nbf@namma-bengaluru.org
9591143888

ಬೆಂಗಳೂರು ಡೈರೀಸ್

ಅಕ್ರಮ ಸಕ್ರಮ ಯೋಜನೆ ಪ್ರಕರಣ

ಅಕ್ರಮ ಕಟ್ಟಡಗಳು ಕೇವಲ ನಮ್ಮ ನಗರಕ್ಕೆ ಮಾತ್ರಲ್ಲದೆ ನಮ್ಮ ದೇಶಕ್ಕೂ ಸಹ ಬೇಸರ ತಂದೊಡ್ಡಿದೆ. ವೇಗವಾಗಿ ಬೆಳೆಯುತ್ತಿರುವ ನಗರ ಜನಸಂಖ್ಯೆಯೊಂದಿಗೆ ಪಟ್ಟಣದಾದ್ಯಂತ ವಸತಿ ಆಯ್ಕೆಗಳ ಬೇಡಿಕೆ ಏರಿಕೆಯಾಗುತ್ತಲೆಯಿವೆ. ಬೆಂಗಳೂರಿನಲ್ಲೂ ಕೂಡ ಭಾರತದ ಮೆಟ್ರೋಪಾಲಿಟಿನ್ ನಗರಗಳ ರೀತಿಯಲ್ಲಿ ರಿಯಲ್‌ ಎಸ್ಟೇಟ್ ವಲಯದಲ್ಲಿ ಕಾನೂನುಬಾಹಿರ ಕಟ್ಟಡಗಳಿಗೆ ನಿಯಂತ್ರಣತೆಯನ್ನೂ ಮೀರಿ ಬೇಡಿಕೆ ಸೃಷ್ಟಿಯಾಗುತ್ತಿದೆ. ಅನೇಕ ಬಿಲ್ಡರ್‌ಗಳು ತಮ್ಮ ಕಟ್ಟಡಗಳನ್ನು ಕಾನೂನು ನಿಯಮಗಳನ್ನು ಮೀರಿ ನಿರ್ಮಿಸುತ್ತಿದ್ದಾರೆ.

ಮೇಲಿನ ದೃಷ್ಟಿಯನ್ನು ಗಮನಿಸಿಕೊಂಡು, ಕರ್ನಾಟಕ ರಾಜ್ಯ ಸರ್ಕಾರ ಅನಧೀಕೃತ ಕಟ್ಟಡ ಹಾಗೂ ಬಡಾವಣೆಗಳನ್ನು ನಿಯಂತ್ರಿಸಲು ಸಲುವಾಗಿ ಅಕ್ರಮ ಸಕ್ರಮ ಯೋಜನೆಯನ್ನು ಜಾರಿಗೊಳಿಸಿತು. ಈ ಯೋಜನೆಯು ಬೆಂಗಳೂರಿನಲ್ಲಿರುವ ವಸತಿ ಹಾಗೂ ಪ್ಲಾಟ್‌ಗಳ ಮಾಲೀಕರು ತಮ್ಮ ಅನಧೀಕೃತ ಕಟ್ಟಡಗಳನ್ನು ದಂಡ ಪಾವತಿಯೊಂದಿಗೆ ಸಕ್ರಮಗೊಳಿಸಿಕೊಳ್ಳಲು ದಾರಿ ಮಾಡಿಕೊಟ್ಟಿತು. 2013ರಲ್ಲಿ ಅಂಗೀಕಾರವಾಗಿ ಮಾರ್ಚ್‌ 23, 2015 ರಂದು ಜಾರಿಗೊಂಡಿತು. ಸರ್ಕಾರವು ಅಕ್ರಮ ಸಕ್ರಮ ಅರ್ಜಿಗಳನ್ನು ಭರ್ತಿ ಮಾಡಲು ನಾಗರಿಕರಿಗೆ ಒಂದು ವರ್ಷ ಸಮಯವನ್ನು ನಿಗದಿಪಡಿಸಿತು. ಆದಾಗ್ಯೂ, ಈ ಯೋಜನೆ ಜಾರಿಯಿಂದ ಬೆಂಗಳೂರು ನಾಗರಿಕರು ಹಚ್ಚಿನ ಪ್ರತಿಕ್ರಿಯೆ ತೋರಲಿಲ್ಲ.

ನಮ್ಮ ಬೆಂಗಳೂರು ಪ್ರತಿಷ್ಟಾನ ಹಾಗೂ ಇದರ ಸಂಸ್ಥಾಪಕ ಟ್ರಸ್ಟಿಯಾದ ಸಂಸದ ರಾಜೀವ್ ಚಂದ್ರಶೇಖರ್‌ ಅವರು, ಯೋಜನೆಯು ದೋಷಪೂರಿತವಾಗಿದ್ದು, ಸರ್ಕಾರಕ್ಕೆ ಇದರಿಂದ ಭ್ರಷ್ಟಾಚಾರದ ಸಂಸ್ಕೃತಿಯನ್ನು ಪರಿಚಯಿಸಿದಂತಾಗಿದೆ ಎಂದು ನಂಬಿದಾರೆ. ಈ ಯೋಜನೆಯಿಂದ ಬಿಲ್ಡರ್‌ಗಳಿಗೆ ಕೊಳ್ಳೆ ಹೊಡೆಯುವ ಸಂಸ್ಕೃತಿಗೆ ದಾರಿ ಮಾಡಿಕೊಟ್ಟಿದ್ದು, ಅವರ ಕಾನೂನುಬಾಹಿರತೆಯಿಂದ ಶ್ರೀಮಂತರು ಮತ್ತು ಪ್ರಬಲರು, ಕಾನೂನಿನಡಿಯಲ್ಲಿ ಶಿಕ್ಷೆ ಅನುಭವಿಸುವ ಬದಲು ಆರ್ಥಿಕವಾಗಿ ಲಾಭ ಪಡೆಯುತ್ತಿದ್ದಾರೆ.

ಮೇಲಿನ ದೃಷ್ಟಿಯಿಂದ, ಎನ್‌ಬಿಎಫ್‌ ಹಾಗೂ ಸಂಸದ ರಾಜೀವ್‌ ಚಂದ್ರಶೇಖರ್‌ ಅವರು ಮೇಲಿನ ಕಾರಣಗಳೊಂದಿಗೆ ಏಪ್ರಿಲ್ 4, 2015 ರಂದು ಕರ್ನಾಟಕ ರಾಜ್ಯ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿದರು:

ಅನಧಿಕೃತ ನಿರ್ಮಾಣದ ಆವರ್ತಕ ಕ್ರಮಬದ್ಧಗೊಳಿಸುವಿಕೆಯು ಜನರನ್ನು ನಿಯಮಗಳನ್ನು ತಪ್ಪಿಸಲು ಪ್ರೇರೇಪಿಸುತ್ತದೆ.

ಯೋಜಿತವಲ್ಲದ ಅಭಿವೃದ್ಧಿಯು ನಗರದ ದಟ್ಟಣೆ ಮತ್ತು ಸಮರ್ಥನೀಯ ಬೆಳವಣಿಗೆಗೆ ಕಾರಣವಾಗುತ್ತದೆ.

ಅಸ್ತಿತ್ವದಲ್ಲಿರುವ ಕಾನೂನುಗಳನ್ನು ಉಲ್ಲಂಘಿಸಿ ಕಟ್ಟಡಗಳನ್ನು ನಿರ್ಮಾಣವನ್ನು ಮಾಡಿದ ಬಿಲ್ಡರ್‌ಗಳಿಗೆ ಈ ಯೋಜನೆ ದಂಡ ವಿಧಿಸುವುದಿಲ್ಲ

ಪ್ರತಿವಾದಿಗಳು

ಕರ್ನಾಟಕ ಸರ್ಕಾರ

ನಗರಾಭಿವೃದ್ಧಿ ಇಲಾಖೆ

ಪಟ್ಟಣ ಮತ್ತು ದೇಶ ಯೋಜನಾ ನಿರ್ದೇಶನಾಲಯ

ಅರ್ಜಿಯಲ್ಲಿ ಕೋರಿದ್ದೇನೆಂದರೆ,

  • ಕರ್ನಾಟಕ ಟೌನ್ ಆಂಡ್ ಕಂಟ್ರಿ ಪ್ಲ್ಯಾನಿಂಗ್(ರೆಗ್ಯುಲರೈಸೇಷನ್ ಆಫ್ ಅನ್ಆಥರೈಸ್ಡ್ ಡೆವಲಪ್ಮೆಂಟ್ ಆರ್ ಕನ್ಟ್ರಕ್ಷನ್ಸ್)ನಿಯಮಗಳು 2014, ಸಂವಿಧಾನದ ವಿಧಿ 14 ಹಾಗೂ 21ನ್ನು ಉಲ್ಲಂಘಿಸುವುದರಿಂದ, ಅದನ್ನು ಬದಿಗಿರಿಸಬೇಕು
  • ಕರ್ನಾಟಕ ಟೌನ್ ಆಂಡ್ ಕಂಟ್ರಿ ಪ್ಲ್ಯಾನಿಂಗ್ ಹಾಗೂ ಕೆಲವು ಇನ್ನಿತರ ಕಾನೂನುಗಳು(ತಿದ್ದುಪಡಿ) ಕಾಯಿದೆ, 2013 ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ಬದಿಗಿರಿಸಬೇಕು
  • ಕರ್ನಾಟಕ ಟೌನ್ ಆಂಡ್ ಕಂಟ್ರಿ ಪ್ಲ್ಯಾನಿಂಗ್ ಹಾಗೂ ಕೆಲವು ಇನ್ನಿತರ ಕಾನೂನುಗಳು(ತಿದ್ದುಪಡಿ) ಕಾಯಿದೆ, 2009, ದಿನಾಂಕ ಆಗಸ್ಟ್ 27,2013, ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ಬದಿಗಿರಿಸಬೇಕು
  • ಕರ್ನಾಟಕ ಟೌನ್ ಆಂಡ್ ಕಂಟ್ರಿ ಪ್ಲ್ಯಾನಿಂಗ್ ಹಾಗೂ ಕೆಲವು ಇನ್ನಿತರ ಕಾನೂನುಗಳು(ತಿದ್ದುಪಡಿ) ಕಾಯಿದೆ, 2004, ದಿನಾಂಕ ಫೆಬ್ರವರಿ 6,2007, ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ ಅದನ್ನು ಬದಿಗಿರಿಸಬೇಕು
  • ಪ್ರಕರಣದ ಸನ್ನಿವೇಶ ಹಾಗೂ ವಾಸ್ತವಾಂಶಗಳನ್ನು ಪರಿಗಣಿಸಿ, ಇನ್ನಿತರ ಆದೇಶಗಳನ್ನು ಹಾಗೂ ಹೆಚ್ಚುವರಿ ಆದೇಶಗಳನ್ನು ನೀಡಬೇಕು.

ಸ್ಥಿತಿಗತಿ

ಸುಪ್ರೀಂ ಕೋರ್ಟ್ ಜನವರಿ 13, 2017 ರಂದು ಅರ್ಜಿಯನ್ನು ಸ್ವೀಕರಿಸಿ ಕರ್ನಾಟಕ ರಾಜ್ಯ ಹೈಕೋರ್ಟ್ ಡಿಸೆಂಬರ್ 13, 2016 ರಂದು ಯೋಜನೆಯ ಪರವಾಗಿ ನೀಡಿದ ತೀರ್ಪನ್ನು ಎತ್ತಿ ಹಿಡಿಯಿತು. ಅಕ್ರಮ ಸಕ್ರಮ ಯೋಜನೆಯಡಿ ಯಾವುದೇ ಅರ್ಜಿಗಳನ್ನು ಸ್ವೀಕರಿಸದಂತೆ ಗೌರವಾನ್ವಿಯ ನ್ಯಾಯಾಲಯ ಮಧ್ಯಾಂತರ ರಕ್ಷಣೆ ನೀಡಿದಲ್ಲದೆ, ಮೇಲ್ಮನವಿಯನ್ನು ಆಲಿಸುವವರೆಗೆ ಯೋಜನೆಯ ಕಾರ್ಯಾಚರಣೆಯಲ್ಲಿ ಸಂಪೂರ್ಣ ತಡೆಹಿಡಿಯುತು. ಅಲ್ಲದೆ ವಿಚಾರಣೆಯನ್ನು ತ್ವರಿತಗೊಳಿಸಲು ರಾಜ್ಯ ಸರ್ಕಾರ ಮನವಿ ಮಾಡಿದ ಕೇವಿಯೇಟ್ ಅರ್ಜಿಯನ್ನು ಸ್ವೀಕರಿಸಲು ಪೀಠವು ನಿರಾಕರಿಸಿತು. ಎಸ್‌ಎಲ್‌ಪಿಯನ್ನು ಸಿವಿಲ್ ಮೇಲ್ಮನವಿಯಾಗಿ ಪರಿವರ್ತಿಸಲಾಗಿದೆ ಮತ್ತು ಸಮಯಕ್ಕೆ ಸರಿಯಾಗಿ ವಿಚಾರಣೆ ನಡೆಯಲಿದೆ.

Post a comment