ಸುಮಾರು ಮೂರು ದಶಕಗಳ ಕಾಲ ಬೋಧನೆ, ಕಾರ್ಪೊರೇಟ್ ಮತ್ತು ಅಭಿವೃದ್ಧಿ ವಲಯಗಳಲ್ಲಿ ವೃತ್ತಿ ಜೀವನ ಪೂರೈಸಿರುವ ಶ್ರೀ. ಹರೀಶ್ ಕುಮಾರ್. ಎಂ. ಪಿ, ನವೆಂಬರ್ 2019 ರಲ್ಲಿ ಔಪಚಾರಿಕವಾಗಿ ನಮ್ಮ ಬೆಂಗಳೂರು ಫೌಂಡೇಶನ್ ನ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯಭಾರ ತೆಗೆದುಕೊಂಡರು. ಸುಮಾರು ಹದಿನೈದು ವರ್ಷಗಳ ಕಾಲ ಇವರು ಅಭಿವೃದ್ಧಿ ವಲಯದಲ್ಲಿ ತೊಡಗಿಸಿಕೊಂಡು ತಳಮಟ್ಟದಿಂದ ಯೋಜನೆ ರೂಪಿಸುವ ಹಂತದವರೆಗಿನ ಕಾರ್ಯಗಳಲ್ಲಿ ಅನುಭವ ಪಡೆದಿದ್ದಾರೆ.