9 ವರ್ಷ ವಯಸ್ಸಿನ ಗೀತಾ ಲಕ್ಷ್ಮಿ ಎಂಬ ಬಾಲಕಿ ತೆರೆದ ಚರಂಡಿಯಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವುದನ್ನು ಪ್ರಶ್ನಿಸಿ, ರಾಜ್ಯದ ಅಂಗ ಸಂಸ್ಥೆಗಳಲ್ಲಿ ಉತ್ತರದಾಯಿತ್ವದ ಕೊರತೆಯಿದೆ ಎಂದು ದೂರಿ ನಮ್ಮ ಬೆಂಗಳೂರು ಪ್ರತಿಷ್ಠಾನ ಹಾಗೂ ಸಂಸದ ರಾಜೀವ್ ಚಂದ್ರಶೇಖರ್ ಅಕ್ಟೋಬರ್ 9,2014ರಂದು ರಿಟ್ ಅರ್ಜಿ ದಾಖಲಿಸಿದರು.
ನಾಗರಿಕ ಸೇವೆಗಳು ಎಂದರೆ ಮಳೆ ನೀರು ಚರಂಡಿ ಹಾಗೂ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದಂತೆ ನಾಗರಿಕರ ರಕ್ಷಣೆ ಹಾಗೂ ಸುರಕ್ಷತೆಗೆ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಯ ಆಯುಕ್ತರು ಒಂದು ಸಮಗ್ರ, ಕಾಲಬದ್ಧ ಕ್ರಿಯಾಯೋಜನೆಯನ್ನು ಸಿದ್ಧಗೊಳಿಸಬೇಕು ಎಂದು ನಿರ್ದೇಶನ ನೀಡಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು.
ತಮ್ಮ ಶಾಸನಬದ್ಧ ಕರ್ತವ್ಯವನ್ನು ನಿರ್ವಹಿಸುವಲ್ಲಿನ ವೈಫಲ್ಯದಿಂದ ಸಾವು ಹಾಗೂ ಅಂಗವೈಕಲ್ಯಕ್ಕೆ ಕಾರಣವಾದ ಸರ್ಕಾರಿ ಅಧಿಕಾರಿಗಳನ್ನು ಸರ್ಕಾರ ಶಿಕ್ಷಿಸಬೇಕು ಎನ್ನುವ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.
ಪ್ರತಿವಾದಿಗಳು
ಕರ್ನಾಟಕ ಸರ್ಕಾರ
ಸರ್ಕಾರದ ಮುಖ್ಯ ಕಾರ್ಯದರ್ಶಿ
ಬಿಬಿಎಂಪಿ
ಮುಖ್ಯ ಎಂಜಿನಿಯರ್ ಬಿಬಿಎಂಪಿ
ಕೋರಿದ ಪರಿಹಾರ/ಆದೇಶ
- ಆಜ್ಞಾಪತ್ರ ಇಲ್ಲವೇ ಯಾವುದೇ ಸೂಕ್ತವಾದ ನಿರೂಪ, ಆದೇಶ ಅಥವಾ ನಿರ್ದೇಶನದ ಮೂಲಕ ಪ್ರತಿವಾದಿ ಸಂಖ್ಯೆ 1-ರಾಜ್ಯವು ತಕ್ಷಣ ವಿಚಾರಣೆ ನಡೆಸಿ ಹಾಗೂ ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿ ಮುಚ್ಚಳವಿಲ್ಲದ ಚರಂಡಿಗಳು ಹಾಗೂ ಸಾರ್ವಜನಿಕ ಮೂಲಸೌಲಭ್ಯಗಳನ್ನು ಸಾವಿನ ಉರುಳಾಗಿ ಪರಿವರ್ತಿಸಿ ಮಕ್ಕಳ ಜೀವಹಾನಿಗೆ ಕಾರಣರಾದ ಅಧಿಕಾರಿಗಳನ್ನು ಗುರುತಿಸಿ, ಈ ಬಗ್ಗೆ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು;
- ಆಜ್ಞಾಪತ್ರ ಇಲ್ಲವೇ ಯಾವುದೇ ಸೂಕ್ತವಾದ ನಿರೂಪ, ಆದೇಶ ಅಥವಾ ನಿರ್ದೇಶನದ ಮೂಲಕ ಪ್ರತಿವಾದಿ ಸಂಖ್ಯೆ 1-ರಾಜ್ಯವು ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲರಾಗಿ ಮುಚ್ಚಳವಿಲ್ಲದ ಚರಂಡಿಗಳು ಹಾಗೂ ಸಾರ್ವಜನಿಕ ಮೂಲಸೌಲಭ್ಯಗಳನ್ನು ಸಾವಿನ ಉರುಳಾಗಿ ಪರಿವರ್ತಿಸಿ ಮಕ್ಕಳ ಜೀವಹಾನಿಗೆ ಕಾರಣರಾದ ದೋಷಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು;
- ಆಜ್ಞಾಪತ್ರ ಇಲ್ಲವೇ ಯಾವುದೇ ಸೂಕ್ತವಾದ ನಿರೂಪ, ಆದೇಶ ಅಥವಾ ನಿರ್ದೇಶನದ ಮೂಲಕ ಪ್ರತಿವಾದಿ ಸಂಖ್ಯೆ 2 ಮತ್ತು 3, ನ್ಯಾಯಾಲಯವು ಸೂಚಿಸಿದ ಸಮಯದೊಳಗೆ ಬೆಂಗಳೂರು ನಗರದ ನಾಗರಿಕರ ಪ್ರಾಣ ಹಾಗೂ ಆಸ್ತಿಯ ರಕ್ಷಣೆಯನ್ನು ಖಾತ್ರಿಗೊಳಿಸಲು ಸಾರ್ವಜನಿಕ ಚರಂಡಿ ವ್ಯವಸ್ಥೆ ಹಾಗೂ ಇನ್ನಿತರ ಸೇವೆಗಳಿಗೆ ಸಂಬಂಧಿಸಿದಂತೆ ರಕ್ಷಣೆ ಹಾಗೂ ಸುರಕ್ಷತೆ ಕ್ರಮಗಳನ್ನು ಸ್ಥಾಪಿಸಲು ಸಮಗ್ರವಾದ ನಿರ್ದೇಶನಗಳನ್ನು ಸಿದ್ಧಗೊಳಿಸಬೇಕೆಂದು ಆದೇಶಿಬೇಕು;
- ಆಜ್ಞಾಪತ್ರ ಇಲ್ಲವೇ ಯಾವುದೇ ಸೂಕ್ತವಾದ ನಿರೂಪ, ಆದೇಶ ಅಥವಾ ನಿರ್ದೇಶನದ ಮೂಲಕ ಪ್ರತಿವಾದಿ ಸಂಖ್ಯೆ 3 ಬೆಂಗಳೂರಿನ ಎಲ್ಲ ತೆರೆದ ಚರಂಡಿಗಳು ಹಾಗೂ ಮ್ಯಾನ್ಹೋಲ್ಗಳನ್ನು ಮುಚ್ಚುವುದಲ್ಲದೆ, ಸೂಚನಾ ಫಲಕ ಅಳವಡಿಸುವ ಮೂಲಕ ಬೆಂಗಳೂರಿನ ಇನ್ನಷ್ಟು ನಾಗರಿಕರ ಪ್ರಾಣಹಾನಿಯನ್ನು ತಡೆಯಲು ಸಕಲ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶಿಸಬೇಕು
ಪ್ರಸ್ತುತ ಪರಿಸ್ಥಿತಿ
ನವೆಂಬರ್ 4,2016ರಂದು ಕರ್ನಾಟಕದ ಉಚ್ಛ ನ್ಯಾಯಾಲಯವು ರಸ್ತೆ ಗುಂಡಿಗಳು ಹಾಗೂ ಒತ್ತುವರಿಗೆ ಸಂಬಂಧಿಸಿದಂತೆ ಮಾಡಿದ ಕೆಲಸ ಕುರಿತು ವರದಿಯೊಂದನ್ನು ನೀಡಬೇಕು ಹಾಗೂ ತನಿಖೆ ಕುರಿತು ವರದಿ ಸಲ್ಲಿಸಬೇಕು ಎಂದು ಬಿಬಿಎಂಪಿಗೆ ನಿರ್ದೇಶನ ನೀಡಿತು. ನ್ಯಾಯಾಲಯವು ವರದಿ ಸಲ್ಲಿಕೆಗೆ ಎರಡು ತಿಂಗಳು ಕಾಲಾವಕಾಶ ನೀಡಿತು.
Post a comment