ನೀವು ಬೆಂಗಳೂರಿನ ಬಗ್ಗೆ ಕಾಳಜಿ ಹೊಂದಿರುವವರಾಗಿದ್ದರೆ, ಇತರರು ಅದನ್ನು ಅನುಸರಿಸಲು ಒಂದು ಉದಾಹರಣೆ ನೀಡಲು ಬಯಸಿದರೆ, ಇದು ನೀವು ನಗರದ ಹೊಣೆ ವಹಿಸಿಕೊಳ್ಳುವ ಸರಿಯಾದ ಸಮಯ ಮತ್ತು ದೊಡ್ಡ ಪ್ರಮಾಣದ ಪರಿಣಾಮವನ್ನು ಬೀರುವ ಸಮಯ. ನಮ್ಮ ನಗರದ ಕಳೆದುಹೋದ ವೈಭವವನ್ನು ಪುನಃಸ್ಥಾಪಿಸುವ ನಿಮ್ಮ ಹೋರಾಟದಲ್ಲಿ, ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ನಮ್ಮ ಸಂಸ್ಥಾಪಕ ಟ್ರಸ್ಟಿ ಸಂಸದ ರಾಜೀವ್ ಚಂದ್ರಶೇಖರ್ ಅವರು ನಿಮ್ಮ ಕಾಳಜಿಯ ಧ್ವನಿ ವ್ಯರ್ಥವಾಗದ ರೀತಿ ಸಮಾಜಕ್ಕೆ ತಲುಪಲು ನಿಮ್ಮ ಜೊತೆ ಟೊಂಕ ಕಟ್ಟಿ ನಿಲ್ಲುತ್ತಾರೆ.

ಸರ್ಕಾರದ ವೈಫಲ್ಯ, ಯೋಜನೆ ಮತ್ತು ಅಭಿವೃದ್ಧಿ ವಲಯಗಳಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಲಾಭಕ್ಕಾಗಿ ಲಕ್ಷಾಂತರ ಬೆಂಗಳೂರಿಗರ ಹಿತ ಬಲಿ ಕೊಡುವುದನ್ನ ತಪ್ಪಿಸಲು, ನಮ್ಮ ನೆರೆಹೊರೆಗಳ ಅವನತಿ ತಪ್ಪಿಸಲು, ಸರ್ಕಾರ ಮತ್ತು ಏಜೆನ್ಸಿಗಳು ಕಾರ್ಯನಿರ್ವಹಿಸುವ ವಿಧಾನ ಸುಧಾರಿಸಲು, ಬದಲಾಯಿಸಲು ಮುಂದಾಗುವುದು ಮುಂತಾದ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನಮ್ಮ ನಗರವನ್ನು ಪುನಃ ಪಡೆದುಕೊಳ್ಳುವ ನಮ್ಮ ಹೋರಾಟದಲ್ಲಿ ನಮ್ಮೊಂದಿಗೆ ಸೇರಿ – ನಗರವನ್ನು ದುರುಪಯೋಗಪಡಿಸಿಕೊಳ್ಳುವುದನ್ನ ತಪ್ಪಿಸುವುದರಿಂದರಿಂದ ಹಿಡಿದು ನಗರದ ನಾಗರಿಕರಿಗೆ ಸೇವೆ ಸಲ್ಲಿಸುವವರೆಗೆ ಮುನ್ನಡೆಯೋಣ.

ಬದಲಾವಣೆಯಾಗುವ ಅವಕಾಶವನ್ನು ಪಡೆದುಕೊಳ್ಳಿ ಮತ್ತು ನಿಮ್ಮ ಧ್ವನಿಗಾಗಿ ನಮ್ಮ ಎಲ್ಲಾ ಅಭಿಯಾನಗಳಲ್ಲಿ ನಮಗೆ ಬೆಂಬಲ ನೀಡಿ. ನಿಮ್ಮ ಧ್ವನಿಯಿಂದ ನಗರದ ಭವಿಷ್ಯವನ್ನು ಮರುರೂಪಿಸಬಹುದು ಮತ್ತು ನಿರ್ಧರಿಸಬಹುದು

Fill in your details to support NBF and its effort to make Bengaluru a better city. 

Donate Now

ಜಗತ್ತಿಗೆ ನಿಮ್ಮ ಕೊಂಚ ಏನಾದರೂ ಮಾಡುವುದನ್ನು ಪ್ರಾರಂಭಿಸೋಣ. ಸ್ವಲ್ಪ ದಾನ ಮಾಡಿ.