ಕೊರೊನಾ ಲಾಕ್ಡೌನ್ ಬೆಂಗಳೂರಿನಲ್ಲಿ ನಿರಾಶ್ರಿತರು, ಅಸಂಘಟಿತ ವಲಯದ ಕೂಲಿ ಕಾರ್ಮಿಕರು, ಮನೆ ಕೆಲಸದಾಳುಗಳು, ಚಿಂದಿ ಆಯುವವರು, ರಿಕ್ಷಾ ಚಾಲಕರು, ಕೈಗಾಡಿ ತಳ್ಳುವವರು, ಏಕಪೋಷಕ ತಾಯಂದಿರು, ಕಟ್ಟಡ ಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ನಗರ ಪ್ರದೇಶದ ಬಡವರ ಬದುಕಿನ ಮೇಲೆ ದೊಡ್ಡ ಮಟ್ಟದ ಪ್ರತಿಕೂಲ ಪರಿಣಾಮವನ್ನು ಬೀರಿತ್ತು. ಇವರೆಲ್ಲರೂ ತಮ್ಮ ದೈನಂದಿನ ಆಹಾರಕ್ಕಾಗಿ ಪರದಾಡುವಂತಾಗಿತ್ತು. ಎನ್ಬಿಎಫ್ ೨೦೨೦ರ ಮಾರ್ಚ್ ೨೮ರಂದು ಆರಂಭಿಸಿದ ಆಹಾರ ವಿತರಣೆ ಅಭಿಯಾನವು ಇಂಥ ಸಾವಿರಾರು ದುರ್ಬಲರು ಮತ್ತು ತುಳಿತಕ್ಕೊಳಗಾದ ಮಂದಿಯನ್ನು ತಲುಪಿತು.
ಈ ಅಭಿಯಾನದ ಮೂಲಕ ಅಗತ್ಯವಿರುವವರಿಗೆ ಆಹಾರದ ಪ್ಯಾಕೆಟ್ಗಳನ್ನು ಮತ್ತು ಅಂಥ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ಒದಗಿಸಲಾಯಿತು. ಉದಾರ ದಾನಿಗಳು ಮತ್ತು ಪಾಲುದಾರ ಸಂಸ್ಥೆಗಳು ಈ ಅಭಿಯಾನಕ್ಕೆ ಬೆಂಬಲವಾಗಿ ನಿಂತರು. ಈ ಅಭಿಯಾನಕ್ಕೆ ಸಂಸತ್ ಸದಸ್ಯರಾದ ಶ್ರೀ. ರಾಜೀವ್ ಚಂದ್ರಶೇಖರ್ ಅವರೂ ಬೆಂಬಲ ನೀಡಿದರು. ೨೦೨೦ರ ಏಪ್ರಿಲ್ ೨೫ರ ವೇಳೆಗೆ ಈ ಅಭಿಯಾನವು ಬೆಂಗಳೂರಿನಾದ್ಯಂತ ೪೦ ಪ್ರದೇಶಗಳಲ್ಲಿರುವ ಸುಮಾರು ೨೧೦೦೦ ಜನರನ್ನು ತಲುಪಿತು. ಈ ಅವಧಿಯಲ್ಲಿ ಸುಮಾರು ೧.೨೫ ಲಕ್ಷ ಆಹಾರದ ಪ್ಯಾಕೆಟ್ಗಳು, ೨೫೦೦ ದಿನಸಿ ಕಿಟ್ಗಳು ಮತ್ತು ಮಕ್ಕಳಿಗಾಗಿ ೩೫೦೦ ತಿನಿಸಿನ ಪ್ಯಾಕೆಟ್ಗಳನ್ನು ವಿತರಿಸಲಾಯಿತು.
ನಮ್ಮ ಉದಾರ ದಾನಿಗಳಾದ – ಶ್ರೀ. ರಾಜೀವ್ ಚಂದ್ರಶೇಖರ್, ಜೈನ್ ಇಂಟರ್ನ್ಯಾಷನಲ್ ಟ್ರೇಡ್ ಆರ್ಗನೈಸೇಷನ್(ಜೆಐಟಿಒ), ಏಟ್ರಿಯಾ ಪ್ರತಿಷ್ಠಾನ, ದೇಸಿ ಮಸಾಲ, ಭಾಸ್ಕರ್ಸ್ ಹೋಳಿಗೆ ಮನೆ, ಗಿಲ್ಗಾಲ್ ದತ್ತಿ ಟ್ರಸ್ಟ್, ಎವಿಎಎಸ್, ಸತ್ಸಂಗ ಪ್ರತಿಷ್ಠಾನ, ಶ್ರೀ. ಶ್ರೀರಾಮ್ ಸುಬ್ರಮಣ್ಯಮ್ ಮತ್ತು ಶಿರೂರು ಫ್ಯಾಮಿಲಿ ಮತ್ತಿತರ ವೈಯಕ್ತಿಕ ದಾನಿಗಳು ಹಾಗೂ ಇತರರಿಗೆ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ. ಇವರೆಲ್ಲರ ಸಹಾಯವಿಲ್ಲದಿದ್ದರೆ ಈ ಅಭಿಯಾನವು ಯಶಸ್ವಿಯಾಗುತ್ತಿರಲಿಲ್ಲ.
ಇನ್ನೂ ಸಾವಿರಾರು ಮಂದಿಯನ್ನು ನಾವು ತಲುಪಬೇಕಾಗಿದೆ. ನೀವು ಕೂಡ ಈ ಅಭಿಯಾನಕ್ಕೆ ಬೆಂಬಲ ನೀಡಬಹುದು:
ಪ್ರತಿಯೊಂದು ಕುಟುಂಬಕ್ಕೆ (೪-೫ ಸದಸ್ಯರಿರುವ ಪ್ರತಿ ಕುಟುಂಬ) ದಿನಸಿ ಕಿಟ್ಗಳು (ಅಕ್ಕಿ ೭ ಕೆಜಿ, ಅಡುಗೆ ಎಣ್ಣೆ ೧ ಲೀಟರ್, ಬೇಳೆ ೧ ಕೆಜಿ, ಉಪ್ಪು ೧ ಕೆಜಿ, ಗೋಧಿಹಿಟ್ಟು-೨ ಕೆಜಿ, ಸಕ್ಕರೆ ೧ ಕೆಜಿ ಮತ್ತು ೨ ಸಾಬೂನುಗಳು). ಈ ಸಾಮಗ್ರಿಗಳು ೨ ವಾರಗಳವರೆಗೆ ಬಳಕೆಗೆ ಬರುತ್ತವೆ. ಪ್ರತಿಯೊಂದು ಕಿಟ್ಗೂ ೮೦೦ ರೂ. (ಪ್ರತಿ ಕುಟುಂಬದ ವೆಚ್ಚ) ವೆಚ್ಚವಾಗುತ್ತದೆ.
ನೀವು ಹಣಕಾಸನ್ನೂ ದಾನವಾಗಿ ನೀಡಬಹುದು. ಈ ದೇಣಿಗೆಗಳಿಗೆ ೮೦ಜಿ ಅಡಿ ತೆರಿಗೆ ವಿನಾಯ್ತಿ ನೀಡಲಾಗಿದೆ. ದಯವಿಟ್ಟು ಎನ್ಬಿಎಫ್ ಟ್ರಸ್ಟ್ನ ಈ ಕೆಳಗಿನ ಖಾತೆಗೆ ಆನ್ಲೈನ್(ಆರ್ ಟಿಜಿಎಸ್/ನೆಫ್ಟ್) ಮೂಲಕ ದೇಣಿಗೆ ನೀಡಿ.
ಖಾತೆಯ ಹೆಸರು: Namma Bengaluru Foundation
ಖಾತೆಯ ಸಂಖ್ಯೆ: 50100380994702
ಉಳಿತಾಯ ಬ್ಯಾಂಕ್ ಖಾತೆ
ಐಎಫ್ಎಸ್ಸಿ ಕೋಡ್: HDFC0000076
ಬ್ಯಾಂಕ್: HDFC Bank
ಶಾಖೆ: MG Road
ಹೆಚ್ಚಿನ ಮಾಹಿತಿಗಾಗಿ ಉಷಾ ಧನರಾಜ್ 9591143888/ 9591985287 ಅವರನ್ನು ಸಂಪರ್ಕಿಸಿ.
Post a comment