ಬೆಂಗಳೂರಿನ ಒಳಗೆ ಹಾಗೂ ಹೊರಗೆ ಕಳೆದ ಶತಮಾನದ ಅವಧಿಯಲ್ಲಿ ನೀರಾವರಿಗೆಂದು ನಿರ್ಮಿಸಿದ ನೂರಾರು ಮನುಷ್ಯ ನಿರ್ಮಿತ ಕೆರೆಗಳಿದ್ದವು. ಇವುಗಳು ಕುಡಿಯುವ ನೀರು, ಬಟ್ಟೆ ಒಗೆಯಲು, ಮೀನುಗಾರಿಕೆ ಹಾಗೂ ಹಲವು ಜಲ ಪ್ರಭೇದಗಳ ಪ್ರಮುಖ ಮೂಲಗಳಾಗಿದ್ದವು. ನಗರ ಬೆಳೆದಂತೆ ಕೃಷಿ ಭೂಮಿಗಳು ಕಟ್ಟಡಗಳಾಗಿ ಬದಲಾದವು ಮತ್ತು ನೀರಾವರಿ ಮೂಲಗಳಾಗಿ ಕೆರೆಗಳ ಪ್ರಾಮುಖ್ಯತೆ ಕುಸಿಯಿತು. ಕೆಲವು ಸಾಂಪ್ರದಾಯಿಕ ಬಳಕೆಗಳು ಅಂದರೆ, ವಸ್ತ್ರ ತೊಳೆಯುವಿಕೆ, ಮೀನುಗಾರಿಕೆ ಮತ್ತು ಜೊಂಡಿನ ಸಂಗ್ರಹ ಮುಂದುವರಿದರೂ, ನಗರೀಕರಣದ ಪರಿಸ್ಥಿತಿಯಲ್ಲಿ ಪಾರಿಸರಿಕ ಸೌಲಭ್ಯಗಳು ಅಂದರೆ, ಮನರಂಜನೆ ಸ್ಥಳ, ಸೂಕ್ಷ್ಮ ಪಾರಿಸರಿಕ ಉಪಯುಕ್ತತೆ, ದೂರದ ದೇಶಗಳಿಂದ ಮರಿ ಮಾಡುವಿಕೆ ಉದ್ದೇಶದಿಂದ ಆಗಮಿಸುವ ವಲಸೆ ಹಕ್ಕಿಗಳು ಸೇರಿದಂತೆ ಪಕ್ಷಿ ಪ್ರಭೇದಗಳು ಹಾಗೂ ಜಲಚರಗಳ ವಾಸಸ್ಥಾನವಾಗಿ, ಕೆಳ ಹಂತದ ಪ್ರದೇಶದಲ್ಲಿ ತರಕಾರಿ ಬೆಳೆಯುವಿಕೆ, ಅಂತರ್ಜಲದ ಮರುದುಂಬುವಿಕೆ ಇತ್ಯಾದಿ ಹೆಚ್ಚು ಪ್ರಾಮುಖ್ಯತೆ ಗಳಿಸಿದವು.
Post a comment