ಡಾನ್ ಉತ್ಸವ – ಜಾಯ್ ಆಫ್ ಗಿವಿಂಗ್ ವೀಕ್ – ಇದು ಭಾರತದ ‘ನೀಡುವ ಹಬ್ಬ’. 2009 ರಲ್ಲಿ ಪ್ರಾರಂಭವಾದ ಈ ಉತ್ಸವವನ್ನು ಪ್ರತಿವರ್ಷ ಆಚರಿಸಲಾಗುತ್ತದೆ – ಗಾಂಧಿ ಜಯಂತಿಯಿಂದ ಪ್ರಾರಂಭವಾಗಿ – ಅಕ್ಟೋಬರ್ 2 ರಿಂದ 8 ರವರೆಗೆ. ಆಟೋ ರಿಕ್ಷಾ ಚಾಲಕರಿಂದ ಸಿಇಒಗಳು, ಶಾಲಾ ಮಕ್ಕಳು ಸೆಲೆಬ್ರಿಟಿಗಳು, ಗೃಹಿಣಿಯರು, ಮಾಧ್ಯಮ ಸಿಬ್ಬಂದಿಗಳು, ಎಲ್ಲ ವರ್ಗದ ಲಕ್ಷಾಂತರ ಜನರು ಅವರ ಸಮಯ, ಹಣ, ಸಂಪನ್ಮೂಲಗಳು ಅಥವಾ ಕೌಶಲ್ಯಗಳನ್ನು ಮತ್ತೆ ಸಮಾಜಕ್ಕೆ ನೀಡಲು ಈ ವಾರದಲ್ಲಿ ಒಗ್ಗೂಡುತ್ತಾರೆ.
2016 ರಲ್ಲಿ, ನಮ್ಮ ಬೆಂಗಳೂರು ಪ್ರಶಸ್ತಿಗಾಗಿ ಪ್ರತಿಷ್ಠಿತ 5 ವಿಜೇತರಿಗೆ ಕೊಡುಗೆಗಳನ್ನು ಸಂಗ್ರಹಿಸಲು ನಮ್ಮ ಬೆಂಗಳೂರು ಪ್ರತಿಷ್ಠಾನವು ಡಾನ್ ಉತ್ಸವ್ ಜೊತೆ ಪಾಲುದಾರಿಕೆ ಮಾಡಿಕೊಂಡಿತು. ಅವುಗಳೆಂದರೆ:
ಶಂಕರ ಕಣ್ಣಿನ ಆಸ್ಪತ್ರೆ – 2009 ರಲ್ಲಿ ನಮ್ಮ ಬೆಂಗಳೂರು ಪ್ರಶಸ್ತಿ ಪುರಸ್ಕೃತ, ಶಂಕರ ಐ ಫೌಂಡೇಶನ್ ಲಾಭರಹಿತ ಸಮುದಾಯ ಕಣ್ಣಿನ ಆರೈಕೆ ಸಂಸ್ಥೆಯಾಗಿದ್ದು, ಇದು ಭಾರತದಿಂದ ತಡೆಗಟ್ಟಬಹುದಾದ ಮತ್ತು ಗುಣಪಡಿಸಬಹುದಾದ ಅಂಧತ್ವವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತದೆ. ಈಗ ಸುಮಾರು 4 ದಶಕಗಳವರೆಗೆ ದಣಿವರಿಯದೆ ಕೆಲಸ ಮಾಡುತ್ತಿರುವ ಫೌಂಡೇಶನ್ನ ಪ್ರಮುಖ ಉದ್ದೇಶವೆಂದರೆ ಬಲವಾದ ಸೇವಾಧಾರಿತ ತಂಡದ ಮೂಲಕ ಸಾಟಿಯಿಲ್ಲದ ಕಣ್ಣಿನ ಆರೈಕೆಯನ್ನು ಒದಗಿಸುವುದು.
ಪ್ರಾರ್ಥನ ಕೌಲ್ – ನಮ್ಮ ಬೆಂಗಳೂರು ಪ್ರಶಸ್ತಿ ಪುರಸ್ಕೃತ ’ವರ್ಷದ ಸಾಮಾಜಿಕ ಉದ್ಯಮಿ, ಶ್ರೀಮತಿ. ಪ್ರಾರ್ಥನಾ ಅನ್ಕಾಲ್ಕರ್ ಕೌಲ್ ಅಸಂಖ್ಯಾತ ವಿಭಿನ್ನ ಸಾಮರ್ಥ್ಯದ ಜನರ ಜೀವನವನ್ನು ಬದಲಾಯಿಸಿದ್ದಾರೆ. ತನ್ನ ಇ-ಕಾಮರ್ಸ್ ಪ್ಲಾಟ್ಫಾರ್ಮ್ನೊಂದಿಗೆ – ಗಿಫ್ಟ್ಏಬಲ್ಡ್ – ಸ್ಪೂರ್ತಿದಾಯಕ ರೂಪಾಂತರವನ್ನು ರಚಿಸುವುದು – ಈ ಮಾಜಿ ಟೆಕ್ಕಿ ಈಗಾಗಲೇ ಹಲವಾರು ಜನರ ಮೇಲೆ ಶಾಶ್ವತವಾದ ಪ್ರಭಾವ ಬೀರಿದ್ದಾರೆ. ವಿಕಲಚೇತನರಿಗೆ ಸಹಾಯ ಮಾಡುವ ತಮ್ಮ ದೃಷ್ಟಿಕೋನಕ್ಕೆ ಶಕ್ತಿತುಂಬಿದ ಪ್ರಾರ್ಥನಾ ವಿಕಲಾಂಗ ಜನರಿಗೆ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳುವಳಿಕೆ ನೀಡುವ ಪ್ರಯಾಣವನ್ನು ಕೈಗೊಂಡಿದ್ದಾರೆ. ಸಂವಹನವು ಅಂಗವೈಕಲ್ಯ ಹೊಂದಿರುವ ಜನರ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ, ವಿಶೇಷವಾಗಿ ಶ್ರವಣದೋಷವುಳ್ಳ ಜನರು, ಹೆಚ್ಚಿನ ಸಂದರ್ಭಗಳಲ್ಲಿ ಮಾಹಿತಿಯ ಪಡೆಯಲು ಸಾಧ್ಯವಾಗುವುದೇ ಇಲ್ಲ. ಇದಕ್ಕಾಗಿ ‘ಅಂಗವಿಕಲರಿಗೆ ಆರೋಗ್ಯ ವಿಷಯಗಳು’ ಎಂಬ ಪ್ರಯತ್ನ ಪ್ರಾರಂಭಿಸಿರುವ ಪ್ರಾರ್ಥನಾ ಮತ್ತು ತಂಡವು 500 ಕಿವುಡರಿಗೆ ವಿವಿಧ ಆರೋಗ್ಯ ಸಮಸ್ಯೆಗಳ ಬಗ್ಗೆ ತಿಳಿಸಲು ಮತ್ತು ಕರ್ನಾಟಕದಾದ್ಯಂತ 10 ಆಸ್ಪತ್ರೆಗಳನ್ನು ಸಂವೇದನಾಶೀಲಗೊಳಿಸಲು ಆಶಿಸುತ್ತಿದೆ.
ಅನಿರುದ್ಧ್ ದತ್ – 2 015 ರ ರೈಸಿಂಗ್ ಸ್ಟಾರ್ ನಮ್ಮ ಬೆಂಗಳೂರು ಪ್ರಶಸ್ತಿಗಳ ವಿಜೇತ, ಶ್ರೀ ಅನಿರುದ್ಧ್ ದತ್ ಮತ್ತು ಅವರ ತಂಡವು ಲೆಟ್ಸ್ ಬಿ ದಿ ಚೇಂಜ್ ನಲ್ಲಿ ನಗರದಲ್ಲಿ ಹಲವಾರು ಕಪ್ಪು ಪ್ರದೇಶಗಳನ್ನು ಗುರ್ತಿಸಿದೆ. ಅವರು ತಮ್ಮ ಪೊರಕೆಗಳನ್ನು ಹಿಡಿದು ಕೆಲಸ ಮಾಡಲು ಮತ್ತು ಕಸವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಯಾವುದೇ ನಾಚಿಕೆಪಡುತ್ತಿಲ್ಲ. ಜೊತೆಗೆ, ಈ ಶಕ್ತಿಶಾಲಿ ಯುವಕರು ಬೆಂಗಳೂರಿನ ನಾಗರಿಕರಿಗೆ ತಮ್ಮದೇ ಆದ ಕಸದ ಜವಾಬ್ದಾರಿಯನ್ನು ನಿರ್ವಹಿಸುವ ಶಿಕ್ಷಣ ನೀಡುವ ಗುರಿಯನ್ನು ಹೊಂದಿದ್ದಾರೆ. ಇಲ್ಲಿಯವರೆಗೆ, ತಂಡವು ನಗರದಾದ್ಯಂತ 80 ಕ್ಕೂ ಹೆಚ್ಚು ಕಪ್ಪು ಪ್ರದೇಶಗಳನ್ನು ನಿಗದಿಪಡಿಸಿದೆ ಮತ್ತು ಈಗ ಅವರು ಮೆಜೆಸ್ಟಿಕ್ ಬಸ್ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸುಂದರಗೊಳಿಸಲು ತಮ್ಮ ಪ್ರಯತ್ನವನ್ನು ಮಾಡುತ್ತಿದ್ದಾರೆ.
ಕಿಶೋರ್ ಎಸ್ ರಾವ್ – ನಮ್ಮ ವರ್ಷದ ಬೆಂಗಳೂರು ಪ್ರಶಸ್ತಿಗಳ ನಾಗರಿಕ ವ್ಯಕ್ತಿ ಪ್ರಶಸ್ತಿ ವಿಜೇತ, ಶ್ರೀ ಕಿಶೋರ್ ಎಸ್ ರಾವ್, ಅವರ ಕರುಣಾಶ್ರಯ ಟ್ರಸ್ಟ್, ಅಂತಿಮ ಹಂತದಲ್ಲಿರುವ ಕ್ಯಾನ್ಸರ್ ರೋಗಿಗಳನ್ನು ಸಹಾನುಭೂತಿಯಿಂದ ಸ್ವಾಗತಿಸುತ್ತಾರೆ. ಕ್ಯಾನ್ಸರ್ ರೋಗಿಗಳ ಜೀವನವನ್ನು ನೋವು ಮುಕ್ತ ಮತ್ತು ಶಾಂತಿಯುತವಾಗಿಸಲು ಟ್ರಸ್ಟ್ ಮನೆಯ ಆರೈಕೆ ಮತ್ತು ಒಳರೋಗಿಗಳ ಆರೈಕೆಯನ್ನು ಒಳಗೊಂಡಿರುವ ಉಪಶಾಮಕ ಆರೈಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಗುಣಮಟ್ಟದ ವೈದ್ಯಕೀಯ, ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಬೆಂಬಲವನ್ನು ಸಹ ನೀಡುತ್ತದೆ.
ಘನತ್ಯಾಜ್ಯ ನಿರ್ವಹಣೆ ರೌಂಡ್ ಟೇಬಲ್ – 2015 ರ ನಮ್ಮ ಬೆಂಗಳೂರು ನೇತೃತ್ವದಲ್ಲಿ – ಬೆಂಗಳೂರಿನ ಗೌರವಾನ್ವಿತ ಪರಿಸರ ಯೋಧರಾದ ಶ್ರೀ ಎನ್.ಎಸ್.ರಾಮಕಾಂತ್ – ಘನ ತ್ಯಾಜ್ಯ ನಿರ್ವಹಣಾ ರೌಂಡ್ ಟೇಬಲ್, ಬೆಂಗಳೂರಿನ ಹಲವಾರು ಮನೆಗಳಿಗೆ ತ್ಯಾಜ್ಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡಿದೆ. ಈಗ ಅವರ ಪ್ರಯತ್ನವನ್ನು ಒಂದು ಹೆಜ್ಜೆ ಮುಂದಿಟ್ಟು, ಘನ ತ್ಯಾಜ್ಯದ ಜ್ಞಾನ ಮತ್ತು ಸಮಾಜದ ಮೇಲೆ ಅದರ ಒಟ್ಟಾರೆ ಪ್ರಭಾವವನ್ನು ತಮ್ಮ TRASHONOMICS! ಹೆಸರಿನ ಪುಸ್ತಕದ ಮೂಲಕ ಜನರಿಗೆ ನೀಡುವ ಉದ್ದೇಶವನ್ನು SWMRT ಹೊಂದಿದೆ. ನಮಗೆ ತಿಳಿದಿರುವಂತೆ ಭೂಮಿಯು ಬದಲಾಗುತ್ತಿದೆ ಮತ್ತು ಮಕ್ಕಳು, ನಾಳೆಯ ನಾಗರಿಕರು ನಮ್ಮನ್ನು ಅಳಿವಿನ ಅಂಚಿಗೆ ತಂದ ಕೆಲವು ದೋಷಪೂರಿತ ಅಭ್ಯಾಸಗಳನ್ನು ಮರುಪರಿಶೀಲಿಸಲು ಮತ್ತು ಪುನರ್ವಿಮರ್ಶಿಸಲು ಈ ಪುಸ್ತಕದಿಂದ ಸಾಧ್ಯವಾಗುತ್ತದೆ. ಮಕ್ಕಳು ಅತ್ಯುತ್ತಮ ಬದಲಾವಣೆ ಮಾಡುವ ಶಕ್ತಿ ಉಳ್ಳವರು ಮತ್ತು ಈ ಪುಸ್ತಕವು ತ್ಯಾಜ್ಯದ ಕುರಿತಾದ ಐತಿಹಾಸಿಕ ನಿರೂಪಣೆಯನ್ನು ಹೊಂದಿದ್ದು, ಯಾವುದನ್ನು ಕಿತ್ತೆಸೆದು ಮುಂದುವರೆಯಬೇಕೆಂಬ ಬಗ್ಗೆ ಮಕ್ಕಳಿಗೆ ಜ್ಞಾನ ನೀಡುವ ವಿಷಯಗಳನ್ನ ಹೊಂದಿದೆ.