ಭೂ ದಿನ ೨೦೨೨ರ ಅಂಗವಾಗಿ, ನಮ್ಮ ಬೆಂಗಳೂರು ಪ್ರತಿಷ್ಠಾನವು ಮೌಂಟ್ ಕಾರ್ಮೆಲ್ ಸ್ವಾಯತ್ತ ಕಾಲೇಜಿನ ಸಹಯೋಗದಲ್ಲಿ ೨೦೨೨ರ ಏಪ್ರಿಲ್ ೨೨ರಂದು ಬಾಳೆಕುಂದ್ರಿ ವೃತ್ತದ ಇಂಡಿಯನ್ ಎಕ್ಸ್‌ಪ್ರೆಸ್ ಜಂಕ್ಷನ್‌ನಲ್ಲಿ “ಭೂಮಿ ಉಳಿಸಿ, ನಮ್ಮ ಭವಿಷ್ಯವನ್ನು ಉಳಿಸಿ” ಅಭಿಯಾನವನ್ನು ಆಯೋಜಿಸಿತು.
‘ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ’ ಎಂಬ ಈ ವರ್ಷದ ಭೂ ದಿನದ ಥೀಮ್‌ನೊಂದಿಗೆ, ೨೫ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳು ಈ ಅಭಿಯಾನದಲ್ಲಿ ಭಾಗಿಯಾಗಿ, ಭೂಮಿತಾಯಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿ, ಭೂಗ್ರಹದ ಜೀವವ್ಯವಸ್ಥೆಯನ್ನು ಗೌರವಿಸುವ ಅಗತ್ಯತೆ ಮತ್ತು ಅದನ್ನು ಸಂರಕ್ಷಿಸುವಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಜಾಗೃತಿ ಮೂಡಿಸಿದರು.
ನಮ್ಮ ಭೂಗ್ರಹದಲ್ಲಿ ಹೂಡಿಕೆ ಮಾಡುವಂತೆ ಜಾಗೃತಿ ಮೂಡಿಸುವ ಮತ್ತು ಭವಿಷ್ಯದ ತಲೆಮಾರುಗಳಿಗಾಗಿ ಭೂಮಿಯನ್ನು ರಕ್ಷಿಸುವ ಮತ್ತು ಉಳಿಸುವ ಉದ್ದೇಶದಿಂದ ಈ ಅಭಿಯಾನಕ್ಕೆ ಗುಂಪು ಗುಂಪಾಗಿ ಬಂದಿದ್ದ ವಿದ್ಯಾರ್ಥಿಗಳು, ‘ಮರಗಳನ್ನು ಉಳಿಸಿ, ಭೂಮಿ ಉಳಿಸಿ’, ‘ಗೋ ಗ್ರೀನ್, ಗೋ ಸೈಕ್ಲಿಂಗ್’, ‘ಸಿಗ್ನಲ್ ನಲ್ಲಿ ಎಂಜಿನ್ ಸ್ವಿಚ್‌ಆಫ್ ಮಾಡಿ ಮತ್ತು ಇಂಧನ ಉಳಿಸಿ’, ‘ಪ್ಲಾಸ್ಟಿಕ್‌ಗಳ ಬಳಕೆ ತಪ್ಪಿಸಿ’, ‘ಕೆರೆಗಳನ್ನು ಉಳಿಸಿ, ನಮ್ಮ ಬೆಂಗಳೂರು ಉಳಿಸಿ’ ಎಂಬಿತ್ಯಾದಿ ಉದ್ಘೋಷಗಳುಳ್ಳ ಫಲಕಗಳು ಮತ್ತು ಬ್ಯಾನರ್‌ಗಳನ್ನು ಹಿಡಿದು ಜಾಗೃತಿ ಮೂಡಿಸಿದರು.
Post a comment