nbf@namma-bengaluru.org
9591143888

BRACE

ಬೆಂಗಳೂರು ನಿವಾಸಿಗಳ ಸಂಘಟನೆಗಳ ಸಮಗ್ರ ಒಕ್ಕೂಟ(ಬ್ರೇಸ್)

ಎನ್‍ಬಿಎಫ್‍ನ ನಾಗರಿಕರ ಪಾಲ್ಗೊಳ್ಳುವಿಕೆಯನ್ನು ಉತ್ತೇಜಿಸುವ, ಅವಕಾಶ ಕಲ್ಪಿಸುವ ಹಾಗೂ ಪ್ರೋತ್ಸಾಹಿಸುವ ಉಪಕ್ರಮವೇ ಬ್ರೇಸ್. ಬ್ರೇಸ್ಬೆಂಗಳೂರು ನಗರದ 1,400 ವಸತಿ ಕ್ಷೇಮಾಭಿವೃದ್ಧಿ ಸಂಘಟನೆ(ಆರ್‍ಡಬ್ಲ್ಯುಎ)ಗಳು ಹಾಗೂ ನಾಗರಿಕರನ್ನು ಒಳಗೊಂಡ ನೋಂದಾಯಿತ ಒಕ್ಕೂಟ. ಆಗಸ್ಟ್ 2013ರಲ್ಲಿ ಆರಂಭವಾದ ಬ್ರೇಸ್, ಬೆಂಗಳೂರು ನಗರದ ಆರ್‍ಡಬ್ಲ್ಯುಎಗಳ ಅತಿ ದೊಡ್ಡ ಒಕ್ಕೂಟವಾಗಿದೆ.

ಎನ್‍ಬಿಎಫ್ ಬ್ರೇಸ್‍ನ ಜತೆಗೂಡಿ ಹಾಗೂ ಸಹಭಾಗಿತ್ವದಲ್ಲಿ ಬೆಂಗಳೂರಿನ ನಾಗರಿಕರು/ನಿವಾಸಿಗಳಿಂದ ಹೆಚ್ಚು ಉತ್ತರದಾಯಿತ್ವ ಮತ್ತುಪಾಲುದಾರಿಕೆಯನ್ನು ನಿರೀಕ್ಷಿಸುತ್ತದೆ. ಆರ್‍ಡಬ್ಲ್ಯುಎಗಳು ಒಟ್ಟಾಗಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಮಾತನ್ನಾಡುವುದು ಹಾಗೂ ಕ್ರಮತೆಗೆದುಕೊಳ್ಳುವುದು ಹಾಗೂ ಪ್ರಗತಿಯ ಪರಿಶೀಲನೆ ಮಾಡುವುದನ್ನು ಉತ್ತೇಜಿಸುತ್ತದೆ. ಬ್ರೇಸ್‍ನ ರಚನೆಯ ಹಿಂದೆ ಇರುವ ಸರಳ ಹಾಗೂಮೂಲಭೂತ ಸಿದ್ಧಾಂತವೆಂದರೆ, ನಮ್ಮ ಸಮಾಜದಲ್ಲಿ ನಿಜವಾದ ಬದಲಾವಣೆ ಮಾಡಬೇಕೆಂದರೆ ನಾಗರಿಕರು ಒಟ್ಟಾಗಬೇಕು ಎಂಬುದು. ಆಡಳಿತ, ಯೋಜನೆ, ಮೂಲಸೌಕರ್ಯ ಹಾಗೂ ಆಡಳಿತಕ್ಕೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜನರ ಸಹಭಾಗಿತ್ವ, ವಕೀಲತ್ವ ಹಾಗೂಕ್ರಿಯಾಶೀಲ ಸಾರ್ವಜನಿಕ ವೇದಿಕೆಯೊಂದನ್ನು ಸೃಷ್ಟಿಸುವುದು ಬ್ರೇಸ್‍ನ ಉದ್ದೇಶ.

ಉದ್ದೇಶ:   

ಉತ್ತಮ ಬೆಂಗಳೂರಿಗಾಗಿ ವಸತಿ ಸಂಘಟನೆ(ಆರ್‍ಎ)ಗಳು ಹಾಗೂ ನಾಗರಿಕ ಗುಂಪುಗಳ ಸಹಭಾಗಿತ್ವದಲ್ಲಿ ಗವರ್ನ್ ರೈಟ್, ಗವರ್ಸ್ರೆಸ್ಪಾನ್ಸಿಬ್ಲಿ(ಜಿಆರ್‍ಜಿಆರ್ ಕಾರ್ಯಕ್ರಮ, ನಮ್ಮ ಬೆಂಗಳೂರು ಪ್ರತಿಷ್ಠಾನ ಕಾಪಿರೈಟ್ ಹೊಂದಿದೆ) ಮೂಲಕ ಸುಧಾರಣೆ ಹಾಗೂ ಹೆಚ್ಚುಪಾರದರ್ಶಕತೆಯನ್ನು ಸಾಧಿಸುವುದು, ನಿರೀಕ್ಷಿಸಿದ ಅಭಿವೃದ್ಧಿಗೆ ಸೂಕ್ತವಾದ ಯೋಜನೆಯನ್ನು ರೂಪಿಸುವುದು ಹಾಗೂ ಬೆಂಗಳೂರಿನಅಭಿವೃದ್ಧಿಯಲ್ಲಿ ನಾಗರಿಕರು ಕ್ರಿಯಾಶೀಲರಾಗಿ ಹಾಗೂ ಮಾಹಿತಿಯನ್ನು ಪಡೆದುಕೊಂಡು ಪಾಲ್ಗೊಳ್ಳುವುದನ್ನು ಉತ್ತೇಜಿಸುವುದು; ಈ ಮೂಲಕದೀರ್ಘಾವಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರದ ಭವಿಷ್ಯವನ್ನು ನಿರ್ದೇಶಿಸುವುದು.

ಸದಸ್ಯತ್ವ: 

ಆಸಕ್ತಿ ಇರುವ ಯಾವುದೇ ವಸತಿ ಸಂಘಟನೆ ಅಥವಾ ನಾಗರಿಕರು ಈ ಒಕ್ಕೂಟಕ್ಕೆ ಸೇರಬಹುದಾಗಿದ್ದು, ಮಂಡಳಿ ಸಮ್ಮತಿಸಿದಲ್ಲಿ ಕಾರ್ಯನಿರ್ವಾಹಕಮಂಡಳಿಯ ಸದಸ್ಯರಾಗಬಹುದು. ನಿಯಮಿತ ಅಥವಾ ಸಕ್ರಿಯ ಸದಸ್ಯತ್ವ ಶುಲ್ಕ ನೀಡಬೇಕಿಲ್ಲ. ಜಿಎಂನ ನಿರ್ಣಯದ ಮೂಲಕ ಸದಸ್ಯತ್ವದಅರ್ಹತೆಯನ್ನು ಮರು ನಿರ್ಣಯಿಸಬಹುದು. ಒಕ್ಕೂಟದ ಚುನಾವಣೆಯಲ್ಲಿ ಪ್ರತಿ ಆರ್‍ಎಗೆ ಒಂದು ಮತದ ಹಕ್ಕು ಇರಲಿದೆ. ಸದಸ್ಯತ್ವವನ್ನುವರ್ಗಾವಣೆ ಮಾಡುವಂತಿಲ್ಲ ಹಾಗೂ ವಸತಿ ಸಂಘದ ವರ್ಗಾವಣೆ ಇಲ್ಲವೇ ವರ್ಗಾವಣೆ ಬಳಿಕ ಸದಸ್ಯತ್ವ ಕೂಡ ಕೊನೆಗೊಳ್ಳುತ್ತದೆ.

ನೈತಿಕ ಸಂಹಿತೆ:

ಎಲ್ಲ ಸದಸ್ಯರು ಕೆಳಕಂಡ ನೈತಿಕ ನಿಯಮಗಳನ್ನು ಪಾಲಿಸಬೇಕು. ಅವೆಂದರೆ;

  • ಒಕ್ಕೂಟದ ಉದ್ದೇಶಗಳ ಸಾಧನೆಗಾಗಿ ಎಲ್ಲ ಸದಸ್ಯರೂ ಕೆಲಸ ಮಾಡಬೇಕು
  • ಸದಸ್ಯರು ಸಂಘಟನೆಯ ಒಳಿತಿಗೆ ಮಾತ್ರವೇ ಕೆಲಸ ಮಾಡಬೇಕು
  • ಸದಸ್ಯರು ಬ್ರೇಸ್‍ನ ನಿಯಮಗಳು ಹಾಗೂ ನಿಬಂಧನೆಗಳನ್ನು ಅನುಸರಿಸಬೇಕು. ಸಭೆಗಳು, ಕಾರ್ಯಕ್ರಮಗಳು ಇಲ್ಲವೇ ಬೇರಾವುದೇ ಸಮಾರಂಭದಲ್ಲಿ ಘನತೆ ಹಾಗೂ ಗಾಂಭೀರ್ಯದಿಂದ ವರ್ತಿಸಬೇಕು.
  • ಸದಸ್ಯರು ಸೂಕ್ತವಾಗಿ ವರ್ತಿಸದಿದ್ದಲ್ಲಿ ಶಿಸ್ತು ಕ್ರಮ ತೆಗೆದುಕೊಳ್ಳುವ ಅಧಿಕಾರ ಬ್ರೇಸ್‍ಗಿದೆ. ಈ ಸಂಬಂಧ ಕಾರ್ಯಕ್ರಮ/ಯೋಜನೆಯ ಮುಖ್ಯಸ್ಥ ಅಥವಾ ಮಂಡಳಿಯ ಸದಸ್ಯರು ನಿರ್ಧಾರ ತೆಗೆದುಕೊಳ್ಳಬಹುದು. ಆದರೆ, ಅಧ್ಯಕ್ಷರ ಅನುಮತಿ ಅಂತಿಮ.
  • ಬ್ರೇಸ್‍ನ ಉದ್ದೇಶಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸದಸ್ಯರನ್ನು ವಜಾಗೊಳಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ. ಆದರೆ, ಅಂಥ ಸದಸ್ಯರಿಗೆ ವಿವರಣೆ ಕೊಡಲು ಅವಕಾಶ ಕೊಡಲಾಗುತ್ತದೆ.
  • ಯಾವುದೇ ಸದಸ್ಯ ನಿಯಮ ಹಾಗೂ ನಿಬಂಧನೆಗಳನ್ನು ಅನುಸರಿಸದೆ ಇದ್ದರೆ ಅಥವಾ ಒಕ್ಕೂಟ/ಸದಸ್ಯರ ಹಿತಾಸಕ್ತಿಗೆ ವಿರುದ್ಧವಾಗಿ ವರ್ತಿಸುತ್ತಿದ್ದರೆ, ಅಂಥವರನ್ನು ವಜಾಗೊಳಿಸಬಹುದಾಗಿದೆ.
  • ವಜಾಗೊಂಡ ಸದಸ್ಯರ ಸದಸ್ಯತ್ವ ಮಂಡಳಿ ಇಲ್ಲವೇ ಶಿಸ್ತು ಸಮಿತಿಯ ಶಿಫಾರಸಿನ ಮೇಲೆ, ವಿಚಾರಣೆ ಬಳಿಕ, ಮುಂದುವರಿಯಲಿದೆ ಇಲ್ಲವೇ ವಜಾಗೊಳ್ಳುತ್ತದೆ.
  • ವಜಾಗೊಂಡ ಸದಸ್ಯರು ಮರು ಸೇರ್ಪಡೆ ಆಗುವವರೆಗೆ, ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಅಥವಾ ಸಮಿತಿ ಇಲ್ಲವೇ ಕಾರ್ಯಪಡೆಯ ಭಾಗವಾಗುವಂತಿಲ್ಲ.
  • ಸದಸ್ಯ ಗುಂಪುಗಳು ಆಡಳಿತ ನಿರ್ವಹಣೆಗೆ ಸಂಬಂಧಿಸಿದ ವಿಷಯಗಳನ್ನು ಬಗೆಹರಿಸಿಕೊಳ್ಳಲು ತಾವಾಗಿಯೇ ಕೋರಿದಲ್ಲಿ, ಬ್ರೇಸ್ ಕಾನೂನು ನೆರವು ನೀಡಿ ಬೆಂಬಲಿಸುತ್ತದೆ. ಆದರೆ, ಆರ್ಥಿಕ ಹೊಣೆ ಹೊರುವುದಿಲ್ಲ.

ಬೆಂಗಳೂರು ರೆಸಿಡೆಂಟ್ಸ್ ಅಸೋಸಿಯೇಷನ್ಸ್ ಕನ್ಫೆಡೆರೇಷನ್ ಎನ್‍ಸೆಂಬಲ್‍ನ ಪ್ರಮಾಣೀಕೃತ ಚಾರ್ಟರ್ ಹಾಗೂ ಬೈಲಾಗಳು ಹಾಗೂ ಎಂಒಯುಕೆಳಗೆ ಲಭ್ಯವಿದೆ:

ಬ್ರೇಸ್ ಮೆಮೊರಾಡಂ: 

ಒಂದುವೇಳೆ ನೀವು ಬ್ರೇಸ್‍ನ್ನು ಸೇರಲು ಇಚ್ಛಿಸಿದಲ್ಲಿ, ಕಡತವನ್ನು ಡೌನ್‍ಲೋಡ್ ಮಾಡಿಕೊಂಡು, ಭರ್ತಿ ಮಾಡಿ ನಮ್ಮ ಇಮೇಲ್‍ಗೆ ಕಳಿಸಿ: – nbf@kannada.namma-bengaluru.org

Braceಬ್ರೇಸ್ ಅರ್ಜಿ:

Post a comment