ವಿವಿಧ ಕಾರ್ಪೋರೇಟ್ ಕಂಪನಿಗಳಲ್ಲಿ ಹಾಗೂ ಮಾರ್ಕೇಟಿಂಗ್ ಏಜೆನ್ಸಿಗಳಲ್ಲಿ ಕಾರ್ಪೋರೇಟ್ ಸಂವಹನ, ಬಿಕ್ಕಟ್ಟು ನಿರ್ವಹಣೆ, ಮಾರ್ಕೇಟಿಂಗ್ ಸಂವಹನದಲ್ಲಿ ಅಪಾರ ಅನುಭವ ಹೊಂದಿರುವ ಪ್ರೀಯದರ್ಶಿನಿ. ಎಸ್.ಕೆ, ಹೆಚ್ಚಿನ ವೃತ್ತಿಬದ್ದತೆಗೆ ಒತ್ತು ಕೊಡುತ್ತಾರೆ.  ದೀರ್ಘಕಾಲಿಕ ಯೋಜನೆಗಳಿಗೆ ರೋಪುರೇಶೆ ಸಿದ್ಧಪಡಿಸುವುದು, ಯೋಜನೆ ರೂಪಿಸುವ ತಂತ್ರಗಾರಿಕೆ,  ಹಾಗೂ ಭಾರತದಾದ್ಯಂತ ಇರುವ  ಬಹುಸಂಸ್ಕೃತಿಗೆ ಅನುಗುಣವಾಗಿ ಪ್ರಚಾರ ಸಿದ್ಧಪಡಿಸುವಲ್ಲಿಯೂ ಇವರು ಯಶಸ್ವಿಯಾಗಿದ್ದಾರೆ.

ಸುಮಾರು ಹದಿನೆಂಟು ವರ್ಷಗಳಿಗಿಂತಲೂ ಹೆಚ್ಚಿನ ಕಾಲ ವೃತ್ತಿ ಅನುಭವ ಹೊಂದಿರುವ ಇವರು, ತಮ್ಮ ಸ್ವ ಸಾಮರ್ಥ್ಯ ಹಾಗೂ ಅಪರಿಮಿತ ಸಂಯೋಜನಾ ಕೌಶಲ್ಯದೊಂದಿಗೆ ದೇಶದಾದ್ಯಂತ ವೃತ್ತಿಪರರೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡಿದ್ದಾರೆ.

ಅನ್ವೇಷಣಾ ಆಧಾರದಲ್ಲಿ ಅಭಿಯಾನ ಆಯೋಜಿಸುವುದು, ವಿವಿಧ ಸಂಸ್ಥೆಗಳೊಂದಿಗೆ ಹೊಸ ಒಪ್ಪಂದಗಳನ್ನು ಮಾಡುವುದು, ಪರಿಣಾಮಕಾರಿ ಮಾತುಕತೆಯೊಂದಿಗೆ ಸಕಾರಾತ್ಮಕವಾಗಿ ಪ್ರಭಾವ ಬೀರಿ ಯಾವುದೇ ಕಾರ್ಯಗಳನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವುದು ಇವರಿಗಿರುವ ಅಪರಿಮಿತ ಸಾಮರ್ಥ್ಯಗಳಲ್ಲಿ ಪ್ರಮುಖವಾದವು.

ಸದಾ ಚಟುವಟಿಕೆಯಿಂದ ಕೂಡಿದ ಕಾರ್ಯಬದ್ಧತೆಯೊಂದಿಗೆ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸಿರುವ  ಪ್ರೀಯದರ್ಶಿನಿ, ವಿವಿಧ ಉತ್ಪಾದಕ ವಿಭಾಗಗಳಾದ ಫಾಸ್ಟ್ ಮೂವಿಂಗ್ ಕನ್ಸ್ಯೂಮರ್ ಗೂಡ್ಸ್, ಕನ್ಸ್ಯೂಮರ್ ಡ್ಯೂರೇಬಲ್ಸ್, ರಿಟೈಲ್, ಹೆಲ್ತ್ ಕೇರ್, ಪ್ರೊಫೆಸನಲ್ ಸರ್ವೀಸ್ ಫರ್ಮ್, ಲೈಫ್ ಸ್ಟೈಲ್ ಬ್ರಾಂಡ್ಸ್ ಮತ್ತು ಸ್ಪೋಟ್ಸ್ ಮುಂತಾದ ಘಟಕಗಳಲ್ಲಿ ಪರಿಣಿತಿ ಹೊಂದಿ ಕಾರ್ಯನಿರ್ವಹಿಸಿರುವುದು ಇವರಲ್ಲಿ ನ್ಯೂಸ್ ಸೈಕಲ್ ಆಧಾರಿತ ಸಂಶೋಧನಾ ವಿಷಯವನ್ನು ಅರ್ಥಮಾಡಿಕೊಳ್ಳಲು ಹಾಗೂ ಅಭಿವೃದ್ದಿಪಡಿಸಲು ಅನುವುಮಾಡಿಕೊಟ್ಟಿದೆ. 

ಇದಲ್ಲದೆ, ಹೊಸ ಕಚೇರಿ ಅಥವಾ ನೂತನ ವಿಭಾಗಗಳನ್ನು ಯಶಸ್ವಿಯಾಗಿ ಸ್ಥಾಪಿಸಿರುವುದು, ಹೊಸ ಕಂಪನಿಗಳೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಹಾಗೂ ಸಂಸ್ಥೆಗಳಲ್ಲಿನ ವಿವಿಧ ವಿಭಾಗಗಳ ತಂಡಗಳನ್ನು ಯಶಸ್ವಿಯಾಗಿ ನಿರ್ವಹಿಸಿ ಅವರಲ್ಲಿ ಕೌಶಲ್ಯ ಬೆಳೆಸಿ ಕೀರ್ತಿಪಡೆದಿದ್ದಾರೆ.