ಕರ್ನಾಟಕ ವಿಶೇಷವಾಗಿ ಬೆಂಗಳೂರು ಹಲವು ವರ್ಷಗಳಿಂದ ಭಾರಿ ಪ್ರಮಾಣದ ಭೂಮಿ ಒತ್ತುವರಿಯನ್ನು ಅನುಭವಿಸಿದೆ. ಇದನ್ನು ಪರಿಗಣಿಸಿದ ನಮ್ಮ ಬೆಂಗಳೂರು ಪ್ರತಿಷ್ಠಾನವು ಮಾರ್ಚ್ 28,2013ರಂದು ಹೈಕೋರ್ಟ್ನಲ್ಲಿ ಕರ್ನಾಟಕ ಸರ್ಕಾರದ ನಿಷ್ಕ್ರಿಯೆಯನ್ನು ಪ್ರಶ್ನಿಸಿ, ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ದಾಖಲಿಸಿತು.
ಪಿಐಎಲ್ ದಾಖಲಿಸಲು ಕಾರಣಗಳು
1. ಸರ್ಕಾರವು ಸಾರ್ವಜನಿಕ ಭೂಮಿಯ ಮರುಸ್ವಾಧೀನ ಹಾಗೂ ಅದರ ರಕ್ಷಣೆ ಕುರಿತ ಕಾರ್ಯಪಡೆ (ವಿ,ಬಾಲಸುಬ್ರಮಣಿಯನ್ ಅಧ್ಯಕ್ಷತೆಯದು)ಯ ವರದಿಯನ್ನು ಅಂಗೀಕರಿಸಿಲ್ಲ
2. ಕರ್ನಾಟಕರಲ್ಲಿ 11 ಲಕ್ಷ ಎಕರೆಗೂ ಅಧಿಕ ಸಾರ್ವಜನಿಕ ಭೂಮಿ ಒತ್ತುವರಿಯಾಗಿದೆ
3. ರಾಜ್ಯದ ಬೊಕ್ಕಸಕ್ಕೆ ಅಪಾರ ನಷ್ಟವುಂಟಾಗುತ್ತಿದೆ
ಪ್ರತಿವಾದಿಗಳು
1. ಕರ್ನಾಟಕ ರಾಜ್ಯ
2. ಕರ್ನಾಟಕ ಸಾರ್ವಜನಿಕ ಭೂಮಿಗಳ ನಿಗಮ ನಿಯಮಿತ
ಕೋರಿದ ಆದೇಶ/ಪರಿಹಾರ:
1. ಆಜ್ಞಾಪತ್ರ ಇಲ್ಲವೇ ಯಾವುದೇ ಸೂಕ್ತವಾದ ನಿರೂಪ, ಆದೇಶ ಅಥವಾ ನಿರ್ದೇಶನದ ಮೂಲಕ ದಿನಾಂಕ 4ನೇ ಜನವರಿ 2010 ರಂದು ಕಾರ್ಯಪಡೆಯನ್ನು ವಜಾಗೊಳಿಸಿ ಹೊರಡಿಸಿದ ಸರ್ಕಾರದ ಆದೇಶ ಸಂಖ್ಯೆ ಆರ್ಡಿ 897 ಎಲ್ಜಿಬಿ ಜುಲೈ 4, 2011ರಿಂದ ಬದಿಗಿರಿಸಬೇಕು
2. ಆಜ್ಞಾಪತ್ರ ಇಲ್ಲವೇ ಯಾವುದೇ ಸೂಕ್ತವಾದ ನಿರೂಪ, ಆದೇಶ ಅಥವಾ ನಿರ್ದೇಶನದ ಮೂಲಕ ಪ್ರತಿವಾದಿ ಸಂಖ್ಯೆ 1 ಖಾಸಗಿ ವ್ಯಕ್ತಿಗಳು/ಸಂಸ್ಥೆಗಳು/ಟ್ರಸ್ಟ್ಗಳು/ಸೊಸೈಟಿಗಳು/ಸ್ವಯಂ ಸೇವಾ ಸಂಸ್ಥೆ-ಸಂಘಟನೆಗಳು ಒತ್ತುವರಿ ಮಾಡಿಕೊಂಡ ಜಮೀನನ್ನು ಮತ್ತೆ ವಾಪಸ್ ಪಡೆಯಬೇಕೆಂದು ನಿದೇರ್ಶಶನ ನೀಡಬೇಕು
3. ಆಜ್ಞಾಪತ್ರ ಇಲ್ಲವೇ ಯಾವುದೇ ಸೂಕ್ತವಾದ ನಿರೂಪ, ಆದೇಶ ಅಥವಾ ನಿರ್ದೇಶನದ ಮೂಲಕ ಪ್ರತಿವಾದಿ ಸಂಖ್ಯೆ 1 ಸಾರ್ವಜನಿಕ ಆಸ್ತಿಯನ್ನು ಒತ್ತುವರಿ ಮಾಡುವಲ್ಲಿ ಸಹಕರಿಸಿದ ಹಾಗೂ ಕೈ ಜೋಡಿಸಿದ ಸರ್ಕಾರಿ ಅಧಿಕಾರಿಗಳು/ಸೇವಕರು ಹಾಗೂ ಖಾಸಗಿ ವ್ಯಕ್ತಿಗಳು/ಸಂಸ್ಥೆಗಳು/ಟ್ರಸ್ಟ್ಗಳು/ಸೊಸೈಟಿಗಳು/ ಸ್ವಯಂ ಸೇವಾ ಸಂಸ್ಥೆ-ಸಂಘಟನೆಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ನಿರ್ದೇಶನ ನೀಡಬೇಕು.
4. ಆಜ್ಞಾಪತ್ರ ಇಲ್ಲವೇ ಯಾವುದೇ ಸೂಕ್ತವಾದ ನಿರೂಪ, ಆದೇಶ ಅಥವಾ ನಿರ್ದೇಶನದ ಮೂಲಕ ಪ್ರತಿವಾದಿ ಸಂಖ್ಯೆ 1 ಮತ್ತು 3, ಫೆಬ್ರವರಿ 14, 2007 ಹಾಗೂ ಜೂನ್ 26, 2007ರಂದು ಸಾರ್ವಜನಿಕ ಭೂಮಿಯ ಮರುಸ್ವಾಧೀನ ಮತ್ತು ಅದರ ಸಂರಕ್ಷಣೆಗೆ ನೇಮಕಗೊಂಡ ಕಾರ್ಯಪಡೆ ಸಲ್ಲಿಸಿದ ವರದಿಯ ಅನುಷ್ಠಾನ ಹಾಗೂ ಬೆಂಗಳೂರು ನಗರ ಜಿಲ್ಲೆಯಲ್ಲಿ ಒತ್ತುವರಿಗೆ ಸಂಬಂಧಿಸಿದಂತೆ ಕರ್ನಾಟಕ ವಿಧಾನಸಭೆಯ ಜಂಟಿ ಶಾಸಕಾಂಗ ಸಭೆ(ರಾಮಸ್ವಾಮಿ ಸಮಿತಿ ವರದಿ)ಯ ವರದಿಯನ್ನು ಅನುಷ್ಠಾನಗೊಳಿಸಬೇಕೆಂದು ನಿರ್ದೇಶನ ನೀಡಬೇಕು.
5. ಆಜ್ಞಾಪತ್ರ ಇಲ್ಲವೇ ಯಾವುದೇ ಸೂಕ್ತವಾದ ನಿರೂಪ, ಆದೇಶ ಅಥವಾ ನಿರ್ದೇಶನದ ಮೂಲಕ ಪ್ರತಿವಾದಿಗಳು ಸಾರ್ವಜನಿಕ ಭೂಮಿಯನ್ನು ಖಾಸಗಿ ವ್ಯಕ್ತಿಗಳು/ಸಂಸ್ಥೆಗಳು/ಟ್ರಸ್ಟ್ಗಳು/ಸೊಸೈಟಿಗಳು/ಸ್ವಯಂ ಸೇವಾ ಸಂಸ್ಥೆ-ಸಂಘಟನೆಗಳಿಗೆ ಕಾನೂನುಬದ್ಧವಾಗಿಯಲ್ಲದೆ ನೀಡುವುದನ್ನು ತಡೆಯಬೇಕು;
6. ಪ್ರಕರಣಕ್ಕೆ ಸಂಬಂಧಿಸಿದಂತೆ ವಾಸ್ತವಾಂಶದ ಹಿನ್ನೆಲೆಯಲ್ಲಿ ಸೂಕ್ತ ಎಂದು ಕಂಡುಬಂದ ಆದೇಶ ಹಾಗೂ ಆದೇಶಗಳನ್ನು ಹೊರಡಿಸಬೇಕು.
ಪ್ರಸ್ತುತ ಪರಿಸ್ಥಿತಿ:
ಆಗಸ್ಟ್ 27, 2014ರಂದು ರಾಜ್ಯ ಸರ್ಕಾರವು 2015ರ ಅಂತ್ಯದೊಳಗೆ ಒತ್ತುವರಿ ಮಾಡಿಕೊಂಡ 1.36 ಲಕ್ಷ ಎಕರೆ ಭೂಮಿಯನ್ನು ಮರುಸ್ವಾಧೀನ ಮಾಡುವುದಾಗಿ ಹೈಕೋರ್ಟ್ಗೆ ಮಾಹಿತಿ ನೀಡಿತು. ತಾನು ಕ್ರಿಯಾಯೋಜನೆಯೊಂದನ್ನು ರೂಪಿಸಿದ್ದು, ಜಿಲ್ಲಾ ಹಂತದಲ್ಲಿ ಒತ್ತುವರಿ ತೆರವುಗೊಳಿಸಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆಗಳನ್ನು ರಚಿಸುತ್ತೇನೆ ಎಂದು ಹೇಳಿತು.
ರಾಜ್ಯವು 4,54,704 ಎಕರೆ ಕಂದಾಯ ಭೂಮಿಯನ್ನು ತೆರವುಗೊಳಿಸುವ ಗುರಿ ಹೊಂದಿದ್ದು, ಇದು ರಾಜ್ಯದಲ್ಲಿ ಒತ್ತುವರಿಯಾದ ಒಟ್ಟು 11 ಲಕ್ಷ ಎಕರೆ ಭೂಮಿಯ ಒಂದು ಭಾಗ. ಆದರೆ, ರಾಜ್ಯ ಉಳಿಕೆ 7.54 ಲಕ್ಷ ಎಕರೆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಯೋಜನೆ ರೂಪಿಸಿಲ್ಲ. ಈ ಒತ್ತುವರಿ ಭೂಮಿಯನ್ನು ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ವಿಭಾಗ 94 ಎ ಹಾಗೂ 94 ಬಿ ಅಡಿ ಸಕ್ರಮಗೊಳಿಸುವ ಉದ್ದೇಶ ಹೊಂದಿದೆ.
Post a comment