಕುತ್ತ ಯೋಜನಾರಹಿತ ಅಭಿವೃದ್ಧಿಯಿಂದ ನಗರದ ಭವಿಷ್ಯ ಹಾಳಾಗದಂತೆ ಖಾತ್ರಿಗೊಳಿಸಲು ಬೆಂಗಳೂರಿಗರು ಒಗ್ಗಟ್ಟಾದರು. ಪರಿಣಾಮ: ಜನರ ಒತ್ತಡಕ್ಕೆ ಬಗ್ಗಿದ ಕರ್ನಾಟಕ ಸರ್ಕಾರವು ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗಿನ 6.7 ಕಿಮೀ ಉದ್ದದ ವಿವಾದಾತ್ಮಕ ಫ್ಲೈ ಓವರ್ ಯೋಜನೆಯನ್ನು ರದ್ದುಗೊಳಿಸಿತು. ನಮ್ಮ ಬೆಂಗಳೂರು ಪ್ರತಿಷ್ಠಾನ ಸಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಈ ಪ್ರಯತ್ನದಲ್ಲಿ ಪಾಲ್ಗೊಂಡ ಎಲ್ಲ ನಾಗರಿಕರ ಸಕ್ರಿಯ ಪಾತ್ರವನ್ನು ಶ್ಲಾಘಿಸಿದೆ. ನಗರದ ಇತಿಹಾಸದಲ್ಲಿ…...

Read more

ವಲಯ ನಿಯಮಗಳು: ನಿವಾಸಿಗಳು ವಿ/ಎಸ್ ವಾಣಿಜ್ಯ ಸಂಸ್ಥೆಗಳು

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳ ಸ್ಥಾಪನೆ ವಿರುದ್ಧ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲೇ, ನಗರದ ಕೆಲ ಪ್ರದೇಶಗಳಲ್ಲಿ ವ್ಯಾಪಾರಿಗಳು ವಿವಾಸಿಗಳನ್ನು ಬೆದರಿಸಿದ ಪ್ರಕರಣಗಳು ನಮ್ಮ ಬೆಂಗಳೂರು ಪ್ರತಿಷ್ಠಾನದ ಗಮನಕ್ಕೆ ಬಂದಿವೆ. ಇದರ ವಿರುದ್ಧ ಜನ ದನಿಯೆತ್ತಿದ್ದು, ಪಾಲಿಕೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವಲಯ ನಿಯಮಗಳ ಅನುಷ್ಠಾನವನ್ನು ಖಾತ್ರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. ಪಾಲಿಕೆ ಆಯುಕ್ತರಿಗೆ ಸೆಪ್ಟೆಂಬರ್ 20, 2019ರಲ್ಲಿ ಎನ್‍ಬಿಎಫ್ ಹಾಗೂ 17 ನಿವಾಸಿಗಳ…...

Read more

ವಿವಾದಾತ್ಮಕ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಮಸೂದೆ,2016

ಅಕ್ಟೋಬರ್ 4,2016ರಂದು ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದ ಜಾಗಗಳನ್ನುಕಡಿಮೆಗೊಳಿಸುವ ಅಂಶಗಳಿದ್ದ ವಿವಾದಾತ್ಮಕ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಮಸೂದೆ, 2016ನ್ನು ಸರ್ಕಾರಕ್ಕೆ ವಾಪಸ್ ಮಾಡಿದರು. ರಾಜ್ಯಪಾಲರ ಈ ಕ್ರಮದ ಹಿಂದೆ ಇದ್ದುದು ನಗರ ಪ್ರದೇಶಗಳಲ್ಲಿನ ಹಸಿರು ಹಾಗೂ ತೆರೆದ ಪ್ರದೇಶಗಳನ್ನು ಸರ್ಕಾರ ಕೈವಶ ಮಾಡಿಕೊಳ್ಳುವುದರ ವಿರುದ್ಧ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ನಮ್ಮ ಬೆಂಗಳೂರು ಪ್ರತಿಷ್ಠಾನ ನಡೆಸಿದ ನಿರಂತರ ಪ್ರಯತ್ನ. ಕರ್ನಾಟಕದ 250 ನಗರಗಳು ಹಾಗೂ…...

Read more

ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿಯ ಸಬಲೀಕರಣ

ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ನಗರ ಅವೈಜ್ಞಾನಿಕವಾಗಿ ಬೆಳೆದಿದ್ದು, ಈಗ ನಗರಕ್ಕೆ ಬೇಕಿರುವುದು ಸೂಕ್ತವಾದ, ದೀರ್ಘಕಾಲೀನ ಶಾಸನಬದ್ಧ ಯೋಜನೆ. ನಗರದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ(ಬಿಎಂಪಿಸಿ) ಎದುರು ಇಡಬೇಕಿದ್ದು, ಸಮಿತಿಯ ಸದಸ್ಯರು ಪಾರದರ್ಶಕವಾಗಿ ನಾನಾ ಯೋಜನೆಗಳನ್ನು ಕುರಿತು ಚರ್ಚಿಸುತ್ತಾರೆ. ಬಿಎಂಪಿಸಿ ಸದಸ್ಯರು ನಗರದ ಸಂರಕ್ಷಣೆಗೆ ಸಂಬಂಧಿಸಿದಂತೆ ಮೂಲಭೂತ ಕರ್ತವ್ಯ ಹಾಗೂ ಹಕ್ಕುಬಾಧ್ಯತೆಯನ್ನು ಹೊಂದಿರುತ್ತಾರೆ ಮತ್ತು ಅವರು ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ಪ್ರಕ್ರಿಯೆಗಳನ್ನು…...

Read more

ಉಕ್ಕಿನ ಮೇಲ್ಸೇತುವೆ ಬೇಡ

ಬೆಂಗಳೂರಿಗರಲ್ಲಿ ಹೆಚ್ಚಿನವರು ಇಂದು ಬೇಸರಗೊಂಡಿದ್ದಾರೆ. ಬೇಸರ ಸರ್ಕಾರ ಇನ್ನೊಂದು ಮೂಲಸೌಕರ್ಯ ಯೋಜನೆಯನ್ನು ಅನುಷ್ಠಾನಗೊಳಿಸಲು ಮುಂದಾಗಿರುವುದಕ್ಕಲ್ಲ: ಬದಲಿಗೆ, ನಗರಕ್ಕೆ ಇಲ್ಲವೇ ಜನರಿಗಾಗಲೀ ಬೇಕಿಲ್ಲದ ಯೋಜನೆಯೊಂದಕ್ಕೆ ಸರ್ಕಾರ ಅನುಮತಿ ನೀಡಿದೆ. ಉದ್ದೇಶಿತ ಉಕ್ಕಿನ ಮೇಲ್ಸೇತುವೆಯನ್ನು ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ರಸ್ತೆವರೆಗೆ ನಿರ್ಮಿಸ ಲಾಗುತ್ತದೆ. ಎನ್‍ಬಿಎಫ್‍ನ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ಯೋಜನೆಯನ್ನು ಮುಂದುವರಿಸಬಾರದೆಂದು ಹೇಳಿದ್ದರೂ, ರಾಜ್ಯ ಸರ್ಕಾರ ಯೋಜನೆ ಜಾರಿಗೆ ಹಠ ಹಿಡಿದು ಕುಳಿತಿದೆ. ನಗರದ ಜನಜೀವನವನ್ನು ಅಸ್ತವ್ಯಸ್ತಗೊಳಿಸುವ ಹಾಗೂ ಸಾರ್ವಜನಿಕರ…...

Read more

ಭ್ರಷ್ಟಾಚಾರದಿಂದ ಧೂಳೀಪಟ

ದೇಶದ ಐಟಿ ಕೇಂದ್ರ ಎನಿಸಿಕೊಂಡಿರುವ ಬೆಂಗಳೂರು, ತಾಂತ್ರಿಕ ಹಾಗೂ ಡಿಜಿಟಲ್ ಕ್ರಾಂತಿಯ ಯುಗಕ್ಕೆ ದೇಶವನ್ನು ಮುನ್ನಡೆಸಿದೆ. ಆದರೆ, ಪ್ರಸ್ತುತ ಅನಿಯಂತ್ರಿತ ನಗರೀಕರಣ, ಲಂಗುಲಗಾಮಿಲ್ಲದ ಬೆಳವಣಿಗೆ ಹಾಗೂ ನಗರವನ್ನು ಆಳುತ್ತಿರುವವರಲ್ಲಿ ಉತ್ತರದಾಯಿತ್ವದ ಕೊರತೆಯಿಂದಾಗಿ, ಬಲಿಪಶುವಾಗಿ ಪರಿಣಮಿಸಿದೆ. ಮಳೆ ನೀರು ಕಾಲುವೆಗಳ ಮೇಲೆ ನಿರ್ಮಾಣಗೊಂಡ ಅನಧಿಕೃತ ನಿರ್ಮಿತಿಗಳನ್ನು ಬಿಬಿಎಂಪಿ ಕೆಡವುತ್ತಿರುವುದು ಹಣವಂತರು ಹಾಗೂ ರಾಜಕೀಯ ಪ್ರಾಬಲ್ಯವಿರುವ ಬಿಲ್ಡರ್‍ಗಳಿಗೆ ನಗರವನ್ನು “ಮಾರಾಟ’ ಮಾಡಿರುವುದಕ್ಕೆ ಸಾಕ್ಷಿ. ತಮ್ಮದಲ್ಲದ ತಪ್ಪಿಗೆ ಜನ ನರಳುತ್ತಿದ್ದರೆ, ನಗರವನ್ನು ನಿರ್ವಹಣೆ ಮಾಡಬೇಕಾದ…...

Read more