ನಮ್ಮ ಬೆಂಗಳೂರು ಫೌಂಡೇಶನ್ 2020 ರ ಆಗಸ್ಟ್ 4 ರ ಮಂಗಳವಾರ 5PM ರಿಂದ 6PM ನಡುವೆ ಸಮತೂಲಿತ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪರಿಸರ ವಿಜ್ಞಾನದ ಕುರಿತು ಪ್ಯಾನಲ್ ಚರ್ಚೆಗೆ (ವೆಬಿನಾರ್) ಅವಕಾಶ ಮಾಡಿಕೊಟ್ಟಿತು.
ಈ ಕುರಿತಂತೆ ಸಂಭವನೀಯ ಪರಿಹಾರವನ್ನು ಕಂಡುಹಿಡಿಯಲು ಮಾಧ್ಯಮ, ಅಕಾಡೆಮಿ ಮತ್ತು ಸರ್ಕಾರಿ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಈ ಕೆಳಗಿನ ಗಣ್ಯ ಅತಿಥಿಗಳನ್ನ ಒಳಗೊಂಡಿತ್ತು.
ಸಂಸತ್ ಸದಸ್ಯರು: ಶ್ರೀ ರಾಜೀವ್ ಚಂದ್ರಶೇಖರ್ ಮತ್ತು ಶ್ರೀ ಪಿಸಿ ಮೋಹನ್
• ಎಂ.ಎಸ್ ವಿ ಮಂಜುಳಾ ಐಎಎಸ್, ಆಯುಕ್ತರು, ನಗರ ಭೂ ಸಾರಿಗೆ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ
• ಡಾ. ಎಚ್ ಆರ್ ಮಹಾದೇವ್ ಐಎಎಸ್, ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
• ಡಾ. ಆಶಿಶ್ ವರ್ಮಾ, ಸಹಾಯಕ ಪ್ರಾಧ್ಯಾಪಕರು, ಸಾರಿಗೆ ವ್ಯವಸ್ಥೆಗಳು (ಎಂಜಿನಿಯರಿಂಗ್ ಇಲಾಖೆ), ಭಾರತೀಯ ವಿಜ್ಞಾನ ಸಂಸ್ಥೆ
• ಡಾ. ಮುತ್ತುಕುಮಾರ್ ಅರುಣಾಚಲಂ, ವಿಜ್ಞಾನಿ, ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆ
• ಮಹೇಶ್ ಭಟ್, ಈ ದೇಶದ ಹಿರಿಯ ಛಾಯಾಗ್ರಾಹಕರು ಮತ್ತು ಬೆಂಗಳೂರಿನಲ್ಲಿ ಗಣ್ಯ ಪರಿಸರ ಕಾರ್ಯಕರ್ತ
ಪವರ್ ಪ್ಯಾಕ್ಡ್ ಪ್ಯಾನಲ್ ಅನ್ನು ಪತ್ರಕರ್ತ, ನಟ ಮತ್ತು ನಾಗರಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ಅವರು ನಡೆಸಿಕೊಟ್ಟಿದ್ದಾರೆ.