ನಾವು ಯಾರು
ನಮ್ಮ ಸಂಸ್ಥೆ
ಬನ್ನಿ ಭಾಗಿಯಾಗಿ
ನಮ್ಮ ಅಭಿಯಾನಗಳು
-
ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಜಾಗೃತಿ
ನಮ್ಮ ಬೆಂಗಳೂರು ಪ್ರತಿಷ್ಠಾನವು ಬೆಂಗಳೂರು ಸೊಸೈಟಿ ಆಫ್ ಅಬ್ಸ್ಟೆಟ್ರಿಕ್ಸ್ & ಗೈನೆಕಾಲಜಿ, ರೋಟರಿ ಬೆಂಗಳೂರು ಪೂರ್ವ ಮತ್ತು ದೊಮ್ಮಲೂರು RWA ಸಹಯೋಗದೊಂದಿಗೆ ದಿನಾಂಕ 25.06.2022 ರಂದು ದೊಮ್ಮಲೂರಿನಲ್ಲಿ ಮೆಗಾ ಮಹಿಳಾ ಆರೋಗ್ಯ..
-
HP ಸಹಯೋಗದೊಂದಿಗೆ ವಿಶ್ವ ಪರಿಸರ ದಿನ
ನಮ್ಮ ಬೆಂಗಳೂರು ಫೌಂಡೇಶನ್ ಹಾಗು HP ಸಹಯೋಗದೊಂದಿಗೆ ಲಾಲ್ಬಾಗ್ ಬೊಟಾನಿಕಲ್ ಗಾರ್ಡನ್ನಲ್ಲಿ ಕ್ಲೆಂಥಾ ಕ್ಲೀನ್ ಥಾನ್ ಅನ್ನು ಆಯೋಜಿಸಲಾಗಿತ್ತು. HP ಯ 300 ಕ್ಕೂ ಹೆಚ್ಚು ಉದ್ಯೋಗಿಗಳು ತಮ್ಮ ಸುತ್ತಮುತ್ತಲಿನ...
-
ರಸ್ತೆ ಸಂಚಾರ ಚಿಹ್ನೆಗಳ ಜಾಗೃತಿ ಸಮೀಕ್ಷೆ ಅಭಿಯಾನ.
ನಮ್ಮ ಬೆಂಗಳೂರು ಫೌಂಡೇಶನ್ ಕಾಲೇಜು ವಿದ್ಯಾರ್ಥಿಗಳ ಸಹಯೋಗದೊಂದಿಗೆ 28 ಮೇ 2022 ರಂದು ಬ್ರಿಗೇಡ್ ರಸ್ತೆಯಲ್ಲಿ ಬೆಂಗಳೂರಿನ ನಾಗರಿಕರಲ್ಲಿ ರಸ್ತೆ ಚಿಹ್ನೆಗಳ ಜಾಗೃತಿ ಸಮೀಕ್ಷೆಯನ್ನು ನಡೆಸಿತು. ರಸ್ತೆ ಚಿಹ್ನೆಗಳು ಮತ್ತು ಸಂಚಾರ ನಿಯಮಗಳ ಬಗ್ಗೆ…
ಒಟ್ಟಿಗೆ ನಾವು ರೂಪಾಂತರಗೊಳ್ಳಬಹುದು
ENT ಬಗ್ಗೆ ವೆಬಿನಾರ್ – ಕಿವುಡುತನ
ನಮ್ಮ ಬೆಂಗಳೂರು ಪ್ರತಿಷ್ಠಾನ ೨೩ ಮಾರ್ಚ್ ೨೦೨೨ ರಂದು ಮಣಿಪಾಲ್ ಆಸ್ಪತ್ರೆಯಲ್ಲಿ ಇಎನ್ಟಿ, ಹೆಡ್ ಮತ್ತು ನೆಕ್ ಸರ್ಜರಿ ಸಲಹೆಗಾರ ಡಾ. ಶ್ರೀನಿವಾಸ್ ಕೆ ಅವರೊಂದಿಗೆ “ಇಎನ್ಟಿ – ಕಿವುಡುತನ” ಕುರಿತು ಚರ್ಚಿಸಲು ವೆಬ್ನಾರ್ ಅನ್ನು ಆಯೋಜಿಸಿತ್ತು.
ಜನ ಏನಂತಾರೆ…
ಎನ್ಬಿಎಫ್ ನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ
ಕಳೆದ ಆರು ವರ್ಷಗಳಿಂದ ನಮ್ಮ ಬೆಂಗಳೂರು ಫೌಂಡೇಶನ್ (ಎನ್ಬಿಎಫ್)ನ ಭಾಗವಾಗಿರುವ ನಾನು, ಎನ್ಬಿಎಫ್’ನ ಅಂಗ ಸಂಸ್ಥೆಯಾದ ಬೆಂಗಳೂರು ನಿವಾಸಿಗಳ ಶ್ರೇಯೋಭಿವೃದ್ಧಿ ಸಂಸ್ಥೆ ಬ್ರೇಸ್’ನ ಸದಸ್ಯನಾಗಿದ್ದೇನೆಯಲ್ಲದೆ, ಯುನೈಟೈಡ್ ಬೆಂಗಳೂರು ಅಭಿಯಾನದ ಕಾರ್ಯಕರ್ತನಾಗಿ ಸೇವೆಸಲ್ಲಿಸಿರುವ ತೃಪ್ತಿ ನನಗಿದೆ. ಬೆಂಗಳೂರಿನ ಗತ ವೈಭವವನ್ನು ಮತ್ತೆ ರೂಪಿಸುವಲ್ಲಿ ಎನ್ಬಿಎಫ್ ಅವಿರತ ಪ್ರಯತ್ನಗಳನ್ನು ಮಾಡುತ್ತಿದೆ. ಎನ್ಬಿಎಫ್’ನ ಸಮರ್ಪಕವಾದ ಯೋಜನೆ ಹಾಗೂ ಕೈ ಹಿಡಿದ ಕೆಲಸವನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ಪ್ರಯತ್ನಗಳಾದ, ಕೆರೆಗಳನ್ನು ಸಂರಕ್ಷಿಸಿ ಪುನರುಜ್ಜೀವನಗೊಳಿಸುವುದು, ಸ್ಟೀಲ್ ಬ್ರಿಡ್ಜ್ ಯೋಜನೆಗೆ ತಡೆ, ಬೆಳ್ಳಂದೂರು ಕೆರೆಯನ್ನು ಕಲುಷಿತದಿಂದ ರಕ್ಷಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿದ್ದು, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯನ್ನು ರಾಜ್ಯಸರ್ಕಾರದ ಕಪಿಮುಷ್ಠಿಯಿಂದ ಹೊರಗಿಡಲು ಸಂವಿಧಾನದ 74ನೇ ತಿದ್ದುಪಡಿಯ ಮೂಲಕ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರ ಪ್ರಾಪ್ತವಾಗುವಂತೆ ಕಾನೂನಾತ್ಮಕ ಹೋರಾಟ ಮಾಡಿದ್ದು, ಬನ್ನೇರುಘಟ್ಟ ಹಸಿರು ವಲಯವನ್ನು ಸಂರಕ್ಷಿಸಿದ್ದು, ಬೆಂಗಳೂರಿನಲ್ಲಿರುವ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಅಭಿನಂದಿಸುತ್ತಿರುವುದು, ಮುಂತಾದವೆಲ್ಲವೂ ಬೆಂಗಳೂರು ನಗರಕ್ಕೆ ಎನ್ಬಿಎಫ್ ನೀಡಿದ ಮಹತ್ತರ ಕೊಡುಗೆಯಾಗಿದೆ. ಇಂತಹಾ ಸಂಸ್ಥೆ ನಮ್ಮ ಬೆಂಗಳೂರು ಫೌಂಡೇಶನ್’ನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸಿದೆ.ಸುಬ್ಬು ಹೆಗ್ಡೆ, ಅಧ್ಯಕ್ಷರು (COPOA, FOVCAB)ನಮ್ಮ ಬೆಂಗಳೂರು ಫೌಂಡೇಶನ್’ನ ಜೊತೆಗಿರುವುದೇ ಸಂತಸ
ಕೋವಿಡ್ 19 ಸಾಂಕ್ರಾಮಿಕದ ಸಂಕಷ್ಟ ಪರಿಸ್ಥಿತಿಯಲ್ಲಿ ನಮ್ಮ ಬೆಂಗಳೂರು ಫೌಂಡೇಶನ್’ನ ಸಮಾಜ ಕಾರ್ಯಗಳಲ್ಲಿ ಸಹಭಾಗಿಯಾಗಿರುವುದೇ ನಮಗೆ ಸಂತಸ. ನಮ್ಮ ಬೆಂಗಳೂರು ಫೌಂಡೇಶನ್’ನ ಸಹಯೋಗದೊಂದಿಗೆ ಸಂಕಷ್ಟಕ್ಕೊಳಗಾದ ಜನರಿಗೆ ಹಾಗೂ ಯಾವುದೇ ಮಹತ್ತರ ಬೆಂಬಲವಿಲ್ಲದೆ ಜನಸೇವೆಯಲ್ಲಿ ಅವಿರತವಾಗಿ ತೊಡಗಿಕೊಂಡಿರುವವರಿಗೆ ಆಹಾರ ವಿತರಿಸಿದ್ದು, ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಪರಿಹಾರ ನೀಡುವ ಕಾರ್ಯಗಳಲ್ಲಿ ನಮ್ಮದೊಂದು ಅಳಿಲು ಸೇವೆಯಷ್ಟೆ.ಸಂದೀಪ್ ಜೈನ್- ದೇಸೀ ಮಸಾಲಜವಾಬ್ದಾರಿ ಹಾಗೂ ಪಾರದರ್ಶಕತೆಗೆ ಎನ್ಬಿಎಫ್ ಬದ್ಧ
ಕಳೆದ ಹತ್ತು ವರ್ಷಗಳಿಂದ ನಮ್ಮ ಬೆಂಗಳೂರು ಫೌಂಡೇಶನ್ ಜೊತೆ ಭಾಗಿಯಾಗಿ ಇಂದಿಗೂ ಮುಂದುವರೆಯುತ್ತಿದ್ದೇನೆ. ಜವಾಬ್ದಾರಿ ಮತ್ತು ಪಾರದರ್ಶಕತೆಯೇ ನಮ್ಮ ಬೆಂಗಳೂರು ಫೌಂಡೇಶನ್’ನ ಆಧಾರ ಸ್ಥಂಬವಾಗಿದ್ದು ಅದಕ್ಕೆ ಬದ್ದವಾಗಿ ಶ್ರಮಿಸುತ್ತಿಸುತ್ತಿದೆ. ಈ ಸಂಸ್ಥೆಯೊಂದಿಗೆ ನನ್ನನ್ನು ತೊಡಗಿಸಿಕೊಂಡಿರುವುದು ಸಂತಸ ತಂದಿದ್ದು, ಆ ಮೂಲಕ ಸಮಾಜಕ್ಕೆ ನನ್ನಿಂದಾಗುವ ಕಿರು ಸೇವೆಯನ್ನು ಮುಂದುವರೆಸುತ್ತೇನೆ.ಆನಂದ್ ಸಿರೂರು- ಮಲ್ಲೇಶ್ವರಂ ಸ್ವಾಭಿಮಾನ ಇನೀಷಿಯೇಟಿವ್ಇಂತಹಾ ಕ್ರಿಯಾಶೀಲ ಸಂಸ್ಥೆಯನ್ನು ಹೊಂದಿರಲು ಬೆಂಗಳೂರು ನಿಜಕ್ಕೂ ಪುಣ್ಯ
ಸೇವೆ ಎಂಬುದಕ್ಕೆ ನಮ್ಮ ಬೆಂಗಳೂರು ಫೌಂಡೇಶನ್ ಒಂದು ಸ್ಪಷ್ಟ ನಿದರ್ಶನ. ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವುದಲ್ಲದೆ ಸಮಸ್ಯೆಗಳಿಗೆ ಸೂಕ್ತ ಪರಿಹಾರದೊಂದಿಗೆ ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿರುವ ಇಂತಹಾ ಸಂಸ್ಥೆಯನ್ನು ಹೊಂದಿರಲು ಬೆಂಗಳೂರು ನಿಜಕ್ಕೂ ಪುಣ್ಯ ಮಾಡಿರಬೇಕು. ಇವರೊಂದಿಗೆ ನಮ್ಮ ಸಂಬಂಧ ಆರೋಗ್ಯಕರವಾಗಿದ್ದು, ಈ ಸಂಸ್ಥೆಯ ಶಕ್ತಿ ಮತ್ತು ವೃತ್ತಿಪರತೆ ಶ್ಲಾಘನೀಯ. ಸೇವೆ ಮತ್ತು ಅಂತ್ಯೋದಯಕ್ಕಾಗಿ ಕಾರ್ಯನಿರ್ವಹಿಸುವ ಸಂಘಟನೆಗಳಿಗೆ ನಮ್ಮ ಬೆಂಗಳೂರು ಫೌಂಡೇಶನ್ ಮಾದರಿಯಾಗಿದೆ. ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಆಶಿಸುತ್ತೇವೆ.ಯುರೋಪ್ ಏಷ್ಯಾ ಬ್ಯುಸಿನೆಸ್ ಕನೆಕ್ಟ್ (EABC), ಜರ್ಮನಿನಾಗರಿಕ ಹೋರಾಟದಲ್ಲಿ ಎನ್ಬಿಎಫ್ ಮುಂಚೂಣಿಯಲ್ಲಿದೆ
ನಮ್ಮ ಬೆಂಗಳೂರು ಫೌಂಡೇಶನ್’ನೊಂದಿಗೆ ನಾನು ಕಳೆದ ಹತ್ತು ವರ್ಷಗಳಿಂದ ತೊಡಗಿಕೊಂಡಿದ್ದೇನೆ. ಬೆಂಗಳೂರಿನ ಜನ ಎದುರಿಸುತ್ತಿರುವ ಸಮಸ್ಯೆಗಳನ್ನು ಗಂಭೀರವಾಗಿ ತೆಗೆದುಕೊಂಡು ಅದಕ್ಕೆ ಸೂಕ್ತ ಪರಿಹಾರ ಸಿಗುವವರೆಗೂ ಹೋರಾಟ ಮಾಡುತ್ತಾ ಬರುತ್ತಿರುವ ನಮ್ಮ ಬೆಂಗಳೂರು ಫೌಂಡೇಶನ್, ನಾಗರಿಕ ಹೋರಾಟಗಳನ್ನು ಕೈಗೆತ್ತಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ಅವರ ಸೇವೆ ಅಭೂತಪೂರ್ವವಾದುದು. ಅವರ ಜನಪರ ಹೋರಾಟಗಳಿಗೆ ಯಶಸ್ಸು ಸಿಗಲೆಂದು ಹಾಗೂ ಅವರ ಜನಸೇವೆ ಹೀಗೇ ಮುಂದುವರೆಯಲಿ ಎಂದು ಆಶಿಸುತ್ತೇನೆ.ಡಿ.ಎಸ್. ರಾಜಶೇಖರ್, ಸದಸ್ಯರು, ಸಿಎಎಫ್ಇಲ್ಲಿನ ಜೀವನಮಟ್ಟ ಸುಧಾರಿಸಿಕೊಳ್ಳವ ಎಲ್ಲಾ ವಿಷಯಗಳನ್ನು ಕೈಗೆತ್ತಿಕೊಂಡಿದ್ದು ಎನ್ಬಿಎಫ್
ನಮ್ಮ ಬೆಂಗಳೂರು ಫೌಂಡೇಶನ್, ಈ ಹೆಸರೇ ಸೂಚಿಸುತ್ತದೆ ಎಲ್ಲವೂ ಬೆಂಗಳೂರಿಗೇ ಸಂಬಂಧಿಸಿದೆಂದು. ಬೆಂಗಳೂರಿನ ನಿವಾಸಿಗಳ ಸಂಘಟನೆಗಳನ್ನು ಒಟ್ಟು ಸೇರಿಸಿಕೊಂಡು ಇಲ್ಲಿನ ಜೀವನಮಟ್ಟ ಸುಧಾರಿಸಿಕೊಳ್ಳುವ ಎಲ್ಲಾ ವಿಷಯಗಳನ್ನು ಕೈಗೆತ್ತಿಕೊಂಡಿದ್ದು ನಮ್ಮ ಬೆಂಗಳೂರು ಫೌಂಡೇಶನ್. ಸಮರ್ಪಕ ಸಹಯೋಗ ಹಾಗೂ ಏಕಚಿತ್ತದ ಪರಿಶ್ರಮದಿಂದ ಕೂಡಿದ ಪಯಣ ದೀರ್ಘವಾಗಿದ್ದರೂ, ಇದು ಹಲವಾರು ಸಕಾರಾತ್ಮಕ ಫಲಿತಾಂಶವನ್ನು ನೀಡಿದೆಯಲ್ಲದೆ, ನಾವೆಲ್ಲರೂ ಒಂದಾಗಿ ಭವಿಷ್ಯದಲ್ಲಿ ಮತ್ತಷ್ಟು ಕೆಲಸಗಳನ್ನು ಮಾಡಬಹುದು.ರಾಜ್’ಕುಮಾರ್ ದುಗಾರ್, ಸಂಯೋಜಕರು, ಸಿಟಿಝನ್ಸ್ ಫಾರ್ ಸಿಟಿಝನ್ಸ್ (C4C)ಕಷ್ಟಕಾಲದಲ್ಲಿ ನೆನಪಾಗುವುದು ಶ್ರೀ ರಾಜೀವ್ ಚಂದ್ರಶೇಖರ್
ಗೌರವಾನ್ವಿತ ಸಂಸದ ರಾಜೀವ್ ಚಂದ್ರಶೇಖರ್ ಅವರು ಪ್ರಾರಂಭಿಸಿದ ನಮ್ಮ ಬೆಂಗಳೂರು ಫೌಂಡೇಶನ್’ನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ. ನಮ್ಮ ಬೆಂಗಳೂರು ಫೌಂಡೇಶನ್ ಮುಖಾಂತರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಕುರಿತ ಸರ್ಕಾರಿ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬಹುದಾಗಿದ್ದು, ಈ ಯೋಜನೆಗಳನ್ನು ಹೇಗೆ ಸದುಪಯೋಗಪಡಿಸಿಕೊಳ್ಳಬಹುದು ಎಂಬುದನ್ನು ಮನವರಿಕೆ ಮಾಡಿಕೊಡುವ ಎನ್ಬಿಎಫ್’ನ ಪ್ರಯತ್ನ ಮಹತ್ವವಾದುದು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆ ಹಾಗೂ ಅದರಿಂದ ಹೊರಬರಲು ರಾಜೀವ್ ಚಂದ್ರಶೇಖರ್ ಅವರು ನೆರವಾಗುವ ಪರಿ ಪ್ರಶಂಸನೀಯ. ಇಂತಹಾ ಸಂಕಷ್ಟದ ಪರಿಸ್ಥಿತಿಯಲ್ಲೂ ರಾಜೀವ್ ಚಂದ್ರಶೇಖರ್ ಅವರಂತ ನೆರವಾಗುವವರು ಇದ್ದಾರೆಂಬುದು ಸಮಾಧಾನಕರ ವಿಷಯ.ಶ್ರೀರಾಮ್ ದೇವತಾ, ನಿರ್ವಹಣಾ ಪಾಲುದಾರರು, ದೇವತಾ ಫೇಬ್ರಿಕ್ಸ್ನುಡಿದಂತೆ ನಡೆಯುವ ಎನ್ಬಿಎಫ್
ನಮ್ಮ ಬೆಂಗಳೂರು ಫೌಂಡೇಶನ್ ಪ್ರಾರಂಭವಾದಾಗಿನಿಂದಲೇ ಆ ಸಂಸ್ಥೆಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ನನ್ನ ವಯಕ್ತಿಕ ಅನುಭವದ ಪ್ರಕಾರ ಎನ್ಬಿಎಫ್ ನುಡಿದಂತೆ ನಡೆಯುವ ಬದ್ಧತೆಯನ್ನು ಹೊಂದಿದೆ ಎಂದು ಎದೆ ಮುಟ್ಟಿ ಹೇಳುತ್ತೇನೆ.ಡಾ. ರಾಧಾಕೃಷ್ಣ – ನಾಗರಿಕ ಹಕ್ಕು ಹೋರಾಟಗಾರರು, ಕೋರಮಂಗಳಇವರ ಸಾಮಾಜಿಕ ಕೊಡುಗೆ ಪ್ರೇರಣಾದಾಯಕ
ನಮ್ಮ ಬೆಂಗಳೂರು ಫೌಂಡೇಶನ್ ಭಾಗವಾಗಿರುವುದರಲ್ಲಿ ನನಗೆ ಸಂತಸ ತಂದಿದೆ. ಬೆಂಗಳೂರು ನಗರವನ್ನು ಅಭಿವೃದ್ಧಿ ಹೊಂದಿದ ನಗರವನ್ನಾಗಿಸಲು ಇವರು ವಹಿಸುವ ಖಾಳಜಿ ಅಷ್ಟಿಷ್ಟಲ್ಲ. ಇವರ ಸಮಾಜಸೇವಾ ಕಾರ್ಯಗಳು, ದತ್ತಿ ಪೋಷಣೆಗಳು ಮತ್ತೊಬ್ಬರಿಗೂ ಪ್ರೇರಣೆಯಾಗಿದೆ. ಬಹುಮುಖ್ಯವಾಗಿ, ಸಮಾಜವನ್ನು ಮುನ್ನಡೆಸುವಲ್ಲಿ ಇವರ ನಾಯಕತ್ವ ಎಂತವರನ್ನೂ ಉತ್ತೇಜಿಸುತ್ತದೆ. ಇವರಲ್ಲಿರುವಂತ ಸಾಮಾಜಿಕ ಬದ್ಧತೆಯಿಂದ ಕೂಡಿದ ಪರಿಣಿತರ ತಂಡ ಕಾಣಸಿಗುವುದು ಬಹಳ ಅಪರೂಪ. ಎಲ್ಲರನ್ನೂ ಒಟ್ಟು ಸೇರಿಸಿಕೊಂಡು ಜತೆಯಾಗಿ ನಾವು ಏನನ್ನು ಬೇಕಿದ್ದರೂ ಮಾಡಬಹುದು ಎಂಬ ಛಲದೊಂದಿಗೆ ಬೆಂಗಳೂರಿನ ಗತ ವೈಭವವನ್ನು ಮರುಸ್ಥಾಪಿಸಲು ಮಾಡುತ್ತಿರುವ ಕಾರ್ಯಗಳಲ್ಲಿ ಈಗಾಗಲೇ ಹಲವಾರು ಯಶಕಂಡಿದೆ. ಇವರ ಇಂತಹಾ ಪ್ರಯತ್ನ ಮುಂದೆಯೂ ಹೀಗೆಯೇ ಮುಂದುವರೆಯಲಿ ಎಂದು ಹಾರೈಸುತ್ತೇನೆ.ಮೀನಾಕ್ಷಿ ಕಾರಂತ್- ಲೇಕ್ಶೋರ್ ಹೋಮ್ ಅಸೋಸಿಯೇಶನ್ಎನ್ಬಿಎಫ್ ಸಹಯೋಗಕ್ಕಾಗಿ ಅಭಾರಿ
ನಮ್ಮ ಬೆಂಗಳೂರು ಫೌಂಡೇಶನ್’ನ ಭಾಗವಾಗಿರುವುದಕ್ಕೆ ರಿವಾಬೆ ಅಭಾರಿಯಾಗಿದೆ. ಸಾಮಾಜಿಕ ಅಭಿವೃದ್ಧಿ ಮತ್ತು ನ್ಯಾಯಕ್ಕಾಗಿ ಪಣತೊಡುವ ಇವರ ಪಯಣಕ್ಕೆ ಯಶಸ್ಸು ಸಿಗಲಿ ಎಂದು ನಾವು ಆಶಿಸುತ್ತೇವೆ.ರಿವಾಬೆಪ್ರಮುಖ ಸಮಸ್ಯೆಗಳ ಕುರಿತು ಸರ್ಕಾರವನ್ನು ಎಚ್ಚರಿಸುವಲ್ಲಿ ಸದಾ ಮುಂಚೂಣಿ
ನಮ್ಮ ಬೆಂಗಳೂರು ಫೌಂಡೇಶನ್’ನ ಭಾಗವಾಗಿರುವುದಕ್ಕೆ ಹೆಮ್ಮೆ ಎನಿಸಿದೆ. ಸಮಾಜದಲ್ಲಿ ತಲೆದೋರಿರುವ ಪ್ರಮುಖ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಮುಂಚೂಣಿಯಲ್ಲಿರುವ ಇವರು, ಸಮಸ್ಯೆಗಳ ಇತ್ಯರ್ಥಕ್ಕಾಗಿ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಇಡುವ ಪ್ರತೀ ಹೆಜ್ಜೆಯೂ ಅಚ್ಚರಿ ಮೂಡಿಸುವಂತದ್ದು. ಕರೆಗಳ ಪುನರುಜ್ಜೀವನಕ್ಕಾಗಿ ಇವರ ಪರಿಶ್ರಮ, ರೇರಾ ಅನುಷ್ಠಾನ ಮತ್ತು ವಿಶೇಷವಾಗಿ ಕೋವಿಡ್-19 ಸಾಂಕ್ರಾಮಿಕ ಸಂದರ್ಭದಲ್ಲಿ ಇವರ ಸೇವೆ ಶ್ಲಾಘನೀಯ.ಅನಿಲ್ ನವಲಿ- ರೇರಾ ಕರ್ನಾಟಕ ಘಟಕಬೆಂಗಳೂರಿನ ಪ್ರಬುದ್ಧ ನಾಗರಿಕರ ವಿಮರ್ಶಾತ್ಮಕ ಧ್ವನಿ
ಬೆಂಗಳೂರಿನ ಪ್ರಬುದ್ಧ ನಾಗರಿಕರ ಧ್ವನಿಯಾಗಿ ನಮ್ಮ ಬೆಂಗಳೂರು ಫೌಂಡೇಶನ್ ಕಾರ್ಯನಿರ್ವಹಿಸುತ್ತಿದೆ. ನಗರಕ್ಕೆ ಸಂದ ಗೌರವ ಸಾಧನೆಯನ್ನು ಸಂಭ್ರಮಿಸುವುದರ ಜೊತೆಗೆ ಇಲ್ಲಿ ಹಿಂದುಳಿದಿರುವ ಕಾಮಗಾರಿಗಳನ್ನು ಕಾರ್ಯಗತಗೊಳಿಸುವಲ್ಲಿ ಇವರ ಕಾರ್ಯ ಮಹತ್ತರವಾದುದು. ನಮ್ಮ ಬೆಂಗಳೂರು ಫೌಂಡೇಶನ್’ನ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ಬೆಂಗಳೂರು ಅಪಾರ್ಟ್’ಮೆಂಟ್ಸ್ ಫೆಡರೇಶನ್ ಭಾಗಿಯಾಗಿರುವುದಕ್ಕೆ ಹೆಮ್ಮೆಯಿದೆ ಹಾಗೂ ಮುಂದಿನ ದಿನಗಳಲ್ಲಿ ಅವರ ಕಾರ್ಯಗಳು ಯಶಸ್ಸನ್ನು ಸಾಧಿಸಲಿ ಎಂದು ಹಾರೈಸುತ್ತೇನೆ.ಹೆಚ್.ಎ.ನಾಗರಾಜ ರಾವ್, ಅಧ್ಯಕ್ಷರು- ಬೆಂಗಳೂರು ಅಪಾರ್ಟ್’ಮೆಂಟ್ಸ್ ಫೆಡರೇಶನ್ಕೋವಿಡ್ 19 ಸಾಂಕ್ರಾಮಿಕದಲ್ಲಿ ಸಂಕಷ್ಟಕ್ಕೊಳಗಾದವರಿಗೆ ನೆರವಾಗಲು ನಮಗೆ ಬೆನ್ನೆಲುಬಾಗಿ ನಿಂತ ಸಂಸ್ಥೆ
ಕೋವಿಡ್ 19 ಸಾಂಕ್ರಾಮಿಕದ ಸಂಕಷ್ಟದ ಪರಿಸ್ಥಿತಿಯಲ್ಲಿ ನೊಂದವರಿಗೆ ನೆರವಾಗಲು ನಮಗೆ ಬೆನ್ನೆಲುಬಾಗಿ ನಿಂತ ಸಂಸ್ಥೆ ನಮ್ಮ ಬೆಂಗಳೂರು ಫೌಂಡೇಶನ್. ಅವರ ನಿರಂತರ ಬೆಂಬಲದಿಂದಾಗಿ ಇಂದಿರಾನಗರ, ಕೋರಮಂಗಳ, ದೊಮ್ಮಲೂರು ಸುತ್ತಮುತ್ತಲೂ ಸೇರಿದಂತೆ ಬೆಂಗಳೂರಿನ ವಿವಿಧೆಡೆ ನೆಲೆಸಿರುವ ಜನರಿಗೆ ನಾವು ಔಷಧ, ಆಹಾರ ಮತ್ತಿತರ ಅಗತ್ಯ ವಸ್ಥುಗಳ ಪೂರೈಸಲು ಸಹಕಾರಿಯಾಯಿತು.ವರಿನ್. ಸಿ- ಇಂದಿರಾನಗರ ನಿವಾಸಿಜನರ ಹಕ್ಕುಗಳ ರಕ್ಷಣೆಗಾಗಿ ನಿರಂತರ ಹೋರಾಡುವ ನಾಗರಿಕರ ಧ್ವನಿ
ನಾಗರಿಕರ ಧ್ವನಿಯನ್ನು ಎತ್ತಿಹಿಡಿಯುವುದರೊಂದಿಗೆ ನಾಗರಿಕ ಹಕ್ಕುಗಳ ರಕ್ಷಣೆಗಾಗಿ ನಿರಂತರ ಹೋರಾಡುತ್ತಿರುವ ಶ್ರೇಷ್ಟ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ನಮ್ಮ ಬೆಂಗಳೂರು ಫೌಂಡೇಶನ್ ನಂತಹಾ ಸಂಸ್ಥೆಯಿಂದಾಗಿ ಬೆಂಗಳೂರಿನ ಪ್ರಗತಿಯ ಬಗ್ಗೆ ಇಂದಿಗೂ ಭರವಸೆಗಳ ಬೆಳಕು ಮೂಡಿದೆ.
ಎನ್.ಎಸ್.ರಮಾಕಾಂತ್, ಸಹಸಂಸ್ಥಾಪಕರು, ಸಾಲಿಡ್ ವೇಸ್ಟ್ ಮೇನೇಜ್ಮೆಂಟ್ಬೆಂಗಳೂರಿನ ಭೌಗೋಳಿಕ ಸಂಪನ್ಮೂಲಗಳ ಸಂರಕ್ಷಕ
ಬೆಂಗಳೂರಿನ ಭೌಗೋಳಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದರೊಂದಿಗೆ, ಇಲ್ಲಿ ಉತ್ತಮ ಆಡಳಿತ ಸೇವೆಗಾಗಿ ಒತ್ತಾಯಿಸುವುದು ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಕಾರ್ಯರೂಪಕ್ಕೆ ತರಲು ಜನಪರ ಹೋರಾಟಗಳನ್ನು ನಮ್ಮ ಬೆಂಗಳೂರು ಫೌಂಡೇಶನ್ ಬಲಪಡಿಸಿದೆ.
ಕಥ್ಯಾಯಿನಿ ಚಾಮರಾಜ್, ಎಗ್ಸಿಗ್ಯೂಟಿವ್ ಟ್ರಸ್ಟಿ, ಸಿವಿಕ್ಮೂಲಭೂತ ಹಕ್ಕು ಮತ್ತು ನಾಗರಿಕ ಸಮಸ್ಯೆಗಳಿಗೆ ಹೋರಾಡುವ ಸಂಸ್ಥೆ
ಜನಸಾಮಾನ್ಯರ ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಅರಿವು ಮೂಡಿಸುವಲ್ಲಿ ಬದ್ಧವಾಗಿರುವ ನಮ್ಮ ಬೆಂಗಳೂರು ಫೌಂಡೇಶನ್, ಬಹುತೇಕ ಜನರು ಮಾತನಾಡಲು ಹಿಂದೇಟು ಹಾಕುವ ನಾಗರಿಕ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಹೋರಾಟ ಮಾಡುತ್ತಿದೆ.
ಡಿ.ಎಸ್.ರಾಜಶೇಕರ್, ಅಧ್ಯಕ್ಷರು, ಸಿಟಿಜನ್ ಆ್ಯಕ್ಷನ್ ಫೋರಮ್ಉತ್ತಮ ಬೆಂಗಳೂರಿಗಾಗಿ ಶ್ರಮಿಸುತ್ತಿರುವ ಸಂಸ್ಥೆ
ಉತ್ತಮ ಬೆಂಗಳೂರಿಗಾಗಿ ಶ್ರಮಿಸುವ ಗುರಿಯೊಂದಿಗೆ ಕೆಲಸ ಮಾಡುವುದು ಒಂದೆಡೆಯಾದರೆ, ನುಡಿದಂತೆ ನಡೆಯುವುದು ಮತ್ತೊಂದೆಡೆ. ಬೆಂಗಳೂರಿನ ಗತವೈಭವವನ್ನು ಮರುಸ್ಥಾಪಿಸಲು ಹೋರಾಡುತ್ತಿರುವ ನಮ್ಮ ಬೆಂಗಳೂರು ಸಂಸ್ಥೆಗೆ ಒಳ್ಳೆಯದಾಗಲಿ.
ವಸಂತಿ ಹರಿಪ್ರಕಾಶ್, ಪಿಕಲ್ ಜಾರ್ ಸಂಸ್ಥಾಪಕರು
ಪ್ರಚಲಿತ ಅಭಿಯಾನಕ್ಕೆ ನಿಮ್ಮ ಬೆಂಬಲ ತುರ್ತಾಗಿ ಬೇಕಾಗಿದೆ
ನಮ್ಮ ಬೆಂಗಳೂರು ಫೌಂಡೇಶನ್ (NBF) ಬೆಂಗಳೂರು ಸೊಸೈಟಿ ಆಫ್ ಅಬ್ಸ್ಟೆಟ್ರಿಕ್ಸ್ ಮತ್ತು ಗೈನೆಕಾಲಜಿ (BSOG) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸಹಯೋಗದೊಂದಿಗೆ ಮಹಿಳೆಯರ ಆರೋಗ್ಯ ಮತ್ತು ಯೋಗಕ್ಷೇಮದ ಸುಧಾರಣೆಗೆ ಜಾಗೃತಿ ಮತ್ತು ಸಹಾಯಕ್ಕಾಗಿ ಮಹಿಳೆಯರಿಗಾಗಿ ಮೆಗಾ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಿದೆ…
2030 ರ ವೇಳೆಗೆ ಈ ತಂಡಗಳು ಗರ್ಭಕಂಠದ ಕ್ಯಾನ್ಸರ್ ನಿರ್ಮೂಲನೆಗೆ ಕೆಲಸ ಮಾಡಲು ಬದ್ಧವಾಗಿರುತ್ತವೆ ಮತ್ತು ಉತ್ಸಾಹಭರಿತವಾಗಿವೆ.
ಗರ್ಭಕಂಠದ ಕ್ಯಾನ್ಸರ್ ಲಸಿಕೆಯನ್ನು ಪ್ರಾಯೋಜಿಸುವ ಮೂಲಕ ನಿಮ್ಮ ಬೆಂಬಲಕ್ಕಾಗಿ ನಾವು ಎದುರು ನೋಡುತ್ತಿದ್ದೇವೆ – ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಸರ್ವಿಕ್ಸ್ ಲಸಿಕೆಯನ್ನು ಹಿಂದುಳಿದ ಮಹಿಳೆಯರಿಗೆ ನೀಡಲಾಗುವುದು. ಈ ಕಾರಣಕ್ಕಾಗಿ ದಾನ ಮಾಡಿ.
ಮಕ್ಕಳ ಕೆರೆ ಹಬ್ಬ
ಮಕ್ಕಳನ್ನು ತಮ್ಮ ಬಡಾವಣೆಗಳ ಸರಹದ್ದಿನಲ್ಲಿರುವ ಕೆರೆಗಳ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ, ಕೆರೆಗಳ ಶುಚಿತ್ವ ಕಾಪಾಡಿಕೊಂಡು ಅದನ್ನು ಸದಾ ಜೀವಜಲಮೂಲವಾಗಿ ಉಳಿಸಿಕೊಳ್ಳುವಲ್ಲಿ ತಾವೂ ಪಾಲುದಾರರಾಗಲು ಪ್ರೇರೇಪಿಸುವುದೇ ಈ ಮಕ್ಕಳ ಕೆರೆ ಹಬ್ಬ ಆಚರಣೆಯ ಮೂಲ ದ್ಯೇಯೋದ್ದೇಶವಾಗಿದೆ.
NBF ಮಕ್ಕಳ ಕೆರೆ ಹಬ್ಬವನ್ನು ಏಪ್ರಿಲ್ 2022 ರಿಂದ ಒಂದು ವರ್ಷದವರೆಗೆ ನಡೆಸಲು ಉದ್ದೇಶಿಸಿದೆ, ಇದು 10 ಕೆರೆಗಳನ್ನು ಒಳಗೊಂಡಿದೆ.