ವಾಣಿಜ್ಯ ಮತ್ತು ವಸತಿ ಕಟ್ಟಡಗಳಲ್ಲಿ ವಿದ್ಯುತ್ ಸರಬರಾಜಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ ಕಡ್ಡಾಯಗೊಳಿಸುವಂತೆ ನಮ್ಮ ಬೆಂಗಳೂರು ಪ್ರತಿಷ್ಠಾನದಿಂದ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ....
ಬಿಡಿಎ ಆರ್‌ಎಂಪಿ ೨೦೪೧ ‘ಬೇಡ’ ಎಂದ ನಾಗರಿಕ ಗುಂಪುಗಳು
ಬೆಂಗಳೂರು ಸ್ಥಳೀಯ ಯೋಜನಾ ಪ್ರದೇಶಕ್ಕಾಗಿ ಆರ್‌ಎಂಪಿ ೨೦೪೧ ಅನ್ನು ಸಿದ್ಧಪಡಿಸಲು ಸಲಹೆಗಾರರ ಆಯ್ಕೆಗಾಗಿ ಬಿಡಿಎ(ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ಕರೆದಿದ್ದ ಟೆಂಡರ್‌ಗೆ ಸಂಬಂಧಿಸಿ, ನಮ್ಮ ಬೆಂಗಳೂರು ಪ್ರತಿಷ್ಠಾನವು ವಿವಿಧ ನಗರ ಯೋಜಕರು, ತಜ್ಞರು, ವಸತಿ ಬಡಾವಣೆಗಳ ಕ್ಷೇಮಾಭಿವೃದ್ಧಿ ಸಂಘಗಳು(ಆರ್‌ಡಬ್ಲ್ಯುಎಗಳು) ಮತ್ತು ವಿವಿಧ ವ್ಯಕ್ತಿಗಳೊಂದಿಗೆ ಸಮಾಲೋಚನೆ ನಡೆಸಿ, ಬಿಡಿಎ ಕೈಗೊಂಡಿರುವ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿತು. ಏಕೆಂದರೆ, ನಗರಕ್ಕೆ ಸಂಬಂಧಿಸಿದ ಮಾಸ್ಟರ್‌ಪ್ಲ್ಯಾನ್ ತಯಾರಿಸಬೇಕಾಗಿರುವುದು ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ(ಬಿಎಂಪಿಸಿ)ಯೇ ಹೊರತು ಬಿಡಿಎಯಾಗಲೀ ಅಥವಾ…...
ಕರ್ನಾಟಕ ಮಹಾನಗರ ಪಾಲಿಕೆ ತಿದ್ದುಪಡಿ ಕಾಯ್ದೆ 2013
ಕರ್ನಾಟಕ ರಾಜ್ಯದಲ್ಲಿ ಮಹಾನಗರ ಪಾಲಿಕೆಗಳ ಸ್ಥಾಪನೆಗೆ ಸಂಬಂಧಿಸಿದ ಕಾನೂನುಗಳನ್ನು ಕ್ರೋಡಿಕರಿಸಲು ಮತ್ತು ತಿದ್ದುಪಡಿ ಮಾಡಲು ಕರ್ನಾಟಕ ಮಹಾನಗರ ಪಾಲಿಕೆ ತಿದ್ದುಪಡಿ ಕಾಯ್ದೆ 2013 ರಚಿಸಲಾಗಿದೆ. ರಾಜ್ಯದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ನಗರ ಮುನ್ಸಿಪಲ್ ಕೌನ್ಸಿಲ್ (ಸಿಎಂಸಿ), ಟೌನ್ ಮುನ್ಸಿಪಲ್ ಕೌನ್ಸಿಲ್ (ಟಿಎಂಸಿ), ಪಟ್ಟಣ ಪಂಚಾಯತ್ (ಟಿಪಿ) ಮತ್ತು ಅಧಿಸೂಚಿತ ಪ್ರದೇಶ ಸಮಿತಿಗಳು (ಎನ್‌ಎಸಿ) ಹೊರತುಪಡಿಸಿ 10 ನಗರ ನಿಗಮಗಳು (ಸಿಸಿಗಳು) ಇವೆ. Read more...
- 1
- 2