ಮೂರು ಬಾರಿ ಪುಲಿಟ್ಜರ್ ಪ್ರಶಸ್ತಿ ವಿಜೇತ ಹಾಗೂ ಅಮೆರಿಕಾದ ಹೆಸರಾಂತ ಪತ್ರಕರ್ತ ಥಾಮಸ್ ಫ್ರೈಡ್ಮೆನ್ ಒಮ್ಮೆ ಅದ್ಬುತವಾಗಿ ಹೇಳಿದ್ದರು,

ಪ್ರಪಂಚವು ಸಮತಟ್ಟಾಗಿದೆ ಎಂದು ನನಗೆ ತಿಳಿದಾಗ ನಾನು ಭಾರತದ ಸಿಲಿಕಾನ್ ನಗರ ಬೆಂಗಳೂರಿನಲ್ಲಿದ್ದೆ.

ಬೆಂಗಳೂರು ತನ್ನ ನಾಗರಿಕರಿಗೆ ಹೆಮ್ಮೆ ಪಡುವುದಕ್ಕೆ ಹೆಚ್ಚಿನದನ್ನೇ ನೀಡಿದೆ. ಅತೀ ತಂಪಾದ ಹವಾಮಾನ, ಸುಂದರವಾದ ಉದ್ಯಾನಗಳು ಮತ್ತು ಕೆರೆಗಳಿಂದಾಗಿ ನಗರವನ್ನು ಆಕರ್ಷಕ ಸ್ಥಳವನ್ನಾಗಿ ಮಾಡಿವೆ. ಐಟಿ ಉದ್ಯಮಗಳು ಬೆಳೆಯುತ್ತಿರುವ ತೀವ್ರಗತಿಯ ಯಶಸ್ಸಿನಿಂದ ಇಡೀ ದೇಶಕ್ಕೆ ಹೆಮ್ಮೆ ಮಾತ್ರವಲ್ಲದೆ ವಿಶ್ವವು ಕೂಡ ಅಸೂಯೆ ಪಟ್ಟಿದೆ. ಉನ್ನತ ಗುಣಮಟ್ಟದ ವೈದ್ಯಕೀಯ ಸೌಲಭ್ಯಗಳ ಲಭ್ಯತೆಯಿಂದ ನಗರವನ್ನು ಹೆಲ್ತ್ ಕೇರ್ ಹಬ್ ಆಗಿ ಮಾರ್ಪಡಿಸಿದೆ. ಜೊತೆಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದ ಕ್ರಾಂತಿ, ಶಿಕ್ಷಣ ಕ್ಷೇತ್ರದ ಅಗ್ರಗಣ್ಯತೆ, ದೇಶದ ಅತ್ಯಂತ ಪರಿಣಾಮಕಾರಿ ಪೊಲೀಸ್ ಪಡೆ,ಮನಮೋಹಕ ಪ್ರವಾಸೋದ್ಯಮ, ಅಪಾರ ಬೌದ್ಧಿಕ ಪ್ರತಿಭೆಗಳಿಂದಾಗಿ ನಗರವನ್ನು ಉನ್ನತ ಸ್ಥಾನಕ್ಕೆ ಕೊಂಡೋಯ್ದಿದೆ.

ಬೆಂಗಳೂರಿನ ಸದ್ಗುಣಗಳಲ್ಲಿ ನಾವು ಹೆಮ್ಮೆಪಡುವಷ್ಟರ ಮಟ್ಟಿಗೆ, ಇದು ಅದ್ಭುತ ಬೆಳವಣಿಗೆಯು ಅಸಾಧಾರಣ ಸವಾಲುಗಳಿಗೆ ಕಾರಣವಾಗಿದೆ. ನಗರದ ಯಶಸ್ಸುನ್ನು ರಾಜ್ಯ, ದೇಶ ಮತ್ತು ಪ್ರಪಂಚದಾದ್ಯಂತದ ಜನರಿಗೆ ಆಕರ್ಷಕ ಕೇಂದ್ರವನ್ನಾಗಿ ಮಾಡಿದೆ. ಮೂಲಸೌಕರ್ಯ, ಸಾರಿಗೆ ವ್ಯವಸ್ಥೆ, ವಿದ್ಯುತ್ ಸರಬರಾಜು, ಒಳಚರಂಡಿ ವ್ಯವಸ್ಥೆ, ಪರಿಸರ, ಕಾನೂನು ಮತ್ತು ಸುವ್ಯವಸ್ಥೆ, ಆರೋಗ್ಯ ಸೌಲಭ್ಯಗಳು, ಸಾಮಾಜಿಕ ಮತ್ತು ಸಾಂಸ್ಕೃತಿಕ ಸೌಹಾರ್ದತೆ – ನಾಗರಿಕರಾಗಿ ನಾವು ಆನಂದಿಸಲು ಮತ್ತು ನಿರೀಕ್ಷಿಸಲು ಬಂದಿರುವ ಎಲ್ಲಾ ಸೌಲಭ್ಯಗಳ ಮೇಲೆ ಇದು ಒತ್ತಡವನ್ನು ಸೃಷ್ಟಿಸಿದೆ.

ಬೆಂಗಳೂರನ್ನು ವಿಶ್ವ ದರ್ಜೆಯ ನಗರವನ್ನಾಗಿ ರೂಪಿಸುವ ಒಂದು ಅಡಿಪಾಯವಾಗಿ, ನಾವು ಪಾರದರ್ಶಕತೆ, ದೃಢತೆ, ಅಂತರ್ಗತತೆ ಮತ್ತು ಆಚರಣೆಯ ಸಿದ್ಧಾಂತಗಳಲ್ಲಿ ಕಾರ್ಯನಿರ್ವಹಿಸಲು ಆಶಿಸುತ್ತೇವೆ ಮತ್ತು ಈ ಸುಂದರ ನಗರದ ಒಟ್ಟಾರೆ ಬೆಳವಣಿಗೆಯ ಕಡೆಗೆ ನಾಗರಿಕರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಪ್ರೋತ್ಸಾಹಿಸುತ್ತೇವೆ.

Donate Now

ಜಗತ್ತಿಗೆ ನಿಮ್ಮ ಉದ್ದೇಶ ಏನೆಂಬುದನ್ನು ತೋರ್ಪಡಿಸಲು ಪ್ರಾರಂಭಿಸೋಣ. ಸ್ವಲ್ಪ ದಾನ ಮಾಡಿ.