nbf@namma-bengaluru.org
9591143888

Authored Articles

2017 ಹೊಸ ವರ್ಷದ ಮುನ್ನಾದಿನ: ನಮ್ಮ ಬೆಂಗಳೂರು ಎಷ್ಟು ಸುರಕ್ಷಿತ?

ನಮ್ಮ ನಗರಕ್ಕೆ ಬೇಕಿರುವುದು ಏನೆಂದರೆ, ಮಹಿಳೆಯರ ಜೊತೆಗೆ ಐಕಮತ್ಯ ಹೊಂದಿರುವ ಪುರುಷರು, ಎಲ್ಲವನ್ನು ಸಹಿಸಿಕೊಂಡು ಮೌನವಾಗಿರದ ಮಹಿಳೆಯರು ಹಾಗೂ ಈ ಜೀವಂತ ಸಮಸ್ಯೆಗೆ ಪ್ರತಿಕ್ರಿಯಿಸಲು ಸನ್ನದ್ಧವಾದ ರಾಜ್ಯದ ರಕ್ಷಣಾ ವ್ಯವಸ್ಥೆ.

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಲಾತ್ಕಾರ ಪ್ರಕರಣಗಳು ಮಹಿಳೆಯರು ಮಾತ್ರವಲ್ಲ, ಎಲ್ಲ ನಾಗರಿಕರಿಗೂ ರಕ್ಷಣೆ ನೀಡುವ ಸಾಮಥ್ರ್ಯವನ್ನು ರಾಜ್ಯ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆ ಹೊಂದಿದೆಯೇ ಎನ್ನುವ ಪ್ರಶ್ನೆಯನ್ನು ಕೇಳುವಂತೆ ಮಾಡಿದೆ. ಸಾವಿರಾರು ನಾಗರಿಕರು ಶನಿವಾರ ಬ್ರಿಗೇಡ್ ರಸ್ತೆ(ಹೊಸ ವರ್ಷದ ಮುನ್ನಾ ದಿನಸ ಘಟನೆ ನಡೆದ ಸ್ಥಳ)ಯಲ್ಲಿ ಮಾನವ ಸರಪಳಿಯನ್ನು ರಚಿಸಿ, ಮೌನ ಪ್ರತಿಭಟನೆ ನಡೆಸಿದ್ದನ್ನು ನೋಡಿದರೆ, ಬೆಂಗಳೂರಿಗರ ತಾಳ್ಮೆ ಮುಗಿದಿದೆ; ಸರ್ಕಾರ ತಮ್ಮನ್ನು ಲಘುವಾಗಿ ಪರಿಗಣಿಸುವುದನ್ನು ಜನರು ತಾಳಿಕೊಳ್ಳುತ್ತಿಲ್ಲ ಎನ್ನುವುದಕ್ಕೆ ಸಾಕ್ಷಿ.
ನಮ್ಮ ನಗರಕ್ಕೆ ಬೇಕಿರುವುದು ಮಹಿಳೆಯರ ಜೊತೆಗೆ ಐಕಮತ್ಯ ಹೊಂದಿರುವ ಪುರುಷರು, ಎಲ್ಲವನ್ನು ಸಹಿಸಿಕೊಂಡು ಮೌನವಾಗಿರದ ಮಹಿಳೆಯರು ಹಾಗೂ ಈ ಜೀವಂತ ಸಮಸ್ಯೆಗೆ ಪ್ರತಿಕ್ರಿಯಿಸಲು ಸನ್ನದ್ಧವಾದ ರಾಜ್ಯದ ರಕ್ಷಣಾ ವ್ಯವಸ್ಥೆ. ಒಂದು ವೇಳೆ ಇದನ್ನು ನಿರ್ಲಕ್ಷಿಸಿದರೆ, ಬೆಂಗಳೂರು ಮಹಿಳೆಯರಿಗೆ ಅಸುರಕ್ಷಿತ ನಗರಗಳ ಪಟ್ಟಿಗೆ ಸೇರ್ಪಡೆಯಾಗಲಿದೆ.

ನಿಮಗೆ ಬೇಕಿರುವುದು ಇದಲ್ಲ ತಾನೇ? ಬೆಂಗಳೂರು ಅಥವಾ ಬೇರಾವುದೇ ನಗರ ಇಂಥದ್ದನ್ನು ಆಶಿಸುವುದೇ?

ರಾಜ್ಯ ಸರ್ಕಾರ ಸರ್ವೇಕ್ಷಣೆ ಸಾಮಥ್ರ್ಯವನ್ನು ಹೆಚ್ಚಿಸುವ ಅಗತ್ಯವಿದೆ.

ಈ ಹಿಂದೆ ಹೊಸ ವರ್ಷದ ಸಂಭ್ರಮಾಚರಣೆ ವೇಳೆಯಲ್ಲಿ ಬ್ರಿಗೇಡ್ ಹಾಗೂ ಎಂ.ಜಿ.ರಸ್ತೆಯಲ್ಲಿ ಮಹಿಳೆಯರ ಚುಡಾವಣೆಯ ಹಲವು ಪ್ರಕರಣಗಳು ನಡೆದಿವೆ. ಅಷ್ಟು ಮಾತ್ರವಲ್ಲದೆ, ನಗರದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳು ಕೂಡ ಸಂಭವಿಸಿವೆ. ಸರ್ಕಾರ ಇಂಥ ಘಟನೆಗಳನ್ನು ತಡೆಯಲು ಯಾವುದೇ ಗಂಭೀರ ಕ್ರಮ ತೆಗೆದುಕೊಳ್ಳದ ಹಿನ್ನೆಲೆಯಲ್ಲಿ ವರ್ಷೇವರ್ಷೇ ಇಮಥ ಘಟನೆಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ.

ನಮ್ಮೆಲ್ಲರಿಗೂ ತೀವ್ರ ಆಘಾತ ತಂದ 2014ರಲ್ಲಿ ಚರ್ಚ್ ರಸ್ತೆಯಲ್ಲಿ ನಡೆದ ಸ್ಪೋಟವನ್ನು ಇಲ್ಲಿ ಸ್ಮರಿಸಬಹುದು. ನಗರದ ರಕ್ಷಣಾ ವ್ಯವಸ್ಥೆಯನ್ನು ಕಳಚಲು ನಡೆದ ಇಂಥ ಘಾತಕ ಕೃತ್ಯದ ಬಳಿಕವಾದರೂ ಸರ್ಕಾರ ಸುರಕ್ಷತಾ ವ್ಯವಸ್ಥೆಯ ಸಾಮಥ್ರ್ಯವನ್ನು ಸಬಲಗೊಳಿಸಬಹುದಿತ್ತು. ಮಾಧ್ಯಮದ ಕ್ಯಾಮೆರಾಮನ್‍ಗಳಿಗೆ ಲಭ್ಯವಾದ ದೃಶ್ಯಗಳು ಎಂ.ಜಿ. ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಪೊಲೀಸರು ಅಳವಡಿಸಿರುವ ಸಿ.ಸಿ. ಕ್ಯಾಮೆರಾಗಳಿಗೆ ಕಾಣದೆ ಹೋಗಿರುವುದು ಆಶ್ಚರ್ಯ ಹುಟ್ಟಿಸುವಂಥದ್ದು. ಭವಿಷ್ಯದಲ್ಲಿ ಚರ್ಚ್ ಸ್ಟ್ರೀಟ್‍ನಲ್ಲಿ ನಡೆದ ಘಟನೆಯಂಥದ್ದನ್ನು ತಡೆಯಲು ಇಲ್ಲವೇ ಅಪರಾಧಿಗಳನ್ನು ಪತ್ತೆ ಹಚ್ಚಲು ಯಾವ ಸಿದ್ಧತೆ ನಡೆಸಿದ್ದೇವೆ ಎನ್ನುವ ಅತಿ ಮುಖ್ಯ ಪ್ರಶ್ನೆಯನ್ನು ಇದು ಎತ್ತುತ್ತದೆ.

ಕಾರ್ಯ ನಿರ್ವಹಿಸುವ ಸಿ.ಸಿ.ಕ್ಯಾಮೆರಾಗಳಿಂದ ಹಿಡಿದು ಪ್ರಮುಖ ಸ್ಥಳಗಳಲ್ಲಿ ದಿನದ 24 ಗಂಟೆಯೂ ಕಾರ್ಯ ನಿರ್ವಹಿಸುವ ಪೊಲೀಸರ ನಿಯುಕ್ತಿ ಸೇರಿದಂತೆ ನಾಗರಿಕರನ್ನು ಎಲ್ಲ ರೀತಿಯ ಅಪರಾಧಗಳಿಂದ ರಕ್ಷಿಸಲು ಸರ್ಕಾರ ಮತ್ತಷ್ಟು ಕ್ರಿಯಾಶೀಲವಾಗಿ ಕೆಲಸ ಮಾಡಬೇಕಿದೆ.

ಗೃಹ ಸಚಿವರ ಹೇಳಿಕೆ “ಖಂಡನಾರ್ಹ”:

“ಯುವಜನರು ಪಾಶ್ಚಾತ್ಯರ ಮನಸ್ಥಿತಿಯನ್ನು ಮಾತ್ರವಲ್ಲ, ಅವರ ವಸ್ತ್ರಗಳನ್ನೂ ನಕಲು ಮಾಡುತ್ತಾರೆ. ಹೀಗಾಗಿ ಹೆಣ್ಣು ಮಕ್ಕಳಿಗೆ ಕೀಟಲೆಯಂಥ ಪ್ರಕರಣಗಳು ಸಂಭವಿಸುತ್ತವೆ’ ಎನ್ನುವ ಗೃಹ ಸಚಿವ ಜಿ.ಪರಮೇಶ್ವರ ಅವರ ಹೇಳಿಕೆಯು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯಿತು.

ಅಮಾನುಷ, ಹಾಸ್ಯಾಸ್ಪದ ಹಾಗೂ ಗಾಬರಿ ಹುಟ್ಟಿಸುವಂಥ ಇಂಥ ಹೇಳಿಕೆಗಳನ್ನು ಖಂಡಿಸಲು ನಮಗೆ ಪದಗಳು ಸಾಕಾಗುವುದಿಲ್ಲ. ಆದರೆ, ಇಂಥ ಆಲೋಚನಾ ಸರಣಿಗಳು ಬೆಂಗಳೂರನ್ನು ಇನ್ನಷ್ಟು ಅರಾಜಕತೆಗೆ ತಳ್ಳುತ್ತವೆ. ಸಚಿವರು ನಂತರ ಸ್ಪಷ್ಟೀಕರಣ ನೀಡಿದರು-“ಮಹಿಳೆಯರಿಗೆ ಸಮಾನ ಹಕ್ಕು ಇದೆ. ನಾನು ಮಹಿಳೆಯರು ಹಾಗೂ ಮಕ್ಕಳ ಸುರಕ್ಷತೆಯ ಪ್ರಾಮುಖ್ಯತೆ ಬಗ್ಗೆ ಹೇಳಿದೆ. ನಗರ ಪೊಲೀಸರಿಗೆ ಸುಳಿವು ಸಿಕ್ಕಿದ್ದು, ಅವರು ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದಾರೆ’. ಆದರೆ, ಈ ಹೇಳಿಕೆ ಬಹಳ ತಡವಾಗಿ ಬಂದಿತು ಮತ್ತು ಬೆಂಗಳೂರಿನ ಹೆಸರು ಕೆಡಿಸಲು ಇಂಥ ಕೃತ್ಯ ನಡೆಯುತ್ತಿದೆ ಎಂದು ಸಚಿವರು ದೂರಿದರು. ನಾವು ನಮ್ಮ ಕೈಯಲ್ಲಿನ ಸಮಸ್ಯೆಯನ್ನು ಒಪ್ಪಿಕೊಳ್ಳಬೇಕು ಹಾಗೂ ಅದನ್ನು ದೃಢವಾಗಿ ನಿರ್ವಹಿಸಬೇಕು. ಚುನಾಯಿತ ಸರ್ಕಾರದ ಮೇಲೆ ಸಂವಿಧಾನವನ್ನು ಎತ್ತಿ ಹಿಡಿಯುವ ಜವಾಬ್ದಾರಿ ಇದೆ ಹಾಗೂ ಸರ್ಕಾರ ಎಲ್ಲ ನಾಗರಿಕರಿಗೂ ರಕ್ಷಣೆ ನೀಡಬೇಕು.

ಮುಂದಿನ ವರ್ಷದ ಸಂಭ್ರಮಾಚರಣೆ ಎಷ್ಟು ಸುರಕ್ಷಿತ?

ನಮ್ಮ ನಾಯಕತ್ವ ಸೂಕ್ತ ಮಾರ್ಗವೊಂದನ್ನು ಕಂಡುಕೊಂಡು, ಬೆಂಗಳೂರಿನಲ್ಲಿ ಇಂಥ ಘಟನೆಗಳು ಪುನರಾವರ್ತನೆ ಆಗುವುದಿಲ್ಲ ಎಂದು ಖಾತ್ರಿ ನೀಡಬೇಕಿದೆ. ಬೆಂಗಳೂರಿನ ಪೊಲೀಸರು ಲೈಂಗಿಕ ಕಿರುಕುಳ ಪ್ರಕರಣಗಳು ನಡೆಯದಂತೆ ಪ್ರಾಯೋಗಿಕ ಪರಿಹಾರವನ್ನು ಕಂಡುಹಿಡಿಯಬೇಕು. ಎಲ್ಲಕ್ಕಿಂತ ಹೆಚ್ಚಾಗಿ, ಬೆಂಗಳೂರಿನ ನಾಗರಿಕರು ಒಬ್ಬರನ್ನು ಮತ್ತೊಬ್ಬರು ಬೆಂಬಲಿಸಬೇಕು ಹಾಗೂ ಕಾನೂನು ರೂಪಿಸುವುದಷ್ಟೇ ಅಲ್ಲ; ಅದನ್ನು ರಕ್ಷಿಸಲೂ ಬೇಕು ಎಂದು ಜನಪ್ರತಿನಿಧಿಗಳನ್ನು ಒತ್ತಾಯಿಸಬೇಕು.

Post a comment