ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳ ಸ್ಥಾಪನೆ ವಿರುದ್ಧ ಬೆಂಗಳೂರು ಮಹಾನಗರ ಪಾಲಿಕೆ ಕ್ರಮ ತೆಗೆದುಕೊಳ್ಳುತ್ತಿರುವ ಹೊತ್ತಿನಲ್ಲೇ, ನಗರದ ಕೆಲ ಪ್ರದೇಶಗಳಲ್ಲಿ ವ್ಯಾಪಾರಿಗಳು ವಿವಾಸಿಗಳನ್ನು ಬೆದರಿಸಿದ ಪ್ರಕರಣಗಳು ನಮ್ಮ ಬೆಂಗಳೂರು ಪ್ರತಿಷ್ಠಾನದ ಗಮನಕ್ಕೆ ಬಂದಿವೆ. ಇದರ ವಿರುದ್ಧ ಜನ ದನಿಯೆತ್ತಿದ್ದು, ಪಾಲಿಕೆ ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ವಲಯ ನಿಯಮಗಳ ಅನುಷ್ಠಾನವನ್ನು ಖಾತ್ರಿಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಪಾಲಿಕೆ ಆಯುಕ್ತರಿಗೆ ಸೆಪ್ಟೆಂಬರ್ 20, 2019ರಲ್ಲಿ ಎನ್‍ಬಿಎಫ್ ಹಾಗೂ 17 ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಟನೆಗಳು ಪತ್ರ ಬರೆದಿದ್ದು, ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಮಳಿಗೆಗಳು ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಆಗ್ರಹಿಸಿದವು. ಇದಕ್ಕೆ ಪ್ರತಿಕ್ರಿಯೆಯಾಗಿ ಡಿಸೆಂಬರ್ 6,2019ರಂದು ಸಾರ್ವಜನಿಕ ಸೂಚನೆ ಹಾಗೂ ಆನಂತರ ವೈಯಕ್ತಿಕವಾಗಿ ಸೂಚನೆಗಳನ್ನು ಹೊರಡಿಸಿದ ಆಯುಕ್ತರು, ವಸತಿ ಪ್ರದೇಶದಲ್ಲಿನ ವಾಣಿಜ್ಯ ಮಳಿಗೆಗಳನ್ನು ತಕ್ಷಣ ಮುಚ್ಚಬೇಕೆಂದು ಆಗ್ರಹಿಸಿದರು.
ಪತ್ರಗಳು: ಬೆಂಗಳೂರಿನಲ್ಲಿ ಅನಧಿಕೃತ, ಅಕ್ರಮ ಹಾಗೂ ಎಗ್ಗಿಲ್ಲದ ವಾಣಿಜ್ಯೀಕರಣ ಕುರಿತ ಬಿಬಿಎಂಪಿ ಆಯುಕ್ತರಿಗೆ ಸಲ್ಲಿಸಿದ ಪತ್ರ
ಪತ್ರಗಳು: ಈ ಸಂಬಂಧ ಆರ್‍ಡಬ್ಲ್ಯುಎಗಳು ಸಲ್ಲಿಸಿದ ಮನವಿ ಆಯುಕ್ತರಿಗೆ ರವಾನೆ
ವೃತ್ತ ಸಂಖ್ಯೆ 1, ವೃತ್ತ ಸಂಖ್ಯೆ 2 ಹಾಗೂ ವೃತ್ತ ಸಂಖ್ಯೆ 3ರ ಮುಖ್ಯ ಹಾಗೂ ಮಿಶ್ರ ವಲಯಗಳ 40 ಅಡಿಗಿಂತ ಕಡಿಮೆ ಅಗಲವಿರುವ ರಸ್ತೆಗಳಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಎಲ್ಲ ಆಸ್ತಿಗಳ ಜಿಐಎಸ್ ನಕ್ಷೆಯೊಂದನ್ನು ಸಂಸ್ಥೆ ಸಿದ್ಧಪಡಿಸಿದ್ದು, 2015ರ ಮಾಸ್ಟರ್ ಪ್ಲ್ಯಾನ್ ಹಾಗೂ ವಲಯ ನಿಯಮಗಳನ್ನು ಉಲ್ಲಂಘಿಸುವ ಆಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲು ಇದು ನೆರವಾಗಲಿದೆ.
ವಲಯ ನಿಯಮಗಳು ಹಾಗೂ ಸಂಬಂಧಿಸಿದ ಕಾನೂನುಗಳ ಕುರಿತು ಅರಿವು ಮೂಡಿಸಲು ಸಾರ್ವಜನಿಕ ಸೂಚನೆಯನ್ನು ಸೃಷ್ಟಿಸಲಾಗಿದೆ.
ಎಇ,ಎಇಇ ವಸತಿ ಪ್ರದೇಶಗಳಲ್ಲಿ ನಿರ್ಮಾಣವನ್ನು ಪರಿಶೀಳಿಸಿದ್ದರೆ, ಎಡಿಟಿಪಿಗೆ ಅನುಮತಿ ನೀಡದೆ ಇದ್ದರೆ, ಎಂಓಎಚ್,ಎಚ್ ಇಲ್ಲವೇ ಎಚ್‍ಒ ವಸತಿ ಪ್ರದೇಶದಲ್ಲಿನ ವಾಣಿಜ್ಯ ಮಳಿಗೆಗಳಿಗೆ ಅನುಮತಿ ನೀಡದೆ ಇದ್ದಲ್ಲಿ ಹಾಗೂ ಬೆಸ್ಕಾಂ ಮತ್ತು ಬಿಡಬ್ಲಯುಎಸ್‍ಎಸ್‍ಬಿ ಅನುಮತಿಯನ್ನು ವಸತಿಯಿಂದ ವಾಣಿಜ್ಯ ಬಳಕೆಗೆ ಎಂದು ಪರಿವರ್ತಿಸದೆ ಇದ್ದಲ್ಲಿ, ಬಿಬಿಎಂಪಿಯ ಹಸ್ತಕ್ಷೇಪದ ಅವಶ್ಯಕತೆ ಬರುತ್ತಿರಲಿಲ್ಲ. ಕರ್ತವ್ಯವನ್ನು ಸೂಕ್ತವಾಗಿ ನಿರ್ವಹಿಸದೆ ಇರುವ ಈ ಎಲ್ಲ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು.
ಒಂದು ವೇಳೆ ನೀವು ಕೂಡ ವಸತಿ ಕ್ಷೇಮಾಭಿವೃದ್ಧಿ ಸಂಘ ಇಲ್ಲವೇ ಈ ಸಮಸ್ಯೆಯಿಂದ ಸಂತ್ರಸ್ತರಾದ ನಿವಾಸಿಯಾಗಿದ್ದರೆ, ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ವಿಳಾಸ-ಟಿbಜಿ@ಞಚಿಟಿಟಿಚಿಜಚಿ.ಟಿಚಿmmಚಿ-beಟಿgಚಿಟuಡಿu.oಡಿg <mಚಿiಟಣo:ಟಿbಜಿ@ಞಚಿಟಿಟಿಚಿಜಚಿ.ಟಿಚಿmmಚಿ-beಟಿgಚಿಟuಡಿu.oಡಿg>.
If you too are a Resident Welfare Association or a resident affected by this menace, do kindly share necessary information with us. Write in to us at – nbf@kannada.namma-bengaluru.org
Post a comment