Lorem ipsum dolor sit amet, consectetur adipiscing elit. Nulla convallis egestas rhoncus. Donec facilisis fermentum sem, ac viverra ante luctus vel.
Donec vel mauris quam. Lorem ipsum dolor sit amet, consectetur adipiscing elit. Nulla convallis egestas rhoncus. Donec facilisis fermentum sem, ac viverra ante luctus vel. Donec vel mauris quam. Lorem ipsum dolor sit amet, consectetur adipiscing elit. Nulla convallis egestas rhoncus. Donec facilisis fermentum sem, ac viverra ante luctus vel.
There are multiple ways you can help others to change their lives
- Start a workplace campaign
- Youth involvement
- Become a Volunteer
- Become a partner
- Representative Program
Download our Annual Report 2016
Some of the success stories
ಎನ್ಬಿಎಫ್ ನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ
ಕಳೆದ ಆರು ವರ್ಷಗಳಿಂದ ನಮ್ಮ ಬೆಂಗಳೂರು ಫೌಂಡೇಶನ್ (ಎನ್ಬಿಎಫ್)ನ ಭಾಗವಾಗಿರುವ ನಾನು, ಎನ್ಬಿಎಫ್’ನ ಅಂಗ ಸಂಸ್ಥೆಯಾದ ಬೆಂಗಳೂರು ನಿವಾಸಿಗಳ ಶ್ರೇಯೋಭಿವೃದ್ಧಿ ಸಂಸ್ಥೆ ಬ್ರೇಸ್’ನ ಸದಸ್ಯನಾಗಿದ್ದೇನೆಯಲ್ಲದೆ, ಯುನೈಟೈಡ್ ಬೆಂಗಳೂರು ಅಭಿಯಾನದ ಕಾರ್ಯಕರ್ತನಾಗಿ ಸೇವೆಸಲ್ಲಿಸಿರುವ ತೃಪ್ತಿ ನನಗಿದೆ. ಬೆಂಗಳೂರಿನ ಗತ ವೈಭವವನ್ನು ಮತ್ತೆ ರೂಪಿಸುವಲ್ಲಿ ಎನ್ಬಿಎಫ್ ಅವಿರತ ಪ್ರಯತ್ನಗಳನ್ನು ಮಾಡುತ್ತಿದೆ. ಎನ್ಬಿಎಫ್’ನ ಸಮರ್ಪಕವಾದ ಯೋಜನೆ ಹಾಗೂ ಕೈ ಹಿಡಿದ ಕೆಲಸವನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ಪ್ರಯತ್ನಗಳಾದ, ಕೆರೆಗಳನ್ನು ಸಂರಕ್ಷಿಸಿ ಪುನರುಜ್ಜೀವನಗೊಳಿಸುವುದು, ಸ್ಟೀಲ್ ಬ್ರಿಡ್ಜ್ ಯೋಜನೆಗೆ ತಡೆ, ಬೆಳ್ಳಂದೂರು ಕೆರೆಯನ್ನು ಕಲುಷಿತದಿಂದ ರಕ್ಷಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿದ್ದು, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯನ್ನು ರಾಜ್ಯಸರ್ಕಾರದ ಕಪಿಮುಷ್ಠಿಯಿಂದ ಹೊರಗಿಡಲು ಸಂವಿಧಾನದ 74ನೇ ತಿದ್ದುಪಡಿಯ ಮೂಲಕ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರ ಪ್ರಾಪ್ತವಾಗುವಂತೆ ಕಾನೂನಾತ್ಮಕ ಹೋರಾಟ ಮಾಡಿದ್ದು, ಬನ್ನೇರುಘಟ್ಟ ಹಸಿರು ವಲಯವನ್ನು ಸಂರಕ್ಷಿಸಿದ್ದು, ಬೆಂಗಳೂರಿನಲ್ಲಿರುವ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಅಭಿನಂದಿಸುತ್ತಿರುವುದು, ಮುಂತಾದವೆಲ್ಲವೂ ಬೆಂಗಳೂರು ನಗರಕ್ಕೆ ಎನ್ಬಿಎಫ್ ನೀಡಿದ ಮಹತ್ತರ ಕೊಡುಗೆಯಾಗಿದೆ. ಇಂತಹಾ ಸಂಸ್ಥೆ ನಮ್ಮ ಬೆಂಗಳೂರು ಫೌಂಡೇಶನ್’ನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸಿದೆ.ಸುಬ್ಬು ಹೆಗ್ಡೆ, ಅಧ್ಯಕ್ಷರು (COPOA, FOVCAB)ನಮ್ಮ ಬೆಂಗಳೂರು ಫೌಂಡೇಶನ್’ನ ಜೊತೆಗಿರುವುದೇ ಸಂತಸ
ಕೋವಿಡ್ 19 ಸಾಂಕ್ರಾಮಿಕದ ಸಂಕಷ್ಟ ಪರಿಸ್ಥಿತಿಯಲ್ಲಿ ನಮ್ಮ ಬೆಂಗಳೂರು ಫೌಂಡೇಶನ್’ನ ಸಮಾಜ ಕಾರ್ಯಗಳಲ್ಲಿ ಸಹಭಾಗಿಯಾಗಿರುವುದೇ ನಮಗೆ ಸಂತಸ. ನಮ್ಮ ಬೆಂಗಳೂರು ಫೌಂಡೇಶನ್’ನ ಸಹಯೋಗದೊಂದಿಗೆ ಸಂಕಷ್ಟಕ್ಕೊಳಗಾದ ಜನರಿಗೆ ಹಾಗೂ ಯಾವುದೇ ಮಹತ್ತರ ಬೆಂಬಲವಿಲ್ಲದೆ ಜನಸೇವೆಯಲ್ಲಿ ಅವಿರತವಾಗಿ ತೊಡಗಿಕೊಂಡಿರುವವರಿಗೆ ಆಹಾರ ವಿತರಿಸಿದ್ದು, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಪರಿಹಾರ ನೀಡುವ ಕಾರ್ಯಗಳಲ್ಲಿ ನಮ್ಮದೊಂದು ಅಳಿಲು ಸೇವೆಯಷ್ಟೆ.ಸಂದೀಪ್ ಜೈನ್- ದೇಸೀ ಮಸಾಲಜವಾಬ್ದಾರಿ ಹಾಗೂ ಪಾರದರ್ಶಕತೆಗೆ ಎನ್ಬಿಎಫ್ ಬದ್ಧ
ಕಳೆದ ಹತ್ತು ವರ್ಷಗಳಿಂದ ನಮ್ಮ ಬೆಂಗಳೂರು ಫೌಂಡೇಶನ್ ಜೊತೆ ಭಾಗಿಯಾಗಿ ಇಂದಿಗೂ ಮುಂದುವರೆಯುತ್ತಿದ್ದೇನೆ. ಜವಾಬ್ದಾರಿ ಮತ್ತು ಪಾರದರ್ಶಕತೆಯೇ ನಮ್ಮ ಬೆಂಗಳೂರು ಫೌಂಡೇಶನ್’ನ ಆಧಾರ ಸ್ಥಂಬವಾಗಿದ್ದು ಅದಕ್ಕೆ ಬದ್ದವಾಗಿ ಶ್ರಮಿಸುತ್ತಿಸುತ್ತಿದೆ. ಈ ಸಂಸ್ಥೆಯೊಂದಿಗೆ ನನ್ನನ್ನು ತೊಡಗಿಸಿಕೊಂಡಿರುವುದು ಸಂತಸ ತಂದಿದ್ದು, ಆ ಮೂಲಕ ಸಮಾಜಕ್ಕೆ ನನ್ನಿಂದಾಗುವ ಕಿರು ಸೇವೆಯನ್ನು ಮುಂದುವರೆಸುತ್ತೇನೆ.ಆನಂದ್ ಸಿರೂರು- ಮಲ್ಲೇಶ್ವರಂ ಸ್ವಾಭಿಮಾನ ಇನೀಷಿಯೇಟಿವ್ಇಂತಹಾ ಕ್ರಿಯಾಶೀಲ ಸಂಸ್ಥೆಯನ್ನು ಹೊಂದಿರಲು ಬೆಂಗಳೂರು ನಿಜಕ್ಕೂ ಪುಣ್ಯ
ಸೇವೆ ಎಂಬುದಕ್ಕೆ ನಮ್ಮ ಬೆಂಗಳೂರು ಫೌಂಡೇಶನ್ ಒಂದು ಸ್ಪಷ್ಟ ನಿದರ್ಶನ. ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವುದಲ್ಲದೆ ಸಮಸ್ಯೆಗಳಿಗೆ ಸೂಕ್ತ ಪರಿಹಾರದೊಂದಿಗೆ ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿರುವ ಇಂತಹಾ ಸಂಸ್ಥೆಯನ್ನು ಹೊಂದಿರಲು ಬೆಂಗಳೂರು ನಿಜಕ್ಕೂ ಪುಣ್ಯ ಮಾಡಿರಬೇಕು. ಇವರೊಂದಿಗೆ ನಮ್ಮ ಸಂಬಂಧ ಆರೋಗ್ಯಕರವಾಗಿದ್ದು, ಈ ಸಂಸ್ಥೆಯ ಶಕ್ತಿ ಮತ್ತು ವೃತ್ತಿಪರತೆ ಶ್ಲಾಘನೀಯ. ಸೇವೆ ಮತ್ತು ಅಂತ್ಯೋದಯಕ್ಕಾಗಿ ಕಾರ್ಯನಿರ್ವಹಿಸುವ ಸಂಘಟನೆಗಳಿಗೆ ನಮ್ಮ ಬೆಂಗಳೂರು ಫೌಂಡೇಶನ್ ಮಾದರಿಯಾಗಿದೆ. ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಆಶಿಸುತ್ತೇವೆ.ಯುರೋಪ್ ಏಷ್ಯಾ ಬ್ಯುಸಿನೆಸ್ ಕನೆಕ್ಟ್ (EABC), ಜರ್ಮನಿನಾಗರಿಕ ಹೋರಾಟದಲ್ಲಿ ಎನ್ಬಿಎಫ್ ಮುಂಚೂಣಿಯಲ್ಲಿದೆ
ನಮ್ಮ ಬೆಂಗಳೂರು ಫೌಂಡೇಶನ್’ನೊಂದಿಗೆ ನಾನು ಕಳೆದ ಹತ್ತು ವರ್ಷಗಳಿಂದ ತೊಡಗಿಕೊಂಡಿದ್ದೇನೆ. ಬೆಂಗಳೂರಿನ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅದಕ್ಕೆ ಸೂಕ್ತ ಪರಿಹಾರ ಸಿಗುವವರೆಗೂ ಹೋರಾಟ ಮಾಡುತ್ತಾ ಬರುತ್ತಿರುವ ನಮ್ಮ ಬೆಂಗಳೂರು ಫೌಂಡೇಶನ್, ನಾಗರಿಕ ಹೋರಾಟಗಳನ್ನು ಕೈಗೆತ್ತಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಅವರ ಸೇವೆ ಅಭೂತಪೂರ್ವವಾದುದು. ಅವರ ಜನಪರ ಹೋರಾಟಗಳಿಗೆ ಯಶಸ್ಸು ಸಿಗಲೆಂದು ಹಾಗೂ ಅವರ ಜನಸೇವೆ ಹೀಗೇ ಮುಂದುವರೆಯಲಿ ಎಂದು ಆಶಿಸುತ್ತೇನೆ.ಡಿ.ಎಸ್. ರಾಜಶೇಖರ್, ಸದಸ್ಯರು, ಸಿಎಎಫ್