ಸಿಂಗನಾಯಕನಹಳ್ಳಿ ಕೆರೆಯ ದಡದಲ್ಲಿ ದೊಡ್ಡದಾಗಿ ಬೆಳೆದುನಿಂತಿರುವ ೬,೩೧೬ ಮರಗಳನ್ನು ಕಡಿಯುವ ಮೂಲಕ ಆ ಕೆರೆಯನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಇತರೆ ಹಲವು ಕೆರೆಗಳಿಗೆ ಫೀಡರ್ ಕೆರೆಯಾಗಿ ಅಭಿವೃದ್ಧಿಪಡಿಸುವುದಾಗಿ ಮತ್ತು ನೀರಾವರಿಗೆ ಇವುಗಳ ಸಂಸ್ಕರಿತ ನೀರನ್ನು ಬೆಳೆಸಲು ನಿರ್ಧರಿಸಿರುವುದಾಗಿ ಕರ್ನಾಟಕ ಸರ್ಕಾರ ಇತ್ತೀಚೆಗೆ ಘೋಷಿಸಿದೆ. ಸಾರ್ವಜನಿಕ ಸಮಾಲೋಚನೆಗೆ ಸಾಕಷ್ಟು ಸಮಯಾವಕಾಶವನ್ನು ನೀಡದೆಯೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದಕ್ಕೆ ಪ್ರತಿಯಾಗಿ, ನಮ್ಮ ಬೆಂಗಳೂರು ಪ್ರತಿಷ್ಠಾನದ ನೇತೃತ್ವದಲ್ಲಿ ನಗರ ಸಂರಕ್ಷಕರು, ನಾಗರಿಕ ವಿಜ್ಞಾನಿಗಳು, ಕಲಾವಿದರು,…...