nbf@namma-bengaluru.org
9591143888

PILs

ಬಿಎಂಪಿಸಿಯನ್ನು ಬಲಪಡಿಸುವುದು

ಸಂವಿಧಾನದ 74ನೇ ತಿದ್ದುಪಡಿಯು ನಗರಗಳನ್ನು ಮಹಾನಗರ ಯೋಜನಾ ಸಮಿತಿ(ಎಂಪಿಸಿ)ಯನ್ನಾಗಿ ರಚಿಸಲು ಆದೇಶಿಸುತ್ತದೆ. ಇದು ಯೋಜನಾ ಕಾರ್ಯವನ್ನು ಪಾರದರ್ಶಕ ಮತ್ತು ಸಮಾಲೋಚನಾ ರೀತಿಯಲ್ಲಿ ಕೈಗೊಳ್ಳುವ ಜವಾಬ್ದಾರಿಯುತ ಶಾಸನಬದ್ಧ ಸಂಸ್ಥೆಯಾಗಿದೆ. ಕರ್ನಾಟಕ ಸರ್ಕಾರ ಸಂಸದ ರಾಜೀವ್‌ ಚಂದ್ರಶೇಖರ್ ಹಾಗೂ ಭಾರತ ಸರ್ಕಾರ ಸೇರಿದಂತೆ ಹಲವರ ಒತ್ತಡದಡಿ 2014-15 ರಲ್ಲಿ ಎಂಪಿಸಿಯನ್ನು ರಚಿಸಿತು. ಆದಾಗ್ಯೂ, ಎಂಪಿಸಿ ಸೇರ್ಪಡೆಗೆ ಹೊರಗಿನ ತಜ್ಞರು, ನಾಗರಿಕರ ಸೇರ್ಪಡೆಗೆ ಮನವಿ ಬಂದರೂ ನಿರ್ಲಕ್ಷಿಸಲಾಯಿತು. ಎಂಪಿಸಿ ಅದರ ಸಂವಿಧಾನ ರಚನೆಯಾದ ಇಷ್ಟು ತಿಂಗಳಲ್ಲಿ ಒಮ್ಮೆಯು ಭೇಟಿಯಾಗಿಲ್ಲ.

2016ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಂಗಳೂರು “ವಿಷನ್‌ ಗ್ರೂಪ್” ಅನ್ನು ರಚಿಸಿದರು. ಇದು ಮಹಾನಗರ ಯೋಜನಾ ಸಮಿತಿಯ ಸಾಂವಿಧಾನಿಕ ಅನುಮೋದನೆಯನ್ನು ಹಾಳು ಮಾಡುತ್ತದೆ. ನಗರದ ಮಾಸ್ಟರ್ ಪ್ಲ್ಯಾನ್ ರಚಿಸಲು ಮತ್ತು ಯೋಜನೆಗಳ ಪ್ರಮುಖ ಅನುಷ್ಠಾನಕ್ಕೆ ಗುಂಪು ಅಧಿಕಾರ ಹೊಂದಿದೆ.

ನಮ್ಮ ನಗರ ಮತ್ತು ಅದರ ಎಲ್ಲಾ ನಿವಾಸಿಗಳು ಎದುರಿಸುತ್ತಿರುವ ಎಲ್ಲಾ ಅಂಶಗಳ ಮೇಲೆ ಒಟ್ಟಾರೆ ಗಮನ ಹರಿಸುವುದರೊಂದಿಗೆ ಯೋಜನೆ ಪಾರದರ್ಶಕವಾಗಿರಬೇಕು ಮತ್ತು ಸಾರ್ವಜನಿಕರ ಸಂಪೂರ್ಣ ದೃಷ್ಟಿಯಲ್ಲಿರಬೇಕು. ಎಂಪಿಸಿಯು ವಾರ್ಡ್ ಸಮಿತಿಗಳು, ನಾಗರಿಕರು, ಆರ್‌ಡಬ್ಲ್ಯೂಎ ಮತ್ತು ಎನ್‌ಜಿಒಗಳಿಗೆ ನಿರ್ದಿಷ್ಟ ಪಾತ್ರವನ್ನು ಕಲ್ಪಿಸುತ್ತದೆ. ಸಂವಿಧಾನದ 243ZE ನೇ ವಿಧಿ ಎಂಪಿಸಿಯನ್ನು ನಗರದ ಅಭಿವೃದ್ಧಿ ಯೋಜನೆಗಳನ್ನು ರೂಪಿಸುವ ಸಾಂವಿಧಾನಿಕ ಸಂಸ್ಥೆಯಾಗಿ ಸ್ಪಷ್ಟವಾಗಿ ಆದೇಶಿಸುತ್ತದೆ;

ಎಂಪಿಸಿ ಬಲಪಡಿಸುವ ಪ್ರಯತ್ನದಲ್ಲಿ, ನಮ್ಮ ಬೆಂಗಳೂರು ಫೌಂಡೇಷನ್ ಹಾಗೂ ಸಂಸದ ರಾಜೀವ್‌ ಚಂದ್ರಶೇಖರ್ ಅವರು 2016 ಜೂನ್‌ 1 ರಂದು ಕೆಳಕಂಡ ಕಾರಣಗಳೊಂದಿಗೆ ಕರ್ನಾಟಕ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆ ಹೂಡಿದರು:

•       ವಿಷನ್ ಗ್ರೂಪ್ ಅನ್ನು ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ರದ್ದು ಮಾಡಿ.

•      ಬೆಂಗಳೂರಿನ ಮೆಟ್ರೋಪಾಲಿಟನ್ ಪ್ರದೇಶದ ಯೋಜನೆಗೆ ಸಂಬಂಧಿಸಿದ ವಿಷಯಗಳನ್ನು ಪರಿಗಣಿಸಲು, ಚರ್ಚಿಸಲು ಮತ್ತು ಆಯ್ಕೆ ಮಾಡಲು ಅಧಿಕಾರ ಹೊಂದಿರುವ ಏಕೈಕ ಸಮಿತಿಯಾಗಿ ಬಿಎಂಪಿಸಿಯನ್ನು ಘೋಷಿಸಿ.

•       ಬಿಎಂಪಿಸಿಯಲ್ಲಿ ಸಾರ್ವಜನಿಕರ ಸಹಭಾಗಿತ್ವಕ್ಕೆ ಕರೆಸಿಕೊಳ್ಳಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಿ.

ಪ್ರತಿವಾದಿಗಳು

1.      ಕರ್ನಾಟಕ ಸರ್ಕಾರ,ರಾಜ್ಯ ಮುಖ್ಯ ಕಾರ್ಯದರ್ಶಿ ಪ್ರತಿನಿಧಿಸಿದ್ದಾರೆ

2.      ಬಿಬಿಎಂಪಿ, ಆಯುಕ್ತರು ಪ್ರತಿನಿಧಿಸುತ್ತಾರೆ

3.      ಯುಡಿಡಿ, ಅದರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪ್ರತಿನಿಧಿಸಿದ್ದಾರೆ

4.      ಬಿಡಿಎ, ಆಯುಕ್ತರು ಪ್ರತಿನಿಧಿಸಿದ್ದಾರೆ

5.      ಕರ್ನಾಟಕ ರಾಜ್ಯ ಚುನಾವಣಾ ಆಯೋಗ,  ಅದರ ಆಯುಕ್ತರು ಪ್ರತಿನಿಧಿಸುತ್ತಾರೆ

6.      ಬಿಎಂಆರ್‌ಡಿಎ, ಇದರ ಆಯುಕ್ತರು ಪ್ರತಿನಿಧಿಸುತ್ತಾರೆ

Post a comment