ನಮ್ಮ ಬೆಂಗಳೂರು ಪ್ರತಿಷ್ಠಾನವು ಪ್ರಾಜೆಕ್ಟ್ ವೃಕ್ಷ ಪ್ರತಿಷ್ಠಾನದೊಂದಿಗೆ ಸೇರಿ, ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರು ಮತ್ತು ಜಿಲ್ಲಾಧಿಕಾರಿಯವರಾದ ಶ್ರೀ ಮಂಜುನಾಥ್ ಅವರನ್ನು ಭೇಟಿಯಾಗಿ, ಅರಣ್ಯ ಇಲಾಖೆಯ ಒಡೆತನದಲ್ಲಿರುವ ಭೂಮಿಯನ್ನು ಕಂದಾಯ ಭೂಮಿಯಾಗಿ ಮಾರ್ಪಾಟು ಮಾಡುವುದನ್ನು ವಿರೋಧಿಸಿ ಮನವಿಪತ್ರವನ್ನು ಸಲ್ಲಿಸಿತು. ಜೊತೆಗೆ, ತಪ್ಪು ಮಾಡಿರುವಂಥ ಎಲ್ಲ ಕಂದಾಯ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ್ದಲ್ಲದೇ, ಆ ಭೂಮಿಯ ಒಡೆತನದ ಹಕ್ಕನ್ನು ಅರಣ್ಯ ಇಲಾಖೆಗೆ ಮರಳಿ ನೀಡಬೇಕು ಮತ್ತು ಆ ಮೂಲಕ ಬನ್ನೇರುಘಟ್ಟ…...
ಸಿಂಗನಾಯಕನಹಳ್ಳಿ ಕೆರೆಯ ಪುನರುಜ್ಜೀವನಕ್ಕೆ ಕೊಡಲಿಯೇಟು ನೀಡಬೇಡಿ
ಸಿಂಗನಾಯಕನಹಳ್ಳಿ ಕೆರೆಯ ದಡದಲ್ಲಿ ದೊಡ್ಡದಾಗಿ ಬೆಳೆದುನಿಂತಿರುವ ೬,೩೧೬ ಮರಗಳನ್ನು ಕಡಿಯುವ ಮೂಲಕ ಆ ಕೆರೆಯನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಇತರೆ ಹಲವು ಕೆರೆಗಳಿಗೆ ಫೀಡರ್ ಕೆರೆಯಾಗಿ ಅಭಿವೃದ್ಧಿಪಡಿಸುವುದಾಗಿ ಮತ್ತು ನೀರಾವರಿಗೆ ಇವುಗಳ ಸಂಸ್ಕರಿತ ನೀರನ್ನು ಬೆಳೆಸಲು ನಿರ್ಧರಿಸಿರುವುದಾಗಿ ಕರ್ನಾಟಕ ಸರ್ಕಾರ ಇತ್ತೀಚೆಗೆ ಘೋಷಿಸಿದೆ. ಸಾರ್ವಜನಿಕ ಸಮಾಲೋಚನೆಗೆ ಸಾಕಷ್ಟು ಸಮಯಾವಕಾಶವನ್ನು ನೀಡದೆಯೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದಕ್ಕೆ ಪ್ರತಿಯಾಗಿ, ನಮ್ಮ ಬೆಂಗಳೂರು ಪ್ರತಿಷ್ಠಾನದ ನೇತೃತ್ವದಲ್ಲಿ ನಗರ ಸಂರಕ್ಷಕರು, ನಾಗರಿಕ ವಿಜ್ಞಾನಿಗಳು, ಕಲಾವಿದರು,…...