nbf@namma-bengaluru.org
9591143888

ಅಭಿಯಾನಗಳು

ಉಕ್ಕಿನ ಮೇಲ್ಸೆತುವೆ ಬೇಡ: ಚರಿತ್ರೆ ನಿರ್ಮಿಸಿದ ಬೆಂಗಳೂರು

ಪ್ರಯತ್ನ: # ಸ್ಟೀಲ್ ಫ್ಲೈಓವರ್ ಬೇಡ ಎಂದು ಘೋಷಣೆ ಹಾಕುತ್ತ ಯೋಜನಾರಹಿತ ಅಭಿವೃದ್ಧಿಯಿಂದ ನಗರದ ಭವಿಷ್ಯ ಹಾಳಾಗದಂತೆ ಖಾತ್ರಿಗೊಳಿಸಲು ಬೆಂಗಳೂರಿಗರು ಒಗ್ಗಟ್ಟಾದರು.

ಪರಿಣಾಮ: ಜನರ ಒತ್ತಡಕ್ಕೆ ಬಗ್ಗಿದ ಕರ್ನಾಟಕ ಸರ್ಕಾರವು ಚಾಲುಕ್ಯ ವೃತ್ತದಿಂದ ಹೆಬ್ಬಾಳದವರೆಗಿನ 6.7 ಕಿಮೀ ಉದ್ದದ ವಿವಾದಾತ್ಮಕ ಫ್ಲೈ ಓವರ್ ಯೋಜನೆಯನ್ನು ರದ್ದುಗೊಳಿಸಿತು.

ನಮ್ಮ ಬೆಂಗಳೂರು ಪ್ರತಿಷ್ಠಾನ ಸಕಾರದ ಈ ನಿರ್ಧಾರವನ್ನು ಸ್ವಾಗತಿಸಿದ್ದು, ಈ ಪ್ರಯತ್ನದಲ್ಲಿ ಪಾಲ್ಗೊಂಡ ಎಲ್ಲ ನಾಗರಿಕರ ಸಕ್ರಿಯ ಪಾತ್ರವನ್ನು ಶ್ಲಾಘಿಸಿದೆ. ನಗರದ ಇತಿಹಾಸದಲ್ಲಿ “ಜನರ ಪಾಲ್ಗೊಳ್ಳುವಿಕೆ’ಯಿಂದ ಜಯ ಸಾಧಿಸಿದ ದಿನವೆಂದು ಮಾರ್ಚ್ 2,2017 ದಾಖಲಾಗಲಿದೆ. ಮಾನವ ಸರಪಳಿ ಅಥವಾ ಸತ್ಯಾಗ್ರಹದ ಮೂಲಕ ಸಾರ್ವಜನಿಕರು ಹೋರಾಟದ ಮುಂಚೂಣಿಯಲ್ಲಿದ್ದರು ಹಾಗೂ ನಮ್ಮ ಬೆಂಗಳೂರನ್ನು ಪುನಸ್ಥಾಪಿಸಲು ಮುಚ್ಚಿದ್ದ ಬಾಗಿಲುಗಳನ್ನು ತೆರೆದಿದ್ದಾರೆ.

ಬೆಂಗಳೂರಿನ ತತ್‍ಕ್ಷಣದ ಅಗತ್ಯಗಳೇನು?

ಪರಿಸರ ಸಂರಕ್ಷಣೆಯನ್ನು ಆದ್ಯತೆಯಾಗುಳ್ಳ ಹಾಗೂ ಸಮಸ್ಯೆಯ ಎಲ್ಲ ಆಯಾಮಗಳನ್ನು ಒಳಗೊಂಡ ಸಮಗ್ರ ಸಂಚಾರ ಪರ್ಯಾಯ ಯೋಜನೆ ಹಾಗೂ ಸಾರ್ವಜನಿಕರ ಸಲಹೆ/ಪಾಲ್ಗೊಳ್ಳುವಿಕೆ ಮೂಲಕ ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು.

ಜನರ ಕೆಲಸವೇನು?

ಈ ಭಾರಿ ವಿಜಯವನ್ನು ಜನರು ಸಂಭ್ರಮಿಸಬೇಕು. ಮುಂದಿನ ಸವಾಲುಗಳೇನು ಎನ್ನುವ ಬಗ್ಗೆ ಆಲೋಚನೆ ಮಾಡಬೇಕು ಹಾಗೂ ಈ ನಾಗರಿಕ ಪಾಲ್ಗೊಳ್ಳುವಿಕೆಯನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ಯಬೇಕು ಎನ್ನುವ ಬಗ್ಗೆ ನಾವೆಲ್ಲರೂ ಚಿಂತನೆ ನಡೆಸಬೇಕು.

ನಗರದ ಜನರು ಇನ್ನು ಮುಂದೆ ಬೆಂಗಳೂರಿಗೆ ಸಂಬಂಧಿಸಿದ ವಿಷಯಗಳಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಮತ್ತು ನಾನಾ ನಾಗರಿಕ ಕೇಳ್ವೆಗಳಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕು. ಎಲ್ಲ ಸಮಯದಲ್ಲೂ ಜನತೆ-ಸರ್ಕಾರದ ನಡುವೆ ಸಂವಾದ ನಡೆಯುವ ಅಗತ್ಯವಿದ್ದು, ಇದರಿಂದ ಪಾರದರ್ಶಕತೆ ಖಾತ್ರಿಗೊಳ್ಳುವುದಲ್ಲದೆ, ನಗರದ ಎಲ್ಲ ಸಮಸ್ಯೆಗಳಿಗೆ ಮಾದರಿ ಎನ್ನಬಹುದಾದ ಪರಿಹಾರಗಳು ಲಭ್ಯವಾಗುತ್ತವೆ.

ಸರ್ಕಾರಗಳು ಬಹು ವಾರ್ಷಿಕ ಯೋಜನೆಗಳ ಮೂಲಕ ಜನರ ಜೀವನವನ್ನು ಉತ್ತಮಗೊಳಿಸುವ ಕೆಲಸಗಳನ್ನು ಮಾಡಬೇಕೇ ಹೊರತು, ವರ್ಗಾಧರಿತ ಅಭಿವೃದ್ಧಿಯನ್ನಲ್ಲ. ನಗರಾಭಿವೃದ್ಧಿಯ ಎಲ್ಲ ಕೆಲಸಗಳೂ ಸಮಗ್ರ ಉಪಕ್ರಮವೊಂದನ್ನು ಅನುಸರಿಸಬೇಕಿದೆ ಮತ್ತು ಸುಸ್ಥಿರತೆಯನ್ನು ಖಾತ್ರಿಗೊಳಿಸಲು ಸಾರ್ವಜನಿಕರನ್ನು ಎಲ್ಲ ಹಂತದಲ್ಲೂ ಒಳಗೊಳ್ಳಬೇಕಿದೆ.

ನಮ್ಮ ನಗರದ ಜವಾಬ್ದಾರಿ ಸರ್ಕಾರ ಹಾಗೂ ಸಂಬಂಧಿಸಿದ ಸಂಸ್ಥೆಗಳದ್ದಾಗಿದ್ದು, ಎಲ್ಲ ಸಮಯದಲ್ಲೂ ಅವುಗಳನ್ನು ಉತ್ತರದಾಯಿಯನ್ನಾಗಿಸುವ ಹಕ್ಕನ್ನು ನಾವು ಬಳಸಬೇಕಿದೆ. ಪ್ರತಿ ಬೆಂಗಳೂರಿಗರು ಎಚ್ಚರದಿಂದಿರಬೇಕು ಹಾಗೂ ನಮ್ಮ ನಗರದ ಸಮಸ್ಯೆಗಳೇನು ಎಂಬ ಬಗ್ಗೆ ಜಾಗೃತಿ ಹೊಂದಿರಬೇಕು ಹಾಗೂ ಅವುಗಳನ್ನು ಹೇಗೆ ನಿರ್ವಹಿಸಬೇಕು ಎಂಬ ಬಗ್ಗೆ ತಿಳಿದುಕೊಂಡಿರಬೇಕು.

ಒಂದು ನಗರದಂತೆ ನಾವೆಲ್ಲ ಒಟ್ಟಾದರೆ ಹಾಗೂ ಬೆಂಗಳೂರನ್ನು ಕಾಡುತ್ತಿರುವ ಹಲವು ಸಮಸ್ಯೆಗಳನ್ನು,ಅದು ಕಸದ ವಿಲೇವಾರಿ, ಕಣ್ಮರೆಯಾಗುತ್ತಿರುವ ಕೆರೆಗಳು, ಮಕ್ಕಳು ಮತ್ತು ಮಹಿಳೆಯರ ಸುರಕ್ಷತೆ, ಜನ ಸಂಕಷ್ಟ, ಭ್ರಷ್ಟಾಚಾರ, ಉತ್ತರದಾಯಿತ್ವದ ಕೊರತೆ ಇತ್ಯಾದಿ ಯಾವುದೇ ಇರಲಿ, ಅದನ್ನು ಬಗೆಹರಿಸಲು ಒಟ್ಟಾಗಿ ಹೋರಾಡುತ್ತೇವೆ ಎಂದು ಶಪಥ ತೆಗೆದುಕೊಂಡರೆ, ನಗರದ ಕಳೆದ ಹೋದ ವೈಭವವನ್ನು ಮರುಸ್ಥಾಪಿಸುವ ಸಾಧ್ಯತೆ ಹೆಚ್ಚಲಿದೆ.

ನಾವು ಗೊಣಗುವವರು ಆಗುವುದು ಬೇಡ. ಬದಲಿಗೆ ಬದಲಾವಣೆಯ ಹರಿಕಾರರಾಗೋಣ. #Uಟಿiಣeಜಃeಟಿgಚಿಟuಡಿu  ಮಾತ್ರವೇ ನಮ್ಮ ನಗರವನ್ನು ಮರುಸ್ಥಾಪಿಸಲು, ವಾಪಸ್ ಪಡೆದೊಳ್ಳಲು ಹಾಗೂ ಮರುವಿನ್ಯಾಸಗೊಳಿಸಲು ನಮಗಿರುವ ಏಕೈಕ ಮಾರ್ಗ.    

Post a comment