ಸಮರ್ಪಕ ಯೋಜಿತ ಮತ್ತು ಉತ್ತಮ ಆಡಳಿತದಿಂದ ಪ್ರಗತಿ ಹೊಂದುವ ನಗರವನ್ನಾಗಿ ರೂಪಿಸಲು ನಮ್ಮ ಬೆಂಗಳೂರು ಫೌಂಡೇಶನ್ (ಎನ್ ಬಿ ಎಫ್) ತನ್ನ ಸಹಭಾಗಿತ್ವ ನಾಗರಿಕರು, ನಾಗರಿಕ ಸಂಘ ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು, ಗ್ರಾಮೀಣಾಭಿವೃದ್ಧಿ ಸಂಘ ಸಂಸ್ಥೆಗಳು ಹಾಗೂ ಇನ್ನಿತರ ಹೂಡಿಕೆದಾರರೊಂದಿಗೆ ಸೇರಿ ಕಾರ್ಯಪ್ರವೃತ್ತವಾಗಿದೆ.

MISSION

ಸರ್ಕಾರಿ ಕಾರ್ಯವೈಖರಿಗಳಲ್ಲಿ ಕಂಡು ಬರುವ ಲೋಪದೋಷಗಳು, ಯೋಜನೆ ರೂಪಿಸುವಲ್ಲಿ ಆಗುವ ತೊಡಕುಗಳು, ಕಟ್ಟಡ ಕಾಮಗಾರಿಗಳಲ್ಲಾಗುವ ಕಲಪೆ ಕಾರ್ಯಗಳು, ಆಡಳಿತ ನಿರ್ವಹಣೆಯಲ್ಲಿರುವ ಪ್ರಮಾದಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ನೈಜ ಕಾಳಜಿಯುಳ್ಳ ವ್ಯಕ್ತಿಗಳನ್ನು ಒಟ್ಟುಸೇರಿಸಿ ಅವರಿಗೆ ಉತ್ತಮ ವೇದಿಕೆ ಕಲ್ಪಿಸುವುದು ನಮ್ಮ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಕಟಿಬದ್ಧ ಪ್ರೋತ್ಸಾಹ, ಸೃಜನಶೀಲಾತ್ಮಕ ಪಾಲುದಾರಿಕೆ ಮತ್ತು ವ್ಯವಸ್ಥಿತ ಆಂದೋಲನಗಳನ್ನು ರೂಪಿಸುವುದು ನಮ್ಮ ದ್ಯೇಯವಾಗಿದೆ.

VISION

ನಾಗರಿಕರೆಲ್ಲರೂ ಒಟ್ಟಾಗಿ ಸೇರಿ ನೈಜ ಸಾಮಾಜಿಕ ಬದಲಾವಣೆಗೆ ಮುಂದಾಗಬೇಕಾಗಿದೆ ಎಂದು ನಮ್ಮ ಬೆಂಗಳೂರು ಫೌಂಡೇಶನ್ ಬಯಸುತ್ತದೆ.

ಮೌಲ್ಯಗಳು

ನಮ್ಮ ಪ್ರತೀಯೊಂದು ಕಾರ್ಯಗಳಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವುದು, ಸ್ಥಿರತೆಯನ್ನು ಕಾಪಾಡಿಕೊಳ್ಳುವುದು, ವಿವಿಧ ಜನಾಂಗೀಯರನ್ನು ಪಕ್ಷಬೇಧ ಮರೆತು ಒಳಗೂಡಿಸಿಕೊಳ್ಳುವುದು ಹಾಗೆಯೇ ಪರಸ್ಪರ ಸಂತೋಷ ನೆಮ್ಮದಿಯ ವಾತಾವರಣವನ್ನು ನಿರ್ಮಿಸಿ, ಬೆಂಗಳೂರನ್ನು ವಿಶ್ವಮಾನ್ಯ ನಗರವನ್ನಾಗಿ ಅಭಿವೃದ್ಧಿಪಡಿಸಲು ಎಲ್ಲರೂ ತಮ್ಮ ತಮ್ಮ ಕೆಲಸಗಳನ್ನು ಬದ್ಧತೆಯಿಂದ ನಿರ್ವಹಿಸುವಂತೆ ಮಾರ್ಪಡಿಸಿ ಮಾದರಿಯಾಗುವುದು.

Donate Now

ನಿಮ್ಮಅಳಿಲುಸೇವೆಯಿಂದಲೇ ಆರಂಭವಾಗಲಿ ಜಗತ್ತಿಗೆ ಕೊಡುಗೆ ನೀಡುವ ಕಾರ್ಯ. ಕನಿಷ್ಟ ಕೊಡುಗೆ ನಿಧಿ ನೀಡಿ.