nbf@namma-bengaluru.org
9591143888

ಸಿಂಗನಾಯಕನಹಳ್ಳಿ ಕೆರೆ

ಸಿಂಗನಾಯಕನಹಳ್ಳಿ ಕೆರೆಯ ಪುನರುಜ್ಜೀವನಕ್ಕೆ ಕೊಡಲಿಯೇಟು ನೀಡಬೇಡಿ

ಸಿಂಗನಾಯಕನಹಳ್ಳಿ ಕೆರೆಯ ದಡದಲ್ಲಿ ದೊಡ್ಡದಾಗಿ ಬೆಳೆದುನಿಂತಿರುವ ೬,೩೧೬ ಮರಗಳನ್ನು ಕಡಿಯುವ ಮೂಲಕ ಆ ಕೆರೆಯನ್ನು ಸುತ್ತಮುತ್ತಲಿನ ಪ್ರದೇಶಗಳಲ್ಲಿರುವ ಇತರೆ ಹಲವು ಕೆರೆಗಳಿಗೆ ಫೀಡರ್ ಕೆರೆಯಾಗಿ ಅಭಿವೃದ್ಧಿಪಡಿಸುವುದಾಗಿ ಮತ್ತು ನೀರಾವರಿಗೆ ಇವುಗಳ ಸಂಸ್ಕರಿತ ನೀರನ್ನು ಬೆಳೆಸಲು ನಿರ್ಧರಿಸಿರುವುದಾಗಿ ಕರ್ನಾಟಕ ಸರ್ಕಾರ ಇತ್ತೀಚೆಗೆ ಘೋಷಿಸಿದೆ. ಸಾರ್ವಜನಿಕ ಸಮಾಲೋಚನೆಗೆ ಸಾಕಷ್ಟು ಸಮಯಾವಕಾಶವನ್ನು ನೀಡದೆಯೇ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇದಕ್ಕೆ ಪ್ರತಿಯಾಗಿ, ನಮ್ಮ ಬೆಂಗಳೂರು ಪ್ರತಿಷ್ಠಾನದ ನೇತೃತ್ವದಲ್ಲಿ ನಗರ ಸಂರಕ್ಷಕರು, ನಾಗರಿಕ ವಿಜ್ಞಾನಿಗಳು, ಕಲಾವಿದರು, ನಾಗರಿಕ ಹೋರಾಟಗಾರರು, ವನ್ಯಜೀವಿ ಆಸಕ್ತರು ಮತ್ತು ವನ್ಯಜೀವಿ ಛಾಯಾಗ್ರಾಹಕರ ತಂಡವು ಸಿಂಗನಾಯಕನಹಳ್ಳಿ ಕೆರೆಗೆ ಭೇಟಿ ನೀಡಿತು. ಈ ತಂಡದ ನೇತೃತ್ವ ವಹಿಸಿದ್ದ ಎನ್‌ಬಿಎಫ್ ಪ್ರಧಾನ ವ್ಯವಸ್ಥಾಪಕ ವಿನೋದ್ ಜಾಕೋಬ್, ನಗರ ಸಂರಕ್ಷಕ ವಿಜಯ್ ನಿಶಾಂತ್ ಮತ್ತು ಇತರೆ ಪ್ರತಿನಿಧಿಗಳು ಆ ಪ್ರದೇಶದಲ್ಲಿ ಅಧ್ಯಯನವನ್ನು ಕೈಗೊಂಡರು.

  • Save Trees - Say No to Axing for revival of Singanayakanahalli Lake

ಕೆರೆಯ ತಟವು ಸ್ವಯಂ-ಸುಸ್ಥಿರ ರೀತಿಯಲ್ಲಿ ಜೀವವೈವಿಧ್ಯತೆಯ ತಾಣವಾಗಿ ವಿಕಸನಗೊಂಡಿ ರುವುದನ್ನು ಕಂಡು ಈ ತಂಡಕ್ಕೆ ಖಷಿಯೂ ಅಚ್ಚರಿಯೂ ಆಯಿತು. ದಟ್ಟ ಅರಣ್ಯದ ಮಾದರಿಯ ಪರ್ಣವೃಕ್ಷಗಳು, ಸುಮಾರು ೨೫-೩೦ ವರ್ಷಗಳಷ್ಟು ಹಳೆಯದಾದ ಹಾಗೂ ವಿವಿಧ ಪಕ್ಷಿಗಳು, ಪಕ್ಷಿಗೂಡುಗಳು, ಪತಂಗಗಳು ಮತ್ತು ಚಿಟ್ಟೆಗಳಿಗೆ ಆವಾಸಸ್ಥಾನವಾಗಿ ಬೆಳೆದು ನಿಂತಿರುವ ಮರಗಳನ್ನು ನೋಡಿ ಅವರೆಲ್ಲರೂ ನಿಬ್ಬೆರಗಾದರು. ಶೆಡ್ಯೂಲ್ ೧ ವನ್ಯಜೀವಿಯ ಪ್ರಭೇದದಲ್ಲಿ ಬರುವಂಥ ನವಿಲು ಗಳೂ ಅವರ ಕಣ್ಣಿಗೆ ಬಿದ್ದವು. ಆ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಕೆಲವು ಜಾತಿಯ ಪಕ್ಷಿಗಳನ್ನೂ ಅವರು ನೋಡಿದರು. ಈ ಅರಣ್ಯವು ಇವೆಲ್ಲವೂಗಳಿಗೂ ಆಶ್ರಯವನ್ನು ನೀಡಿತ್ತು ಮತ್ತು ಒಂದು ಜೀವಂತಿಕೆಯಿಂದ ಕೂಡಿದ ಆವಾಸಸ್ಥಾನವಾಗಿ ಬದಲಾಗಿತ್ತು. ಈ ಪ್ರದೇಶದಲ್ಲಿ ವಿಶಾಲವಾದ ಹುಲ್ಲುಗಾವಲು ಕೂಡ ಇದ್ದು, ಅಕ್ಕಪಕ್ಕದ ಗ್ರಾಮಗಳ ಜನರು ತಮ್ಮ ಜಾನುವಾರುಗಳನ್ನು ಇಲ್ಲೇ ಮೇಯಿಸುತ್ತಾರೆ. ಕೆಲವು ವರ್ಷಗಳ ಹಿಂದಷ್ಟೇ ಅರಣ್ಯ ಇಲಾಖೆಯೇ ಈ ಭೂಮಿಯ ಬಗ್ಗೆ ಆಸಕ್ತಿ ವಹಿಸಿ, ಕಣ್ಣಿಗೆ ಕಾಣುವಂಥ ನೈಸರ್ಗಿಕ ಸಸ್ಯವರ್ಗದ ನಡುವೆ ಪೊಂಗಂ ಸಸ್ಯಗಳನ್ನು ನೆಟ್ಟಿತ್ತು.   

  • Save Trees - Say No to Axing for revival of Singanayakanahalli Lake
  • Save Trees - Say No to Axing for revival of Singanayakanahalli Lake
  • Save Trees - Say No to Axing for revival of Singanayakanahalli Lake
  • Save Trees - Say No to Axing for revival of Singanayakanahalli Lake

ನಮ್ಮ ಬೆಂಗಳೂರು ಪ್ರತಿಷ್ಠಾನ ಮತ್ತು ಅದರ ಪಾಲುದಾರರು ಈ ಕೆರೆ ಪುನರುಜ್ಜೀವನ ಯೋಜನೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತಾರಾದರೂ, ಮರಗಳ ಹನನ ಮತ್ತು ಹಸಿರು ನಾಶ ಮಾಡುವುದನ್ನು ಒಪ್ಪುವುದಿಲ್ಲ.

Post a comment