nbf@namma-bengaluru.org
9591143888

ಸುಬ್ಬು ಹೆಗ್ಡೆ, ಅಧ್ಯಕ್ಷರು (COPOA, FOVCAB)

ಸುಬ್ಬು ಹೆಗ್ಡೆ, ಅಧ್ಯಕ್ಷರು (COPOA, FOVCAB)

ಎನ್ಬಿಎಫ್ ನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯಿದೆ

ಕಳೆದ ಆರು ವರ್ಷಗಳಿಂದ ನಮ್ಮ ಬೆಂಗಳೂರು ಫೌಂಡೇಶನ್ (ಎನ್ಬಿಎಫ್)ನ ಭಾಗವಾಗಿರುವ ನಾನು, ಎನ್ಬಿಎಫ್’ನ ಅಂಗ ಸಂಸ್ಥೆಯಾದ  ಬೆಂಗಳೂರು ನಿವಾಸಿಗಳ ಶ್ರೇಯೋಭಿವೃದ್ಧಿ ಸಂಸ್ಥೆ ಬ್ರೇಸ್’ನ ಸದಸ್ಯನಾಗಿದ್ದೇನೆಯಲ್ಲದೆ, ಯುನೈಟೈಡ್ ಬೆಂಗಳೂರು ಅಭಿಯಾನದ ಕಾರ್ಯಕರ್ತನಾಗಿ ಸೇವೆಸಲ್ಲಿಸಿರುವ ತೃಪ್ತಿ ನನಗಿದೆ.

ಬೆಂಗಳೂರಿನ ಗತ ವೈಭವವನ್ನು ಮತ್ತೆ ರೂಪಿಸುವಲ್ಲಿ ಎನ್ಬಿಎಫ್ ಅವಿರತ ಪ್ರಯತ್ನಗಳನ್ನು ಮಾಡುತ್ತಿದೆ. ಎನ್ಬಿಎಫ್’ನ ಸಮರ್ಪಕವಾದ ಯೋಜನೆ ಹಾಗೂ ಕೈ ಹಿಡಿದ ಕೆಲಸವನ್ನು ಪರಿಣಾಮಕಾರಿಯಾಗಿ ಕಾರ್ಯರೂಪಕ್ಕೆ ತರುವ ಪ್ರಯತ್ನಗಳಾದ, ಕೆರೆಗಳನ್ನು ಸಂರಕ್ಷಿಸಿ ಪುನರುಜ್ಜೀವನಗೊಳಿಸುವುದು, ಸ್ಟೀಲ್ ಬ್ರಿಡ್ಜ್ ಯೋಜನೆಗೆ ತಡೆ, ಬೆಳ್ಳಂದೂರು ಕೆರೆಯನ್ನು ಕಲುಷಿತದಿಂದ ರಕ್ಷಿಸಲು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿದ್ದು, ಬೃಹತ್ ಬೆಂಗಳೂರು ಮಹಾ ನಗರ ಪಾಲಿಕೆಯನ್ನು ರಾಜ್ಯಸರ್ಕಾರದ ಕಪಿಮುಷ್ಠಿಯಿಂದ ಹೊರಗಿಡಲು ಸಂವಿಧಾನದ 74ನೇ ತಿದ್ದುಪಡಿಯ ಮೂಲಕ ಸ್ಥಳೀಯ ಆಡಳಿತಕ್ಕೆ ಹೆಚ್ಚಿನ ಅಧಿಕಾರ ಪ್ರಾಪ್ತವಾಗುವಂತೆ ಕಾನೂನಾತ್ಮಕ ಹೋರಾಟ ಮಾಡಿದ್ದು, ಬನ್ನೇರುಘಟ್ಟ ಹಸಿರು ವಲಯವನ್ನು ಸಂರಕ್ಷಿಸಿದ್ದು, ಬೆಂಗಳೂರಿನಲ್ಲಿರುವ ತೆರೆಮರೆಯ ಪ್ರತಿಭೆಗಳನ್ನು ಗುರುತಿಸಿ ಅವರನ್ನು ಅಭಿನಂದಿಸುತ್ತಿರುವುದು, ಮುಂತಾದವೆಲ್ಲವೂ ಬೆಂಗಳೂರು ನಗರಕ್ಕೆ ಎನ್ಬಿಎಫ್ ನೀಡಿದ ಮಹತ್ತರ ಕೊಡುಗೆಯಾಗಿದೆ. ಇಂತಹಾ ಸಂಸ್ಥೆ ನಮ್ಮ ಬೆಂಗಳೂರು ಫೌಂಡೇಶನ್’ನ ಭಾಗವಾಗಿರುವುದಕ್ಕೆ ನನಗೆ ಹೆಮ್ಮೆಯೆನಿಸಿದೆ.