ಬೆಂಗಳೂರು ಏಷ್ಯಾದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮೆಟ್ರೋಪೊಲಿಸ್. 2001ರಿಂದ 2011ರ ದಶಕದಲ್ಲಿ ಬೆಳವಣಿಗೆ ಪ್ರಮಾಣ ಶೇ.45ನ್ನು ದಾಟಿದ್ದು, ಎಲ್ಲ ಕಾರಣಬದ್ಧ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿಬಿಟ್ಟಿದೆ. ಬೆಂಗಳೂರು ಈ ಪ್ರಾಂತ್ಯದ ಆರ್ಥಿಕ ಶಕ್ತಿಕೇಂದ್ರ ಮಾತ್ರವಲ್ಲದೆ, ಪೂರ್ವದ ಸಿಲಿಕಾನ್ ಕಣಿವೆ ಎಂದು ಜಾಗತಿಕವಾಗಿ ಗುರುತಿಸಲ್ಪಟ್ಟಿದೆ.
ಆದರೆ, ಮೂಲಭೂತ ಸೌಲಭ್ಯದ ಅಡೆತಡೆಗಳು ಬೆಂಗಳೂರು ಮೆಟ್ರೋಪಾಲಿಟನ್ ಪ್ರಾಂತ್ಯ(ಬಿಎಂಆರ್)ದ ಒಟ್ಟಾರೆ ಬೆಳವಣಿಗೆಗೆ ಅಡಚಣೆಯುಂಟು ಮಾಡಿವೆ. ನಗರದೊಳಗಿನ ಪ್ರಮುಖ ರಸ್ತೆಗಳಲ್ಲಿನ ವಿಸ್ತಾರ ಮತ್ತು ಸಾಮಥ್ರ್ಯದ ಅನುಪಾತವು ಅಸಮತೂಕದಲ್ಲಿರುವುದು, ನಗರದಲ್ಲಿ ಸಂಚಾರ ತೀವ್ರ ದಟ್ಟಣೆಯ ಸೂಚನೆ. ಕೇಂದ್ರ ಪ್ರದೇಶಗಳಲ್ಲಿ ರಸ್ತೆಯ ಸಾಮಥ್ರ್ಯವನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ವಿಸ್ತರಿಸುವುದು ಸಾಧ್ಯವಿರುವುದರಿಂದ, ಆದಷ್ಟು ಬೇಗ ಬೆಂಗಳೂರನ್ನು ದಟ್ಟಣೆರಹಿತವಾಗಿ ಮಾಡುವ ಅಗತ್ಯವಿದೆ. ಈ ಸಂದರ್ಭದಲ್ಲಿ ನಗರದೊಳಗೆ ರಸ್ತೆ ಮೂಲಭೂತ ಸೌಲಭ್ಯವನ್ನು ಮೇಲ್ದರ್ಜೆಗೇರಿಸು ವುದು ಮಾತ್ರವಲ್ಲದೆ, ಬಿಎಂಆರ್ ಒಳಗೆ ಸಮಗ್ರ ಸಾರಿಗೆ ಮೂಲಭೂತ ಸೌಲಭ್ಯವನ್ನು ಸೃಷ್ಟಿಸುವ ಮೂಲಕ ಬೆಳೆಯುತ್ತಿರುವ ನಗರದ ಪ್ರಸ್ತುತದ ಹಾಗೂ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಮುಂದಾ ಗಬೇಕಿದೆ.
ಸೂಕ್ಷ್ಮ ಮೂಲಭೂತ ಸೌಕರ್ಯದ ಹೆಚ್ಚಳ ಹಾಗೂ ಮೇಲ್ದರ್ಜೆಗೇರಿಸುವಿಕೆಗೆ ಅಪಾರ ಹೂಡಿಕೆ ಅಗತ್ಯವಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ, ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯಗಳು ಹಲವು ಕೇಂದ್ರ ಸಚಿವಾಲಯಗಳ ಜೊತೆಗೂಡಿ, ಬೆಂಗಳೂರಿನ ಹೆಚ್ಚಬಹುದಾದ ಆರ್ಥಿಕ ಬೆಳವಣಿಗೆ ಹಾಗೂ ಜನಸಂಖ್ಯೆ ದಟ್ಟಣೆಯನ್ನು ಪರಿಗಣಿಸಿ ಅಗತ್ಯ ಮೂಲಸೌಲಭ್ಯವನ್ನು ಒಟ್ಟುಗೂಡಿಸಬೇಕಿದೆ.
ನಮ್ಮ ಬೆಂಗಳೂರು ಪ್ರತಿಷ್ಠಾನವು ಫೆಬ್ರವರಿ 3,2016ರಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ, ಬೆಂಗಳೂರು ಅಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಶ್ರೀ ಕೆ.ಜೆ.ಜಾರ್ಜ್, ಕೇಂದ್ರ ರಾಸಾಯನಿಕ ಹಾಗೂ ಗೊಬ್ಬರ ಸಚಿವ ಶ್ರೀ ಅನಂತ್ ಕುಮಾರ್, ಹಲವು ನಗರ ಯೋಜನೆ ಪರಿಣತರು ಹಾಗೂ ನಾಗರಿಕರ ಪ್ರತಿನಿಧಿಗಳು ಪಾಲ್ಗೊಂಡಿದ್ದ “ಬೆಂಗಳೂರಿನ ಸಾರಿಗೆ ಸವಾಲುಗಳು’ ಕುರಿತ ಸಭೆಯೊಂದನ್ನು ಹಮ್ಮಿಕೊಂಡಿತ್ತು. ಶ್ರೀ ಕೆ.ಜೆ. ಜಾರ್ಜ್ ಹಾಗೂ ಶ್ರೀ ಅನಂತ್ ಕುಮಾರ್ ಬೆಂಗಳೂರಿನ ಸಾರಿಗೆ ಮೂಲಸೌಲಭ್ಯವನ್ನು ಸುಧಾರಿಸುವ ಅಗತ್ಯವನ್ನು ಎತ್ತಿ ಹೇಳಿದರಲ್ಲದೆ, ಪೆರಿಫೆರಲ್ ವೃತ್ತ ರಸ್ತೆ(ಪಿಆರ್‍ಆರ್), ಉಪಗ್ರಹ ನಗರ ವೃತ್ತ ರಸ್ತೆ(ಎಸ್‍ಟಿಆರ್‍ಆರ್) ಹಾಗೂ ಪ್ರಯಾಣಿಕ ರೈಲು ವ್ಯವಸ್ಥೆ(ಸಿಆರ್‍ಎಸ್)ನ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು.
ಬೆಂಗಳೂರಿನ ಸಾರಿಗೆ ಸವಾಲುಗಳಿಗೆ ಪರಿಹಾರಗಳನ್ನು ಒಳಗೊಂಡ ಪ್ರಸ್ತಾವವನ್ನು ಸಲ್ಲಿಸಬೇಕೆಂದು ಸಭೆಯಲ್ಲಿದ್ದ ಭಾಗಿದಾರರಿಗೆ ನಿತಿನ್ ಗಡ್ಕರಿ ಸಲಹೆ ನೀಡಿದರು. ಪರಿಹಾರಗಳ ಸಮಗ್ರ ಚೌಕಟ್ಟನ್ನು ರೂಪಿಸಿ, ಎಂಓಆರ್‍ಟಿಎಚ್‍ಗೆ ಸಲ್ಲಿಸುವ ಜವಾಬ್ದಾರಿಯನ್ನು ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ನಮ್ಮ ಬೆಂಗಳೂರು ಪ್ರತಿಷ್ಠಾನಕ್ಕೆ ವಹಿಸಿದರು. ಬೆಂಗಳೂರು ಮೆಟ್ರೋಪಾಲಿಟನ್ ಮೊಬಿಲಿಟಿ ಯೋಜನೆಯು ನಮ್ಮ ಬೆಂಗಳೂರಿನಲ್ಲಿ (ಅವರ್ ಬೆಂಗಳೂರು) ಸಂಚಾರ, ಸಂಪರ್ಕ ಹಾಗೂ ಸಾಮಥ್ರ್ಯವನ್ನು ಹೆಚ್ಚಿಸುವ ಕುರಿತು ಸರ್ಕಾರದ ಏಜೆನ್ಸಿಗಳು, ನಗರ ತಜ್ಞರು, ಸಾರಿಗೆ ಯೋಜಕರು ಹಾಗೂ ನಾಗರಿಕರ ವಿವರವಾದ ಚರ್ಚೆಯ ಫಲಿತವಾಗಿತ್ತು.
ನಗರದಲ್ಲಿ ನಡೆಯುತ್ತಿರುವ ಹಲವು ಮೂಲಭೂತ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು ವರದಿಯನ್ನು ಸಿದ್ಧಪಡಿಸುವ ಕಾರ್ಯ ನಡೆಯುತ್ತಿದೆ.
More
- Interactive session with Nitin Gadkari on Transport Challenges of Bengaluru (Photo gallery with description)
Post a comment