ನಮ್ಮ ಬೆಂಗಳೂರು ಫೌಂಡೇಶನ್ 2020 ರ ಆಗಸ್ಟ್ 4 ರ ಮಂಗಳವಾರ 5PM ರಿಂದ 6PM ನಡುವೆ ಸಮತೂಲಿತ ಮೂಲಸೌಕರ್ಯ ಅಭಿವೃದ್ಧಿ ಮತ್ತು ಪರಿಸರ ವಿಜ್ಞಾನದ ಕುರಿತು ಪ್ಯಾನಲ್ ಚರ್ಚೆಗೆ (ವೆಬಿನಾರ್) ಅವಕಾಶ ಮಾಡಿಕೊಟ್ಟಿತು.

ಈ ಕುರಿತಂತೆ ಸಂಭವನೀಯ ಪರಿಹಾರವನ್ನು ಕಂಡುಹಿಡಿಯಲು ಮಾಧ್ಯಮ, ಅಕಾಡೆಮಿ ಮತ್ತು ಸರ್ಕಾರಿ ಪ್ರತಿನಿಧಿಗಳೊಂದಿಗೆ ಚರ್ಚಿಸಲು ಈ ಕೆಳಗಿನ ಗಣ್ಯ ಅತಿಥಿಗಳನ್ನ ಒಳಗೊಂಡಿತ್ತು.

ಸಂಸತ್‌ ಸದಸ್ಯರು: ಶ್ರೀ ರಾಜೀವ್ ಚಂದ್ರಶೇಖರ್ ಮತ್ತು ಶ್ರೀ ಪಿಸಿ ಮೋಹನ್

ಎಂ.ಎಸ್ ವಿ ಮಂಜುಳಾ ಐಎಎಸ್, ಆಯುಕ್ತರು, ನಗರ ಭೂ ಸಾರಿಗೆ ನಿರ್ದೇಶನಾಲಯ, ನಗರಾಭಿವೃದ್ಧಿ ಇಲಾಖೆ
ಡಾ. ಎಚ್ ಆರ್ ಮಹಾದೇವ್ ಐಎಎಸ್, ಆಯುಕ್ತರು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ
ಡಾ. ಆಶಿಶ್ ವರ್ಮಾ, ಸಹಾಯಕ ಪ್ರಾಧ್ಯಾಪಕರು, ಸಾರಿಗೆ ವ್ಯವಸ್ಥೆಗಳು (ಎಂಜಿನಿಯರಿಂಗ್ ಇಲಾಖೆ), ಭಾರತೀಯ ವಿಜ್ಞಾನ ಸಂಸ್ಥೆ
ಡಾ. ಮುತ್ತುಕುಮಾರ್ ಅರುಣಾಚಲಂ, ವಿಜ್ಞಾನಿ, ವುಡ್ ಸೈನ್ಸ್ ಅಂಡ್ ಟೆಕ್ನಾಲಜಿ ಸಂಸ್ಥೆ
ಮಹೇಶ್ ಭಟ್, ಈ ದೇಶದ ಹಿರಿಯ ಛಾಯಾಗ್ರಾಹಕರು ಮತ್ತು ಬೆಂಗಳೂರಿನಲ್ಲಿ ಗಣ್ಯ ಪರಿಸರ ಕಾರ್ಯಕರ್ತ

ಪವರ್ ಪ್ಯಾಕ್ಡ್ ಪ್ಯಾನಲ್ ಅನ್ನು ಪತ್ರಕರ್ತ, ನಟ ಮತ್ತು ನಾಗರಿಕ ಕಾರ್ಯಕರ್ತ ಪ್ರಕಾಶ್ ಬೆಳವಾಡಿ ಅವರು ನಡೆಸಿಕೊಟ್ಟಿದ್ದಾರೆ.