nbf@namma-bengaluru.org
9591143888

ನಮ್ಮ ಬೆಂಗಳೂರನ್ನು ರಕ್ಷಿಸಿ

Vimove ಫೌಂಡೇಶನ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನ

Vimove ಫೌಂಡೇಶನ್ ನಮ್ಮ ಬೆಂಗಳೂರು ಫೌಂಡೇಶನ್ ಮತ್ತು ಇತರ ಸಮುದಾಯ ಪಾಲುದಾರರ ಸಹಯೋಗದೊಂದಿಗೆ ಹಸಿರು ಮತ್ತು ಸ್ವಚ್ಛ ಬೆಂಗಳೂರಿಗಾಗಿ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸುತ್ತಿರುವ 5 ಜನ ತೆರೆಯ ಹಿಂದೆ ಕೆಲಸಮಾಡುವ ವೀರರನ್ನು ಗುರುತಿಸಿದೆ. ಬೆಂಗಳೂರಿನ ಗುಬ್ಬಚ್ಚಿ ಮನುಷ್ಯ ಎಡ್ವಿನ್ ಜೋಸೆಫ್, ಪ್ಲೋಗ್‌ಮ್ಯಾನ್ ಸಿ ನಾಗರಾಜ್, ಪ್ರಾಣಿ ರಕ್ಷಕ ರಚನಾ ರವಿಕುಮಾರ್, ಪರ್ಮಾಕ್ಯೂರಿಸ್ಟ್ ರಕ್ಷಿತ್ ಪವಾರ್ ಮತ್ತು ಉದ್ಯಮಿ ಹರ್ಷಿತ್ ರೆಡ್ಡಿ ಅವರ ಸ್ಪೂರ್ತಿದಾಯಕ ಕಥೆಗಳು ಸುಸ್ಥಿರತೆಯತ್ತ ಸಣ್ಣ ಹೆಜ್ಜೆಗಳನ್ನು ಇಡುವಂತೆ…...

Read more

HP ಸಹಯೋಗದೊಂದಿಗೆ ವಿಶ್ವ ಪರಿಸರ ದಿನ

ನಮ್ಮ ಬೆಂಗಳೂರು ಫೌಂಡೇಶನ್ ಹಾಗು HP ಸಹಯೋಗದೊಂದಿಗೆ ಲಾಲ್‌ಬಾಗ್ ಬೊಟಾನಿಕಲ್ ಗಾರ್ಡನ್‌ನಲ್ಲಿ ಕ್ಲೆಂಥಾ ಕ್ಲೀನ್ ಥಾನ್ ಅನ್ನು ಆಯೋಜಿಸಲಾಗಿತ್ತು. HP ಯ 300 ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಸುತ್ತಮುತ್ತಲಿನ......

Read more

BMW- Deutsche Motoren, ವೈಟ್‌ಫೀಲ್ಡ್ ಸಹಯೋಗದೊಂದಿಗೆ ವಿಶ್ವ ಪರಿಸರ ದಿನ

ನಮ್ಮ ಬೆಂಗಳೂರು ಫೌಂಡೇಶನ್ BMW- ಡಾಯ್ಚ ಮೋಟೋರೆನ್, ವೈಟ್‌ಫೀಲ್ಡ್ ಸಹಯೋಗದೊಂದಿಗೆ ವಿಶ್ವ ಬೈಸಿಕಲ್ ದಿನ ಮತ್ತು ವಿಶ್ವ ಪರಿಸರ ದಿನವನ್ನು ಆಚರಿಸಲು ಸೈಕ್ಲೋಥಾನ್ ಮತ್ತು ಕ್ಲೀನ್‌ಥಾನ್ ಅನ್ನು ಆಯೋಜಿಸಿತು. ಚಾಲನೆಯಲ್ಲಿ BMW ಮಾಲೀಕರು, BMW ಕ್ಲಬ್ ಸದಸ್ಯರು ಮತ್ತು ಸ್ಥಳೀಯ RWA-ವರ್ತೂರ್ ರೈಸಿಂಗ್ ಸದಸ್ಯರು ಭಾಗವಹಿಸಿದ್ದರು. 30 ಕ್ಕೂ ಹೆಚ್ಚು ಸೈಕ್ಲಿಸ್ಟ್‌ಗಳು BMW ಡಾಯ್ಚ ಮೋಟೋರೆನ್ ಶೋರೂಮ್‌ನಿಂದ ವರ್ತೂರ್‌ಗೆ ಸೈಕಲ್ ತುಳಿದು ವರ್ತೂರು ಗ್ರಾಮದ ಬೀದಿಗಳನ್ನು ಸ್ವಚ್ಛಗೊಳಿಸಲು ಸ್ಥಳೀಯ ನಿವಾಸಿಗಳೊಂದಿಗೆ…...

Read more

KHT Prime Jeep, Indigo Music.com ಮತ್ತು ಬೆಂಗಳೂರು ಜೀಪ್ ಕ್ಲಬ್ ಸಹಯೋಗದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ , ೨೬ನೇ ಫೆಬ್ರವರಿ ೨೦೨೨ ಶನಿವಾರದಂದು ಜೀಪ್ ಕಾರುಗಳು ಮತ್ತು ಜೀಪ್ ಮಾಲೀಕರೊಂದಿಗೆ ರಸ್ತೆ ಸುರಕ್ಷತೆ ಜಾಗೃತಿ ರ‍್ಯಾಲಿ ಯನ್ನು ಆಯೋಜಿಸಿತ್ತು.

ದೊಮ್ಮಲೂರು ಒಳವರ್ತುಲ ರಸ್ತೆಯಲ್ಲಿ ಚಾಲನೆ ನೀಡಿದ ೧೫ ಜೀಪ್ ಕಾರುಗಳ ರ‍್ಯಾಲಿ ಯಲ್ಲಿ ಬೆಂಗಳೂರಿನ ಪ್ರಯಾಣಿಕರಿಗೆ, ದಾರಿಹೋಕರಿಗೆ ಮತ್ತು ನಾಗರಿಕರಿಗೆ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತೆಯ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು....

Read more

ಬನ್ನೇರುಘಟ್ಟ ಉಳಿಸಿ ಅಭಿಯಾನ

ನಮ್ಮ ಬೆಂಗಳೂರು ಪ್ರತಿಷ್ಠಾನವು ಪ್ರಾಜೆಕ್ಟ್ ವೃಕ್ಷ ಪ್ರತಿಷ್ಠಾನದೊಂದಿಗೆ ಸೇರಿ, ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರು ಮತ್ತು ಜಿಲ್ಲಾಧಿಕಾರಿಯವರಾದ ಶ್ರೀ ಮಂಜುನಾಥ್ ಅವರನ್ನು ಭೇಟಿಯಾಗಿ, ಅರಣ್ಯ ಇಲಾಖೆಯ ಒಡೆತನದಲ್ಲಿರುವ ಭೂಮಿಯನ್ನು ಕಂದಾಯ ಭೂಮಿಯಾಗಿ ಮಾರ್ಪಾಟು ಮಾಡುವುದನ್ನು ವಿರೋಧಿಸಿ ಮನವಿಪತ್ರವನ್ನು ಸಲ್ಲಿಸಿತು. ಜೊತೆಗೆ, ತಪ್ಪು ಮಾಡಿರುವಂಥ ಎಲ್ಲ ಕಂದಾಯ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ್ದಲ್ಲದೇ, ಆ ಭೂಮಿಯ ಒಡೆತನದ ಹಕ್ಕನ್ನು ಅರಣ್ಯ ಇಲಾಖೆಗೆ ಮರಳಿ ನೀಡಬೇಕು ಮತ್ತು ಆ ಮೂಲಕ ಬನ್ನೇರುಘಟ್ಟ…...

Read more

ರಸ್ತೆ ಸಂಚಾರ ಚಿಹ್ನೆಗಳ ಜಾಗೃತಿ ಸಮೀಕ್ಷೆ ಅಭಿಯಾನ.

ನಮ್ಮ ಬೆಂಗಳೂರು ಫೌಂಡೇಶನ್ ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ 28 ಮೇ 2022 ರಂದು ಬ್ರಿಗೇಡ್ ರಸ್ತೆಯಲ್ಲಿ ಬೆಂಗಳೂರಿನ ನಾಗರಿಕರಲ್ಲಿ ರಸ್ತೆ ಚಿಹ್ನೆಗಳ ಜಾಗೃತಿ  ಸಮೀಕ್ಷೆಯನ್ನು ನಡೆಸಿತು. ರಸ್ತೆ ಚಿಹ್ನೆಗಳು ಮತ್ತು ಸಂಚಾರ ನಿಯಮಗಳ ಬಗ್ಗೆ ಅವರ ಜ್ಞಾನವನ್ನು ನಿರ್ಣಯಿಸಲು ಸಮೀಕ್ಷೆಯನ್ನು ನಡೆಸಲಾಯಿತು....

Read more

ನೀರನ್ನು ಉಳಿಸಿ, ಜೀವಗಳನ್ನು ಉಳಿಸಿ ಅಭಿಯಾನ

ನಮ್ಮ ಬೆಂಗಳೂರು ಪ್ರತಿಷ್ಠಾನ ಆದರ್ಶ ವಿಸ್ಟಾ ವಿಲ್ಲಾ ನಿವಾಸಿಗಳು, ರೋಟರಿ ಇಕನೆಕ್ಟ್ ಮತ್ತು ರೋಟರಿ ಇಂಟರಾಕ್ಟ್ ಸಹಯೋಗದಲ್ಲಿ ದೊಡ್ಡನೆಕುಂದಿ ಕೆರೆಯಲ್ಲಿ ೩೦ ಏಪ್ರಿಲ್ ೨೦೨೨ ರಂದು ಪ್ಲಾಗಿಂಗ್ ಮತ್ತು ಪಕ್ಷಿಗಳಿಗೆ ಶುದ್ಧ ಕುಡಿಯುವ ನೀರಿನ ವಿತರಣಾ ಅಭಿಯಾನವನ್ನು ನಡೆಸಿತು. ೫೦ಕ್ಕೂ ಹೆಚ್ಚು ಸ್ವಯಂಸೇವಕರು ಕೆರೆಯಲ್ಲಿ ಜಮಾಯಿಸಿ ಕೆರೆ ಆವರಣದಲ್ಲಿರುವ ಕಸವನ್ನು ತೆರವುಗೊಳಿಸಿದರು. ಸ್ವಯಂಸೇವಕರಿಗೆ ಬಿದಿರಿನ ನೀರಿನ ಫೀಡರ್‌ಗಳನ್ನು ವಿತರಿಸಲಾಯಿತು ಮತ್ತು ಬೇಸಿಗೆಯಲ್ಲಿ ಪಕ್ಷಿಗಳು ಮತ್ತು ಬೀದಿ ಪ್ರಾಣಿಗಳಿಗೆ ಶುದ್ಧ ಕುಡಿಯುವ…...

Read more

ಭೂಮಿ ಉಳಿಸಿ, ನಮ್ಮ ಭವಿಷ್ಯ ಉಳಿಸಿ- ಭೂ ದಿನದ ಅಭಿಯಾನ

ಭೂ ದಿನ ೨೦೨೨ರ ಅಂಗವಾಗಿ, ನಮ್ಮ ಬೆಂಗಳೂರು ಪ್ರತಿಷ್ಠಾನವು ಮೌಂಟ್ ಕಾರ್ಮೆಲ್ ಸ್ವಾಯತ್ತ ಕಾಲೇಜಿನ ಸಹಯೋಗದಲ್ಲಿ ೨೦೨೨ರ ಏಪ್ರಿಲ್ ೨೨ರಂದು ಬಾಳೆಕುಂದ್ರಿ ವೃತ್ತದ ಇಂಡಿಯನ್ ಎಕ್ಸ್‌ಪ್ರೆಸ್ ಜಂಕ್ಷನ್‌ನಲ್ಲಿ “ಭೂಮಿ ಉಳಿಸಿ, ನಮ್ಮ ಭವಿಷ್ಯವನ್ನು ಉಳಿಸಿ” ಅಭಿಯಾನವನ್ನು ಆಯೋಜಿಸಿತು.  ‘ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ’ ಎಂಬ ಈ ವರ್ಷದ ಭೂ ದಿನದ ಥೀಮ್‌ನೊಂದಿಗೆ, ೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳು ಈ ಅಭಿಯಾನದಲ್ಲಿ ಭಾಗಿಯಾಗಿ, ಭೂಮಿತಾಯಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ, ಭೂಗ್ರಹದ…...

Read more

ನೀರನ್ನು ಉಳಿಸಿ, ಜೀವಗಳನ್ನು ಉಳಿಸಿ ಅಭಿಯಾನ

ನಮ್ಮ ಬೆಂಗಳೂರು ಪ್ರತಿಷ್ಠಾನ ದೊಮ್ಮಲೂರು ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ೧೬ನೇ ಏಪ್ರಿಲ್ ೨೦೨೨ ರಂದು ದೊಮ್ಮಲೂರಿನಲ್ಲಿ “ಜಲ ಉಳಿಸಿ, ಜೀವ ಉಳಿಸಿ” ಅಭಿಯಾನವನ್ನು ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ ಜಲ ಸಂರಕ್ಷಣೆ ಹಾಗೂ ಪ್ರಾಣಿ, ಪಕ್ಷಿಗಳಿಗೆ ನೀರು ಒದಗಿಸುವ ಮಹತ್ವದ ಕುರಿತು ಜಾಗೃತಿ ಮೂಡಿಸಲಾಯಿತು....

Read more

ನೀರನ್ನು ಉಳಿಸಿ, ಜೀವಗಳನ್ನು ಉಳಿಸಿ – ವಿಶ್ವ ಜಲ ದಿನದ ಅಭಿಯಾನ

ಶ್ವ ಜಲ ದಿನದ ಸಂದರ್ಭದಲ್ಲಿ, ನಮ್ಮ ಬೆಂಗಳೂರು ಪ್ರತಿಷ್ಠಾನ ರೋಟರಿ ಕ್ಲಬ್ ಆಫ್ ಬೆಂಗಳೂರು-ಕಂಟೋನ್ಮೆಂಟ್, ಹಲಸೂರು ನಿವಾಸಿ ಕಲ್ಯಾಣ ಸಂಘ ಮತ್ತು ಪ್ರಾಜೆಕ್ಟ್ ವೃಕ್ಷ ಫೌಂಡೇಶನ್ ಸಹಯೋಗದಲ್ಲಿ ೨೨ ಮಾರ್ಚ್ ೨೦೨೨ ರಂದು ಹಲಸೂರು ಕೆರೆಯಲ್ಲಿ “ನೀರು ಉಳಿಸಿ, ಜೀವ ಉಳಿಸಿ” ಎಂಬ ಅಭಿಯಾನವನ್ನು ಆಯೋಜಿಸಿದೆ.  ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಸದಸ್ಯರು, ನಿವಾಸಿ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಹಾಗೂ ಪಾದಚಾರಿಗಳು ಭಾಗವಹಿಸಿದ್ದರು. ಕಾರ್ಯಕ್ರಮದ ಅಂಗವಾಗಿ ಜಲ ಸಂರಕ್ಷಣೆ ಹಾಗೂ ಪ್ರಾಣಿ,…...

Read more