ಬೆಂಗಳೂರಿನ ಒಳಗೆ ಹಾಗೂ ಹೊರಗೆ ಕಳೆದ ಶತಮಾನದ ಅವಧಿಯಲ್ಲಿ ನೀರಾವರಿಗೆಂದು ನಿರ್ಮಿಸಿದ ನೂರಾರು ಮನುಷ್ಯ ನಿರ್ಮಿತ ಕೆರೆಗಳಿದ್ದವು. ಇವುಗಳು ಕುಡಿಯುವ ನೀರು, ಬಟ್ಟೆ ಒಗೆಯಲು, ಮೀನುಗಾರಿಕೆ ಹಾಗೂ ಹಲವು ಜಲ ಪ್ರಭೇದಗಳ ಪ್ರಮುಖ ಮೂಲಗಳಾಗಿದ್ದವು. ನಗರ ಬೆಳೆದಂತೆ ಕೃಷಿ ಭೂಮಿಗಳು ಕಟ್ಟಡಗಳಾಗಿ ಬದಲಾದವು ಮತ್ತು ನೀರಾವರಿ ಮೂಲಗಳಾಗಿ ಕೆರೆಗಳ ಪ್ರಾಮುಖ್ಯತೆ ಕುಸಿಯಿತು. ಕೆಲವು ಸಾಂಪ್ರದಾಯಿಕ ಬಳಕೆಗಳು ಅಂದರೆ, ವಸ್ತ್ರ ತೊಳೆಯುವಿಕೆ, ಮೀನುಗಾರಿಕೆ ಮತ್ತು ಜೊಂಡಿನ ಸಂಗ್ರಹ ಮುಂದುವರಿದರೂ, ನಗರೀಕರಣದ ಪರಿಸ್ಥಿತಿಯಲ್ಲಿ…...
ಬೆಳ್ಳಂದೂರು ಉಳಿಸಿ ಕ್ರಿಯಾಯೋಜನೆ
ಬೆಳ್ಳಂದೂರು ಕೆರೆಯ ನಾಶ ನಮ್ಮಗಳ ಬೆಂಗಳೂರಿನ ದುರ್ಬಳಕೆಯ ಉತ್ತಮ ಉದಾಹರಣೆ. ಸರ್ಕಾರ, ನಾಗರಿಕರು ಹಾಗೂ ನಾಗರಿಕ ಸಮಾಜ ಒಟ್ಟಾಗಿ ಇಂಥ ವಾಸ್ತವಿಕ ಸವಾಲುಗಳನ್ನು ಎದುರಿಸುವುದರಲ್ಲಿ ಹಾಗೂ ನಿರ್ಲಕ್ಷ್ಯ, ಭ್ರಷ್ಟಾಚಾರ ಮತ್ತು ಯೋಜಿತವಲ್ಲದ ಅಭಿವೃದ್ಧಿಯನ್ನು ತಡೆಯಲು ಜನ ಒಟ್ಟಾಗುವುದರಲ್ಲಿ ನಗರದ ಭವಿಷ್ಯ ಇದೆ. ನಮ್ಮ ಬೆಂಗಳೂರು ಪ್ರತಿಷ್ಠಾನದ ಆಶ್ರಯದಲ್ಲಿ ನಾಗರಿಕರು, ತಜ್ಞರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಂಯೋಜಿತ ಹಾಗೂ ಶ್ರಮದಾಯಕ ಸಂಯೋಜಿತ ಪ್ರಯತ್ನವೇ ಬೆಳ್ಳಂದೂರು ರಕ್ಷಿಸಿ ಕ್ರಿಯಾಯೋಜನೆ. ಈ ಪ್ರಯತ್ನದಲ್ಲಿ…...
ಬೆಂಗಳೂರಿನಲ್ಲಿ ಕೆರೆಗಳ ಒತ್ತುವರಿಯ ಸಮೀಕ್ಷೆ
ಡಿಸೆಂಬರ್ 31, 2013ರಂದು ನಡೆದ ಭೂಮಿ ಒತ್ತುವರಿ ಸಮಿತಿಯ ಸಭೆಯ ನಿರ್ದೇಶನದಂತೆ ನಮ್ಮ ಬೆಂಗಳೂರು ಪ್ರತಿಷ್ಠಾನ ನಡೆಸಿದ ಪರಿಶೀಲನೆ ಭೇಟಿಗಳ ಮೂಲಕ ಕೆಳಗಿನ ದಾಖಲೆಯನ್ನು ಸಿದ್ಧಗೊಳಿಸಲಾಗಿದೆ. ಅಧಿಕಾರಿ ಶ್ರೀ ಕೇಶವಮೂರ್ತಿ ಅವರೊಂದಿಗೆ ಬಿಬಿಎಂಪಿ ಸ್ವಾಧೀನದಲ್ಲಿರುವ 13 ಕೆರೆಗಳನ್ನು ಪರಿಶೀಲಿಸಲಾಯಿತು. ಬಿಬಿಎಂಪಿಯ ಪರಿಸರ ಕೋಶದ ಮುಖ್ಯ ಎಂಜಿನಿಯರ್ ಶ್ರೀ ಬಿ.ವಿ.ಸತೀಶ್ ಅವರ ಮಾರ್ಗದರ್ಶನ ಹಾಗೂ ನೀಡಿದ ಮಾಹಿತಿಯನ್ನು ಆಧರಿಸಿ ಕೆರೆಗಳಿಗೆ ಭೇಟಿ ನೀಡಿದೆವು. Read Full Report Here...