Vimove ಫೌಂಡೇಶನ್ ನಮ್ಮ ಬೆಂಗಳೂರು ಫೌಂಡೇಶನ್ ಮತ್ತು ಇತರ ಸಮುದಾಯ ಪಾಲುದಾರರ ಸಹಯೋಗದೊಂದಿಗೆ ಹಸಿರು ಮತ್ತು ಸ್ವಚ್ಛ ಬೆಂಗಳೂರಿಗಾಗಿ ಸುಸ್ಥಿರ ಅಭಿವೃದ್ಧಿಗೆ ಶ್ರಮಿಸುತ್ತಿರುವ 5 ಜನ ತೆರೆಯ ಹಿಂದೆ ಕೆಲಸಮಾಡುವ ವೀರರನ್ನು ಗುರುತಿಸಿದೆ. ಬೆಂಗಳೂರಿನ ಗುಬ್ಬಚ್ಚಿ ಮನುಷ್ಯ ಎಡ್ವಿನ್ ಜೋಸೆಫ್, ಪ್ಲೋಗ್‌ಮ್ಯಾನ್ ಸಿ ನಾಗರಾಜ್, ಪ್ರಾಣಿ ರಕ್ಷಕ ರಚನಾ ರವಿಕುಮಾರ್, ಪರ್ಮಾಕ್ಯೂರಿಸ್ಟ್ ರಕ್ಷಿತ್ ಪವಾರ್ ಮತ್ತು ಉದ್ಯಮಿ ಹರ್ಷಿತ್ ರೆಡ್ಡಿ ಅವರ ಸ್ಪೂರ್ತಿದಾಯಕ ಕಥೆಗಳು ಸುಸ್ಥಿರತೆಯತ್ತ ಸಣ್ಣ ಹೆಜ್ಜೆಗಳನ್ನು ಇಡುವಂತೆ ಪ್ರೇಕ್ಷಕರನ್ನು ಪ್ರೋತ್ಸಾಹಿಸಿದರು “ಪಂಚತಾವತ” ಕಲಾವಿದರು ಪ್ರಕೃತಿ ನಿಯಮಗಳ ಕುರಿತು ನೃತ್ಯ ಪ್ರದರ್ಶನ ನೀಡಿದರು.

Post a comment