ಸುಮಾರು ಎರಡು ದಶಕಗಳ ಕಾಲ ಸರ್ಕಾರೇತರ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುವ ಉಷಾ,ಅಂತರ್ ವ್ಯಕ್ತೀಯ ಸಂವಹನ ಕೌಶಲ್ಯದ ಅಗತ್ಯತೆಯ ಕಡೆಗೆ ಹೆಚ್ಚು ಒತ್ತುಕೊಡುವುದಲ್ಲದೆ, ಜೀವನದ ಎಲ್ಲಾ ಘಟ್ಟಗಳಲ್ಲೂ ಉತ್ತಮ ನಾಯಕತ್ವ ರೂಪಿಸಲು ಪ್ರೇರಣೆಯಾಗಿದ್ದಾರೆ. ನಮ್ಮ ಬೆಂಗಳೂರು ಫೌಂಡೇಶನ್ ನ ಎಲ್ಲಾ ಕಾರ್ಯಗಳಲ್ಲೂ ಪ್ರಮುಖ ಪಾತ್ರವಹಿಸುವ  ಉಷಾ ಅವರ ಸಂಯೋಜನಾ ಸಾಮರ್ಥ್ಯ, ತಾರ್ಕಿಕ ಮತ್ತು ವಿಶ್ಲೇಷಣಾ ಕೌಶಲ್ಯಗಳೇ ಇವರನ್ನು ಪ್ರತ್ಯೇಕವಾಗಿ ಪ್ರಜ್ವಲಿಸುವಂತೆ ಮಾಡಿದೆ. ತಮ್ಮ ಸಮಾಧಾನದ ನಿಲುವು ಹಾಗೂ ಜವಾಬ್ದಾರಿಯುತ ಕಾರ್ಯಭಾರಗಳಿಂದಲೇ ಸಮಸ್ಯೆಗಳನ್ನು ಶಮನಮಾಡುವ ಕೌಶಲ್ಯ ಇವರನ್ನು ನಮ್ಮ ಬೆಂಗಳೂರು ತಂಡದ ಅಧಿಕೃತ ‘ತಾಯಿ’ಯಾಗಿ ರೂಪಿಸಿದೆ.