ಬೆಂಗಳೂರನ್ನು ಇನ್ನಷ್ಟು ಉತ್ತಮಗೊಳಿಸಲು ನೆರವಾಗುವ ವಿಶಿಷ್ಟ ವ್ಯಕ್ತಿಗಳನ್ನು ಗುರುತಿಸಲು ಹಾಗೂ ಗೌರವಿಸಲು ಪ್ರತಿ ವರ್ಷ ನೀಡಲಾಗುವ ನಮ್ಮ ಬೆಂಗಳೂರು ಪ್ರಶಸ್ತಿಗೆ ಆಯ್ಕೆಯಾದವರಿಗೆ ತಲಾ 2 ಲಕ್ಷ ರೂ. ನೀಡಲಾಗುತ್ತದೆ. ಈ ವರ್ಷ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ನಮ್ಮ ಬೆಂಗಳೂರು ಫೌಂಡೇಷನ್ ಆರೂ ಮಂದಿ ವಿಜೇತರಿಗೆ ಹೆಚ್ಚುವರಿ 2 ಲಕ್ಷ ರೂ.ಗಳನ್ನು ಸಂಗ್ರಹಿಸಿ ವಿತರಿಸಲು ನಿರ್ಧರಿಸಿದೆ.
ಈ ವರ್ಷದ ವಿಶಿಷ್ಟ ಪ್ರಶಸ್ತಿ ವಿಜೇತರು ಹಾಗೂ ನೀವು ಅವರಿಗೆ ಹೇಗೆ ನೆರವಾಗಬಹುದು ಎಂದು ನೋಡಿ:
ಡಾ.ಟಿ.ವಿ.ರಾಮಚಂದ್ರ, ನಮ್ಮ ಬೆಂಗಳೂರು ವರ್ಷದ ವ್ಯಕ್ತಿ
ನಮ್ಮ ಬೆಂಗಳೂರನ್ನು ಎದೆಗುಂದದೆ ಉಳಿಸಿಕೊಳ್ಳಬೇಕಿದ್ದು, ತಳ ಮಟ್ಟದಲ್ಲಿ ಪರಿಸರ ಶಿಕ್ಷಣದ ಮೂಲಕ ಕೆಲಸ ಮಾಡುತ್ತ, ನಮ್ಮ ನಗರವನ್ನು ಸುಸ್ಥಿರ ಹಾಗೂ ಬದುಕಲು ಸಾಧ್ಯವಾಗುವಂತೆ ಮಾಡಬೇಕಿದೆ. ಪರಿಸರ ಸಾಕ್ಷರತೆ ಶೆ.3.5 ರಷ್ಟು ಅತಿ ಕಡಿಮೆ ಇದೆ ಎನ್ನುವುದು ವಾಸ್ತವದ ಹಿನ್ನೆಲೆಯಲ್ಲಿ ಡಾ.ಟಿ.ವಿ.ರಾಮಚಂದ್ರ ಅವರೊಟ್ಟಿಗೆ ನಗರದ ಹಲವು ಶಾಲೆಗಳಲ್ಲಿ ನೀರಿನ ಗುಣಮಟ್ಟ ಪರೀಕ್ಷಿಸುವ ಪ್ರಯೋಗಾಲಯಗಳನ್ನು ಆರಂಭಿಸಲಾಗಿದೆ. ನಮ್ಮ ಬೆಂಗಳೂರು ಪ್ರತಿಷ್ಠಾನವು ನೀರಿನ ಗುಣಮಟ್ಟ ಪರೀಕ್ಷೆಗೆ ಇನ್ನಷ್ಟು ಶಾಲೆಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ಹೆಚ್ಚುವರಿ 2 ಲಕ್ಷ ರೂ. ಸಂಗ್ರಹಿಸಲು ಕಾಳಜಿ ಇರುವ ನಾಗರಿಕರು ನೆರವಾಗಬೇಕೆಂದು ಕೋರುತ್ತೇವೆ. ಇದು ಭವಿಷ್ಯದ ಮುಖಂಡರಾದ ಮಕ್ಕಳಲ್ಲಿ ಜಲ ಮಾಲಿನ್ಯ, ಅದಕ್ಕೆ ಕಾರಣ ಹಾಗೂ ಮಾಲಿನ್ಯವನ್ನು ಕನಿಷ್ಠಗೊಳಿಸಲು ಕಾರ್ಯತಂತ್ರಗಳನ್ನು ರೂಪಿಸುವ ಕುರಿತು ಅರಿವು ಮೂಡಿಸಲು ನೆರವಾಗಲಿದೆ.
ಶ್ರೀಮತಿ ಗೀತಾ ಮೆನನ್, ವರ್ಷದ ನಾಗರಿಕ ವ್ಯಕ್ತಿ
ಸ್ತ್ರೀ ಜಾಗೃತಿ ಸಮಿತಿಯ ಸಹ ಸಂಸ್ಥಾಪಕಿಯಾದ ಗೀತಾ ಮೆನನ್, ಬಡ ಮನೆ ಕೆಲಸದವರಿಗೆ ಸಾಮಾಜಿಕ ರಕ್ಷಣೆ, ಘನತೆ ಹಾಗೂ ಅಸ್ಮಿತೆ ನೀಡಲು ದಶಕಗಳ ಕಾಲ ಕೆಲಸ ಮಾಡಿದ್ದಾರೆ. ಸಮಿತಿಯು ಹಿರಿಯ ನಾಗರಿಕ ಕೆಲಸದಾಕೆಯನ್ನು ಮಾಸಿಕ 2,500 ರೂ ಇಲ್ಲವೇ ವಾರ್ಷಿಕ 30,000 ರೂ ನೀಡುವ ಮೂಲಕ ಪ್ರಾಯೋಜನೆ ಮಾಡುವ ಉಪಕ್ರಮವೊಂದನ್ನು ಆರಂಭಿಸಿದೆ. ಈ ಉಪಕ್ರಮವು ಪೋಷಣೆ ಮತ್ತು ಆರೋಗ್ಯ ರಕ್ಷಣೆ ಸೇರಿದಂತೆ ಕೆಲಸದವರ ಒಟ್ಟಾರೆ ಒಳಿತನ್ನು ನೋಡಿಕೊಳ್ಳಲಿದೆ. 2 ಲಕ್ಷ ರೂ. ಸಂಗ್ರಹಿಸಲು ನೀವು ಸಂಘಟನೆಗೆ ನೆರವಾದಲ್ಲಿ, ಬೆಂಗಳೂರಿನ 75 ಹಾಗೂ ಮಂಗಳೂರು ಮತ್ತು ಬೆಳಗಾವಿಯ ತಲಾ ಇಪ್ಪತ್ತು ಹಿರಿಯ ವಯಸ್ಸಿನ ಕೆಲಸದವರನ್ನು ನೋಡಿಕೊಳ್ಳುವ ಉಪಕ್ರಮವನ್ನು ಆರಂಭಿಸಿ, ಅನುಷ್ಠಾನಗೊಳಿಸುವುದು ಸಾಧ್ಯವಾಗಲಿದೆ.
ಶ್ರೀಮತಿ ಜಾಸ್ಮಿನ್ ಪಥೇಜಾ, ವರ್ಷದ ಸಾಮಾಜಿಕ ಉದ್ಯಮಿ
ನೂರಾರು, ಸಾವಿರಾರು ನಾನಾ ಹಿನ್ನೆಲೆ ಹಾಗೂ ಗುರುತಿನ ಹೆಣ್ಣು ಮಕ್ಕಳು ರಾತ್ರಿ ವೇಳೆ ಒಂಟಿಯಾಗಿ ಸಂಚರಿಸುವುದನ್ನು ಊಹಿಸಿಕೊಳ್ಳಲಿ. ಯಾವುದೇ ಹೆದರಿಕೆಯಿಲ್ಲದೆ ನಡೆದಾಡುವುದು. ನಗರ ಅದನ್ನು ಹೇಗೆ ಪರಿಭಾವಿದುತ್ತದೆ? ಡಿಸೆಂಬರ್ 2,2017ರಂದು ಇನ್ನೂ ನಿರ್ಧರಿಸಬೇಕಿರುವ ಮಾರ್ಗದಲ್ಲಿ ಸೂರ್ಯ ಮುಳುಗಿದ ಬಳಿಕ ಸಂಚರಿಸುವ ಕ್ರಿಯಾಶೀಲ ಹೀರೋಗಳು ಧರಿಸುವ ಅಕೇಲಿ, ಆವಾರಾ, ಆಜಾದ್ ಅಥವಾ ಒಂಟಿ, ಅಲೆಮಾರಿ, ಸ್ವತಂತ್ರ ಎನ್ನುವ ಹೇಳಿಕೆಗಳನ್ನುಳ್ಳ ಟಿ ಶರ್ಟ್‍ಗಳ ವಿನ್ಯಾಸ, ಉತ್ಪಾದನೆ ಹಾಗೂ ವಿತರಣೆ ಮಾಡಲು ಹಣ ಸಂಗ್ರಹಿಸಲು ಬ್ಲಾಂಕ್ ನಾಯ್ಸ್‍ಗೆ ನಿಮ್ಮ ನೆರವು ಬೇಕಿದೆ.
ಹರ್ಷಿ ಮಿತ್ತಲ್, ವರ್ಷದ ಉದಯಿಸುತ್ತಿರುವ ತಾರೆ
ಸಮಾಜದ ದುರ್ಬಲ ವರ್ಗದ ಜನರಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಅಗತ್ಯವನ್ನು ಪರಿಗಣಿಸಿರುವ ನಮ್ಮ ಬೆಂಗಳೂರು ಪ್ರತಿಷ್ಠಾನ, ಎಲ್ ಆರ್ ನಗರದ ಕೊಳೆಗೇರಿ ಮಕ್ಕಳಿಗಾಗಿ ಕಂಪ್ಯೂಟರ್ ಪ್ರಯೋಗಾಲಯವನ್ನು ಸ್ಥಾಪಿಸುವ ಗುರಿಯನ್ನುಳ್ಳ ಲೆಟ್ಸ್ ಸ್ಪ್ರೆಡ್ ಲವ್‍ನ ಹರ್ಷಿ ಮಿತ್ತಲ್‍ಗೆ 2016ರ ವರ್ಷದ ಉದಯಿಸುತ್ತಿರುವ ತಾರೆ ಪ್ರಶಸ್ತಿಯನ್ನು ಕೊಡಮಾಡಿದೆ. ಪ್ರತಿ ವರ್ಷ 100 ಅವಕಾಶ ವಂಚಿತ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಗುರಿಯಿರುವ ಈ ಪ್ರಯೋಗಾಲಯವು 3 ಸರ್ವಸನ್ನದ್ಧ ವೈಯಕ್ತಿಕ ಕಂಪ್ಯೂಟರ್‍ಗಳನ್ನು ಹೊಂದುವ ನಿರೀಕ್ಷೆಯಿದ್ದು, ಈಗಾಗಲೇ ನಡೆಯುತ್ತಿರುವ ವಾರಾಂತ್ಯದ ತರಗತಿಗಳಿಗೆ ಹೆಚ್ಚುವರಿ ಉತ್ತೇಜನ ನೀಡಲಿದೆ.
Post a comment