ಇಂತಹಾ ಕ್ರಿಯಾಶೀಲ ಸಂಸ್ಥೆಯನ್ನು ಹೊಂದಿರಲು ಬೆಂಗಳೂರು ನಿಜಕ್ಕೂ ಪುಣ್ಯ
ಸೇವೆ ಎಂಬುದಕ್ಕೆ ನಮ್ಮ ಬೆಂಗಳೂರು ಫೌಂಡೇಶನ್ ಒಂದು ಸ್ಪಷ್ಟ ನಿದರ್ಶನ. ಜನರ ಬಗ್ಗೆ ಅಪಾರ ಕಾಳಜಿ ಹೊಂದಿರುವುದಲ್ಲದೆ ಸಮಸ್ಯೆಗಳಿಗೆ ಸೂಕ್ತ ಪರಿಹಾರದೊಂದಿಗೆ ಸದಾ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ತೊಡಗಿರುವ ಇಂತಹಾ ಸಂಸ್ಥೆಯನ್ನು ಹೊಂದಿರಲು ಬೆಂಗಳೂರು ನಿಜಕ್ಕೂ ಪುಣ್ಯ ಮಾಡಿರಬೇಕು. ಇವರೊಂದಿಗೆ ನಮ್ಮ ಸಂಬಂಧ ಆರೋಗ್ಯಕರವಾಗಿದ್ದು, ಈ ಸಂಸ್ಥೆಯ ಶಕ್ತಿ ಮತ್ತು ವೃತ್ತಿಪರತೆ ಶ್ಲಾಘನೀಯ. ಸೇವೆ ಮತ್ತು ಅಂತ್ಯೋದಯಕ್ಕಾಗಿ ಕಾರ್ಯನಿರ್ವಹಿಸುವ ಸಂಘಟನೆಗಳಿಗೆ ನಮ್ಮ ಬೆಂಗಳೂರು ಫೌಂಡೇಶನ್ ಮಾದರಿಯಾಗಿದೆ. ಭವಿಷ್ಯದಲ್ಲಿ ಒಳ್ಳೆಯದಾಗಲಿ ಎಂದು ಆಶಿಸುತ್ತೇವೆ.