nbf@namma-bengaluru.org
9591143888

ಮೀನಾಕ್ಷಿ ಕಾರಂತ್- ಲೇಕ್ಶೋರ್ ಹೋಮ್ ಅಸೋಸಿಯೇಶನ್

ಮೀನಾಕ್ಷಿ ಕಾರಂತ್- ಲೇಕ್ಶೋರ್ ಹೋಮ್ ಅಸೋಸಿಯೇಶನ್

ಇವರ ಸಾಮಾಜಿಕ ಕೊಡುಗೆ ಪ್ರೇರಣಾದಾಯಕ

ನಮ್ಮ ಬೆಂಗಳೂರು ಫೌಂಡೇಶನ್ ಭಾಗವಾಗಿರುವುದರಲ್ಲಿ ನನಗೆ ಸಂತಸ ತಂದಿದೆ. ಬೆಂಗಳೂರು ನಗರವನ್ನು ಅಭಿವೃದ್ಧಿ ಹೊಂದಿದ ನಗರವನ್ನಾಗಿಸಲು ಇವರು ವಹಿಸುವ ಖಾಳಜಿ ಅಷ್ಟಿಷ್ಟಲ್ಲ. ಇವರ ಸಮಾಜಸೇವಾ ಕಾರ್ಯಗಳು, ದತ್ತಿ ಪೋಷಣೆಗಳು ಮತ್ತೊಬ್ಬರಿಗೂ ಪ್ರೇರಣೆಯಾಗಿದೆ. ಬಹುಮುಖ್ಯವಾಗಿ, ಸಮಾಜವನ್ನು ಮುನ್ನಡೆಸುವಲ್ಲಿ ಇವರ ನಾಯಕತ್ವ ಎಂತವರನ್ನೂ ಉತ್ತೇಜಿಸುತ್ತದೆ. ಇವರಲ್ಲಿರುವಂತ ಸಾಮಾಜಿಕ ಬದ್ಧತೆಯಿಂದ ಕೂಡಿದ ಪರಿಣಿತರ ತಂಡ ಕಾಣಸಿಗುವುದು ಬಹಳ ಅಪರೂಪ. ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಜತೆಯಾಗಿ ನಾವು ಏನನ್ನು ಬೇಕಿದ್ದರೂ ಮಾಡಬಹುದು ಎಂಬ ಛಲದೊಂದಿಗೆ ಬೆಂಗಳೂರಿನ ಗತ ವೈಭವವನ್ನು ಮರುಸ್ಥಾಪಿಸಲು ಮಾಡುತ್ತಿರುವ ಕಾರ್ಯಗಳಲ್ಲಿ ಈಗಾಗಲೇ ಹಲವಾರು ಯಶಕಂಡಿದೆ. ಇವರ ಇಂತಹಾ ಪ್ರಯತ್ನ ಮುಂದೆಯೂ ಹೀಗೆಯೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.