ಕೇಂದ್ರ ರಾಜ್ಯ ಸಚಿವರಾದ ಶ್ರೀ ರಾಜೀವ್ ಚಂದ್ರಶೇಖರ್, ಬೆಂಗಳೂರಿನ ಎಚ್‌ಸಿಜಿ ಆಸ್ಪತ್ರೆಯ ಡೀನ್ ಡಾ. ವಿಶಾಲ್ ರಾವ್ ಮತ್ತುಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಶ್ವಾಸಕೋಶಶಾಸ್ತ್ರದ ನಿರ್ದೇಶಕರಾದ ಡಾ. ವಿವೇಕ್ ಪಡೆಗಲ್ ಅವರು ಬೆಂಗಳೂರಿನ ನಾಗರಿಕರು ಮತ್ತು ಆರ್‌ಡಬ್ಲ್ಯೂಎಗಳೊಂದಿಗೆ ಕೋವಿಡ್ ೧೯ ಮೂರನೇ ಅಲೆಯನ್ನು ಹೇಗೆ ತಡೆಯುವುದು ಎಂಬುದರ ಕುರಿತು ಸಂವಾದ ನಡೆಸಿದರು. ಮೂರನೇ ಅಲೆಯನ್ನು ತಡೆಗಟ್ಟಲು ಜಾಗರೂಕರಾಗಿರಬೇಕು ಮತ್ತು ಕೋವಿಡ್ ಸೂಕ್ತವಾದ ನಡವಳಿಕೆಯನ್ನು ಅಭ್ಯಾಸ ಮಾಡುವ ಅಗತ್ಯವನ್ನು ಗಣ್ಯರು ಒತ್ತಿ ಹೇಳಿದರು. ಡಾ. ವಿಶಾಲ್ ರಾವ್ ಮತ್ತು ಡಾ. ವಿವೇಕ್ ಅವರು ಪಡೆಗಲ್ ಕೋವಿಡ್ ತಡೆಗಟ್ಟುವಲ್ಲಿ ಮುಖಗವಸು, ಲಸಿಕೆ, ಪರೀಕ್ಷೆ ಮತ್ತು ಟ್ರ್ಯಾಕಿಂಗ್‌ನ ಮಹತ್ವದ ಕುರಿತು ಮಾತನಾಡಿದರು.

ವಿಡಿಯೋ ಲಿಂಕ್: