ದೊಮ್ಮಲೂರು ಒಳವರ್ತುಲ ರಸ್ತೆಯಲ್ಲಿ ಚಾಲನೆ ನೀಡಿದ ೧೫ ಜೀಪ್ ಕಾರುಗಳ ರ‍್ಯಾಲಿ ಯಲ್ಲಿ ಬೆಂಗಳೂರಿನ ಪ್ರಯಾಣಿಕರಿಗೆ, ದಾರಿಹೋಕರಿಗೆ ಮತ್ತು ನಾಗರಿಕರಿಗೆ ಜಾಗೃತಿ ಮೂಡಿಸಲು ರಸ್ತೆ ಸುರಕ್ಷತೆಯ ಭಿತ್ತಿಪತ್ರಗಳನ್ನು ಪ್ರದರ್ಶಿಸಲಾಯಿತು. ಜಾಗೃತಿ ಅಭಿಯಾನವು ಸಂಚಾರ ನಿಯಮಗಳು, ಲೇನ್ ಶಿಸ್ತು, ಜೀಬ್ರಾ ಕ್ರಾಸಿಂಗ್, ಪಾದಚಾರಿ ಸುರಕ್ಷತೆ, ಸಿಗ್ನಲ್‌ಗಳಲ್ಲಿ ನಿಲುಗಡೆ, ಫುಟ್‌ಬೋರ್ಡ್ ಪ್ರಯಾಣವಿಲ್ಲ, ನಗರ ವೇಗದ ಮಿತಿಗಳಿಗೆ ಬದ್ಧವಾಗಿರುವುದು, ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವುದು, ಹೆಲ್ಮೆಟ್ / ಸೀಟ್‌ಬೆಲ್ಟ್ ಧರಿಸುವುದು ಮತ್ತು ದುಡುಕಿನ ಮತ್ತು ಕುಡಿದು ವಾಹನ ಚಲಾಯಿಸಬಾರದು ಎಂಬ ಸಂದೇಶವನ್ನು ಹರಡಿತು. ದೊಮ್ಮಲೂರಿನಲ್ಲಿ ಆರಂಭವಾದ ರ‍್ಯಾಲಿ ಇಂದಿರಾನಗರ, ಹಲಸೂರು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಹೊಸೂರು ರಸ್ತೆ, ಕೋರಮಂಗಲ, ಈಜಿಪುರ ಮಾರ್ಗವಾಗಿ ೧೬ ಕಿ.ಮೀ ಕ್ರಮಿಸಿ ದೊಮ್ಮಲೂರಿನಲ್ಲಿ ಕೊನೆಗೊಂಡಿತು.
KHT Prime Jeep, Indigo Music.com ಮತ್ತು ಬೆಂಗಳೂರು ಜೀಪ್ ಕ್ಲಬ್ ಸಹಯೋಗದಲ್ಲಿ ನಮ್ಮ ಬೆಂಗಳೂರು ಪ್ರತಿಷ್ಠಾನ , ೨೬ನೇ ಫೆಬ್ರವರಿ ೨೦೨೨ ಶನಿವಾರದಂದು ಜೀಪ್ ಕಾರುಗಳು ಮತ್ತು ಜೀಪ್ ಮಾಲೀಕರೊಂದಿಗೆ ರಸ್ತೆ ಸುರಕ್ಷತೆ ಜಾಗೃತಿ ರ‍್ಯಾಲಿ ಯನ್ನು ಆಯೋಜಿಸಿತ್ತು.

Post a comment