ನಾವು ಯಾರು

ನಮ್ಮ ಬೆಂಗಳೂರು ಫೌಂಡೇಶನ್- ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು, ನಗರ ಮತ್ತು ನಾಗರಿಕರ ಜೀವನಮಟ್ಟ ಸುಧಾರಣೆಯ ದೃಷ್ಟಿಯಿಂದ ಸಾಮೂಜಿಕವಾಗಿ ಜನಸಾಮಾನ್ಯರು ಸಮಾಜದಲ್ಲಿ ಚಟುವಟಿಕೆಂದ ಕೂಡಿರಬೇಕೆಂಬ ಮಹಾದಾಕಾಂಕ್ಷೆಯನ್ನಿಟ್ಟುಕೊಂಡು ಸ್ಥಾಪನೆಗೊಂಡಿರುತ್ತದೆ …

ನಮ್ಮ ಸಂಸ್ಥೆ

ಜನರ ಧ್ವನಿಯಾಗುವುದೇ ನಮ್ಮ ಗುರಿ; ಎಲ್ಲರಿಗೂ ಕೇಳಿಸುವಂತ ಗಟ್ಟಿ ಧ್ವನಿಯಾಗಬೇಕು ಹಾಗೂ ಸಮರ್ಥವಾಗಿ ಪ್ರತಿಪಾಧಿಸುವ ಧ್ವನಿಯಾಗಬೇಕು. ಆಗ ಮಾತ್ರ ಬೆಂಗಳೂರು ನಿಜವಾಗಿಯೂ ಜಾಗತಿಕ ನಗರವಾಗುತ್ತದೆ.
 
 

ಬನ್ನಿ ಭಾಗಿಯಾಗಿ

ಕ್ರಿಯೆಯು ಬದಲಾವಣೆ ತರುತ್ತದೆ! ಆದ್ದರಿಂದ, ಬನ್ನಿ ನಮ್ಮ ಬೆಂಗಳೂರು ಕುಟುಂಬದ ಸದಸ್ಯರಾಗಿ – ಬೆಂಗಳೂರನ್ನು ಎಲ್ಲರೂ ಸ್ವಾಸ್ಥ್ಯದಿಂದ ಬದುಕುವ ಮಹಾನಗರವಾಗಿ ರೂಪಿಸುವ ಶಕ್ತಿಯಾಗಿ ಹೊರಹೊಮ್ಮಲು ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ, ನಿಮ್ಮ ಸಮಯವನ್ನೂ ಮೀಸಲಿಡಿ.
 

ನಮ್ಮ ಅಭಿಯಾನಗಳು

ಒಟ್ಟಿಗೆ ನಾವು ರೂಪಾಂತರಗೊಳ್ಳಬಹುದು

ನಮ್ಮ ಸಹಭಾಗಿಗಳನ್ನು ಅಮೂಲ್ಯವೆಂದು ಪರಿಗಣಿಸುವ ನಾವು, ಉತ್ತಮ ಬೆಂಗಳೂರು

ನಿರ್ಮಾಣಕ್ಕಾಗಿ ಹಂಬಲಿಸುವವರೊಂದಿಗೆ ಕೈಜೋಡಿಸಬಯಸುತ್ತೇವೆ.

ಪಾಲುದಾರಿಕೆಗಳು

 

ಪ್ರಚಲಿತ ಅಭಿಯಾನಕ್ಕೆ ನಿಮ್ಮ ಬೆಂಬಲ ತುರ್ತಾಗಿ ಬೇಕಾಗಿದೆ

ಮಾರ್ಚ್ 24, 2020 ರಂದು ಪ್ರಧಾನಮಂತ್ರಿ ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್ 19 ಸಾಂಕ್ರಾಮಿಕ ತಡೆಗಟ್ಟಲು ದೇಶದಾದ್ಯಂತ ಲಾಕ್ಡೌನ್ ಘೋಷಿಸಿತು. ಇಡೀ ಬೆಂಗಳೂರೇ ಸ್ತಬ್ಧಗೊಂಡು ವ್ಯಾಪಾರ ವಹಿವಾಟುಗಳೆಲ್ಲವೂ ಸ್ಥಗಿತಗೊಂಡಿತು. ಇದು ಆರ್ಥಿಕತೆಗೆ ತೀವ್ರಗತಿಯ ಹೊಡೆತ ಕೊಟ್ಟಿತು. ವಿಶೇಷವಾಗಿ ಬಡ, ದುರ್ಬಲ ವರ್ಗದವರಿಗೆ, ವಲಸೆ ಕಾರ್ಮಿಕರಿಗೆ ಇದು ತುಂಬಲಾರದ ನಷ್ಟವನ್ನು ತಂದೊಡ್ಡಿತು. ಅತ್ತ ಕೆಲಸವೂ ಇಲ್ಲದೆ, ಇತ್ತ ಬೇರೆ ಯಾವುದೇ ಆದಾಯ ಮೂಲಗಳಿಲ್ಲದೆ ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವುದರೊಂದಿಗೆ  ತಮ್ಮನ್ನೇ ನಂಬಿರುವ ಕುಟುಂಬ ಸದಸ್ಯರಿಗೂ ದೈನಂದಿನ ಆಹಾರ ಪೂರೈಸುವುದೂ ಕಷ್ಟಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಬೆಂಗಳೂರು ಫೌಂಡೇಶನ್ ವಿವಿಧ ಮೂಲಗಳಿಂದ ಸಂಪತ್ತು ಕ್ರೋಡೀಕರಿಸಿ ‘ಆಹಾರ ಸರಬರಾಜು ಅಭಿಯಾನ’ವನ್ನು ಮಾಚ್ 28, 2020 ರಂದು ಆರಂಭಿಸಿತು. ನಮ್ಮ ಬೆಂಗಳೂರು ಫೌಂಡೇಶನ್ ಇನ್ನಿತರ ಸ್ಥಳೀಯ ಸಂಸ್ಥೆಗಳೊಂದಿಗೆ ಕೈಜೋಡಿಸಿ ತರಕಾರಿ ಪೊಟ್ಟಣಗಳನ್ನು ಸಿದ್ಧ ಆಹಾರ ಪೊಟ್ಟಣಗಳನ್ನು ಬೆಂಗಳೂರಿನ 45 ಪ್ರದೇಶದ ನೊಂದ ಜನರಿಗೆ ವಿತರಿಸಿತು. ನಮ್ಮ ಬೆಂಗಳೂರು ಫೌಂಡೇಶನ್ ಆಹಾರ ಸರಬರಾಜು ಅಭಿಯಾನವು 1.5 ಲಕ್ಷ ಆಹಾರ ಪೊಟ್ಟಣಗಳು, 2,800 ಕೆ.ಜಿ ತರಕಾರಿ ಪೊಟ್ಟಣಗಳನ್ನು ಈ ಲಾಕ್ಡೌನ್ ಸಂದರ್ಭದಲ್ಲಿ ಬೆಂಗಳೂರಿನಾದ್ಯಂತ ವಿತರಿಸಿತು. ಹೀಗೆ ನಮ್ಮ ಜನಪರ ಕಾರ್ಯಗಳು ಮುಂದುವರೆಯುತ್ತದೆ. ಕೊಡುಗೆ ನಿಧಿ ನೀಡುವ ಮೂಲಕ ನೀವೂ ನಮ್ಮೊಂದಿಗೆ ಕೈಜೋಡಿಸಿ.

 

ನಮ್ಮ ಬೆಂಗಳೂರು ಕಾರ್ಯಕ್ರಮಗಳು

ಫೋಟೋ ಗ್ಯಾಲರಿ

ನಮ್ಮ ಬೆಂಗಳೂರು ಫೌಂಡೇಶನ್ ನ ಆಹಾರ ಸರಬರಾಜು ಅಭಿಯಾನ

ಕೊರೊನ ಲಾಕ್ಡೌನ್ ನಿಂದಾಗಿ ಮನೆ ಇಲ್ಲದವರು, ಅಸಂಘಟಿತ ವಲಯದ ದಿನಗೂಲಿ ಕಾರ್ಮಿಕರು, ಮನೆಕೆಲಸದವರು, ಗುಜರಿ ಹೆಕ್ಕುವವರು, ಆಟೋ ಚಾಲಕರು, ತಳ್ಳುಗಾಡಿಯವರು, ಒಂಟಿ ತಾಯಂದಿರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ನಗರದ ಬಡವರು ಎಲ್ಲರೂ ತೀರಾ ಸಂಕಷ್ಟಕ್ಕೀಡಾಗಿದ್ದಾರೆ. ದೈನಂದಿನ ಆಹಾರ ಅಗತ್ಯತೆಗಳಿಗೆ ಅವರು ಹರಸಾಹಸ ಪಡುತ್ತಿದ್ದಾರೆ. ಮಾರ್ಚ್ 28, 2020 ರಂದು ನಮ್ಮ ಬೆಂಗಳೂರು ಫೌಂಡೇಶನ್ ಆರಂಭಿಸಿದ ಆಹಾರ ಸರಬರಾಜು ಅಭಿಯಾನ, ಬೆಂಗಳೂರಿನಲ್ಲಿರುವಂತ ಇಂತಹಾ ಸಾವಿರಾರು ಬಡವರ್ಗದವರಿಗೆ ಆಹಾರ ಪೂರೈಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.

ನಮ್ಮ ಅತ್ಯಂತ ವಿಶ್ವಾಸಾರ್ಹ ಪೋಷಕ ಪಾಲುದಾರರು