nbf@namma-bengaluru.org
9591143888

ಅಭಿಯಾನಗಳು

ಹೊಸ ವಲಯೀಕರಣ ಬೇಡ ಎನ್ನುವ ಕೂಗು

ನಮ್ಮ ಬೆಂಗಳೂರು ಪ್ರತಿಷ್ಠಾನವು ಸಿಟಿಜನ್ ಆಕ್ಷನ್ ಫೋರಂ ಹಾಗೂ ನರಗದ ನಾನಾ ಭಾಗಗಳ ಹಲವು ನಿವಾಸಿಗಳ ಕಲ್ಯಾಣ ಸಂಘಟನೆ(ಆರ್‍ಡಬ್ಲ್ಯುಎ)ಗಳೊಡನೆ ಕೈಜೋಡಿಸಿ, ನಗರಾಭಿವೃದ್ಧಿ ಇಲಾಖೆಯ ಇತ್ತೀಚಿನ ಹೊಸ ವಲಯ ನಿಯಮಗಳ ಕರಡಿಗೆ  

“ಹೊಸ ಝೋನಿಂಗ್ ಬೇಡ’ ಎನ್ನುವ ಮೂಲಕ ಕರ್ನಾಟಕ ಸರ್ಕಾರಕ್ಕೆ ಪ್ರಬಲ ಸಂದೇಶವನ್ನು ರವಾನಿಸಿದೆ.

ಕರಡು ಅಧಿಸೂಚನೆ ಪ್ರಕಾರ, 9 ಮೀಟರ್(29.5 ಅಡಿ) ಅಗಲವಿರುವ ರಸ್ತೆಯಿರುವ ವಸತಿ ಪ್ರದೇಶಗಳಲ್ಲಿ ತರಕಾರಿ ಮತ್ತು ಹೂವಿನ ಮಳಿಗೆಗಳು, ಫಾಸ್ಟ್ ಫುಡ್ ಹಾಗೂ ಕೊಂಡೊಯ್ಯುವ ಸೌಲಭ್ಯ ಮಾತ್ರ ಇರುವ ಉಪಾಹಾರ ಗೃಹಗಳು, ವೃತ್ತಿಪರರ ಕಚೇರಿಗಳು ಹಾಗೂ 2 ಎಚ್ಪಿವರೆಗಿನ ವಿದ್ಯುತ್ ಮಗ್ಗಗಳು ಇರಬಹುದಾಗಿದೆ. 12 ಮೀಟರ್(39.5 ಅಡಿ) ಅಗಲ ರಸ್ತೆಯಿರುವ ವಸತಿ ಪ್ರದೇಶದಲ್ಲಿ ಅನುಮತಿ ನೀಡಲಾದ ಭೂಮಿ ಬಳಕೆ ಎಂದರೆ, ಚಿಲ್ಲರೆ ಅಂಗಡಿಗಳು(ತಲಾ 50 ಚದರ ಮೀಟರ್), ಮಾಂಸ ಹಾಗೂ ಕೋಳಿ ಅಂಗಡಿಗಳು ಹಾಗೂ ಕಿರಾಣಿ ಅಂಗಡಿಗಳು. ಪ್ರಸ್ತುತ 40 ಅಡಿ ಅಥವಾ ಅದಕ್ಕಿಂತ ಕಡಿಮೆ ಅಗಲದ ರಸ್ತೆಗಳಿರುವ ವಸತಿ ಪ್ರದೇಶ ಅಥವಾ ವಸತಿ ಮಿಶ್ರಿತ ಪ್ರದೇಶಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗುವುದಿಲ್ಲ.

ಯುನೈಟೆಡ್ ಬೆಂಗಳೂರು ಆಶ್ರಯದಲ್ಲಿ ಜುಲೈ 28,2017ರಂದು ಒಂದು ಸಾವಿರ ನಾಗರಿಕರು ಸಹಿ ಹಾಕಿದ 337 ಆಕ್ಷೇಪ ಪತ್ರಗಳನ್ನು ನಗರ ಮತ್ತು ಪ್ರದೇಶ ಯೋಜನಾ ಇಲಾಖೆಯ ನಿರ್ದೇಶಕರಿಗೆ ಸಲ್ಲಿಸಿದರು. ಅಧಿಸೂಚನೆ ಸಂಖ್ಯೆ ಯುಡಿಡಿ 6 ಟಿಟಿಪಿ ದಿನಾಂಕ ಜುಲೈ 1, 2017 ಹಾಗೂ ಅಧಿಸೂಚನೆ ಯುಡಿಡಿ 25 ಟಿಟಿಪಿ 2016 ದಿನಾಂಕ ಜುಲೈ 6,2017ನ್ನು ತೆಗೆದು ಹಾಕಬೇಕು ಹಾಗೂ ಬೆಂಗಳೂರಿನ ಮಾಸ್ಟರ್ ಯೋಜನೆಗೆ ಸಂಬಂಧಿಸಿದಂತೆ ತಾರ್ಕಿಕ ಹಾಗೂ ಶಾಸನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸಬೇಕು ಎಂದು ಒತ್ತಾಯಿಸಿದರು.

ನೂತನ ಕರಡು ನಿಯಮಗಳ ಅನುಷ್ಠಾನದಿಂದ ನೆರೆಹೊರೆಯಲ್ಲಿ ದಟ್ಟಣೆಯುಂಟಾಗಿ ಉಸಿರು ಕಟ್ಟುವುದಲ್ಲದೆ, ನಿರ್ಬಂಧರಹಿತ ವಾಣಿಜ್ಯೀಕರಣದಿಂದ ತಮ್ಮ ಸುರಕ್ಷತೆಗೆ ಧಕ್ಕೆಯುಂಟಾಗಲಿದೆ ಎನ್ನುವುದು ನಿವಾಸಿಗಳ ದೃಢ ನಂಬಿಕೆ. ನಿವಾಸಿಗಳು #ಹೊಸಝೋನಿಂಗ್‍ವಲಯಬೇಡ(#ಊosಚಿZoಟಿiಟಿgಃeಜಚಿ) ಆಂದೋಲನಕ್ಕೆ ಸೇರುವ ಮೂಲಕ ತಮ್ಮ ನೆರೆಹೊರೆ ವಾಣಿಜ್ಯೀಕರಣದಿಂದ ನಾಶವಾಗದಂತೆ ನೋಡಿಕೊಳ್ಳಬೇಕು ಹಾಗೂ ಸರ್ಕಾರವು ರಿಯಲ್ ಎಸ್ಟೇಟ್ ಹಾಗೂ ವ್ಯಾಪಾರಿಗಳ ಲಾಬಿಯನ್ನು ಸಂಸ್ಥಸುವುದನ್ನು ತಡೆಯಬೇಕು ಎಂದು ಯುನೈಟೆಡ್ ಬೆಂಗಳೂರು ಆಗ್ರಹಿಸುತ್ತದೆ.

#ಹೊಸ ಝೋನಿಂಗ್ ಬೇಡ ಆಂದೋಲನ

ಬೆಂಗಳೂರಿನ ಕಾನೂನುಗಳನ್ನು ಗೌರವಿಸುವ ನಾಗರಿಕರು ಕರಡು ಅಧಿಸೂಚನೆಯನ್ನು ವಿರೋಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅಂಚೆಕಾರ್ಡ್ ಕಳಿಸಿದ್ದು, ವಿವಾದಾಸ್ಪದ ಅಧಿಸೂಚನೆಯನ್ನು ವಾಪಸ್ ಪಡೆಯಬೇಕೆಂದು ಎಲ್ಲ ಜನಪ್ರತಿನಿಧಿಗಳನ್ನು ಆಗ್ರಹಿಸಿದ್ದಾರೆ.

postcard

Read more: Residents vs Commercial Establishments

Post a comment