nbf@namma-bengaluru.org
9591143888

ಮರಗಳನ್ನು ಉಳಿಸಿ

ಬನ್ನೇರುಘಟ್ಟ ಉಳಿಸಿ ಅಭಿಯಾನ

ನಮ್ಮ ಬೆಂಗಳೂರು ಪ್ರತಿಷ್ಠಾನವು ಪ್ರಾಜೆಕ್ಟ್ ವೃಕ್ಷ ಪ್ರತಿಷ್ಠಾನದೊಂದಿಗೆ ಸೇರಿ, ಬೆಂಗಳೂರು ನಗರ ಜಿಲ್ಲೆಯ ಉಪ ಆಯುಕ್ತರು ಮತ್ತು ಜಿಲ್ಲಾಧಿಕಾರಿಯವರಾದ ಶ್ರೀ ಮಂಜುನಾಥ್ ಅವರನ್ನು ಭೇಟಿಯಾಗಿ, ಅರಣ್ಯ ಇಲಾಖೆಯ ಒಡೆತನದಲ್ಲಿರುವ ಭೂಮಿಯನ್ನು ಕಂದಾಯ ಭೂಮಿಯಾಗಿ ಮಾರ್ಪಾಟು ಮಾಡುವುದನ್ನು ವಿರೋಧಿಸಿ ಮನವಿಪತ್ರವನ್ನು ಸಲ್ಲಿಸಿತು. ಜೊತೆಗೆ, ತಪ್ಪು ಮಾಡಿರುವಂಥ ಎಲ್ಲ ಕಂದಾಯ ಅಧಿಕಾರಿಗಳ ವಿರುದ್ಧ ತನಿಖೆಗೆ ಆಗ್ರಹಿಸಿದ್ದಲ್ಲದೇ, ಆ ಭೂಮಿಯ ಒಡೆತನದ ಹಕ್ಕನ್ನು ಅರಣ್ಯ ಇಲಾಖೆಗೆ ಮರಳಿ ನೀಡಬೇಕು ಮತ್ತು ಆ ಮೂಲಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ್ನು ರಕ್ಷಿಸಬೇಕು ಎಂದೂ ಒತ್ತಾಯಿಸಲಾಯಿತು. 

ಆನೆ ಕಾರಿಡಾರ್ ಅಭಿವೃದ್ಧಿಪಡಿಸಲು ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲೂ ಇರುವ ೧೦೦೦ ಎಕರೆ ಭೂಮಿಯ ಸರ್ವೇ ಕಾರ್ಯವನ್ನು ತ್ವರಿತಗೊಳಿಸುವಂತೆಯೂ ಪತ್ರದಲ್ಲಿ ಕೋರಲಾಯಿತು. ಈಗ ಇಲ್ಲಿ ಸಮೀಕ್ಷೆಯು ಇನ್ನೂ ನಡೆಯುತ್ತಿದ್ದರೂ, ಈಗಾಗಲೇ ಈ ಪ್ರದೇಶದಲ್ಲಿ ಭೂ ಒತ್ತುವರಿದಾರರು ಪಕ್ಕದಲ್ಲೇ ಇರುವ ಕೆರೆಯ ಜಲಾನಯನ ಪ್ರದೇಶವನ್ನು ನಾಶ ಮಾಡಿ ಕೃಷಿ ಚಟುವಟಿಕೆ ಆರಂಭಿಸಿದ್ದಾರೆ.

Post a comment