nbf@namma-bengaluru.org
9591143888

ಅಭಿಯಾನಗಳು

ಬೆಂಗಳೂರಿನ ಸಂಚಾರ ಸಮಸ್ಯೆಗಳು

ಬೆಂಗಳೂರು ತ್ಯಾಜ್ಯ ನಿರ್ವಹಣೆ, ಜನ ಸಂಕಷ್ಟ, ಸಾಯುತ್ತಿರುವ ಕೆರೆಗಳು, ಸಂಕಷ್ಟಕ್ಕೀಡಾಗಿರುವ ಪರಿಸರ, ಅಸುರಕ್ಷಿತ ನೆರೆಹೊರೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಹಲವು ವರ್ಷಗಳಿಂದ ನಡೆದ ಯೋಜನೆರಹಿತ ಅಭಿವೃದ್ಧಿ, ತಾತ್ಕಾಲಿಕ ಹಾಗೂ ಪ್ರತಿಕ್ರಿಯಾತ್ಮಕ ಪರಿಹಾರಗಳು ಸಮಸ್ಯೆಯನ್ನು ಇನ್ನಷ್ಟು ಸಿಕ್ಕಾಗಿಸಿವೆ.

ನಮ್ಮ ಬೆಂಗಳೂರು ಪ್ರತಿಷ್ಠಾನವು #Uಟಿiಣeಜಃeಟಿgಚಿಟuಡಿu,ಬ್ರೇಸ್ ಮತ್ತಿತರ ಸಹಭಾಗಿತ್ವವನ್ನು ಉತ್ತೇಜಿಸುತ್ತಿದ್ದು, ನಗರದಲ್ಲಿ ಈ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಚಲನೆ ಮತ್ತು ಸಾಗಣೆ ಬೆಂಗಳೂರಿಗರು ಎದುರಿಸುತ್ತಿರುವ ಅಂಥ ಒಂದು ಸಮಸ್ಯೆಯಾಗಿದ್ದು, ಜುಲೈ 2017ರಂದು ನಡೆದ ಫಲಿಪ್‍ಕಾರ್ಟ್ ಗ್ರಿಡ್‍ಲಾಕ್ ಹ್ಯಾಕಾಥಾನ್‍ನಲ್ಲಿ ಎನ್‍ಬಿಎಫ್ ಪಾಲುದಾರಿಕೆ ಮಾಡಿಕೊಂಡಿತ್ತು. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗಳಿಗೆ ಕಾರ್ಯಸಾಧುವಾದ ಅನುಷ್ಠಾನಗೊಳಿಸಬಹುದಾದ ಪರಿಹಾರಗಳನ್ನು ಕಂಡುಕೊಳ್ಳಲು, ಸಮುದಾಯ ಹಣ ಕ್ರೋಡೀಕರಿಸಿ ನಡೆಸಿದ ಮೊಟ್ಟ ಮೊದಲ ಉಪಕ್ರಮವಿದು.

ಬೆಂಗಳೂರಿನ ಸಂಚಾರ ಮೂಲಸೌಲಭ್ಯದ ಮೇಲೆ ಯೋಜನೆರಹಿತ ಬೆಳವಣಿಗೆ ಅಪಾರವಾದ ಒತ್ತಡವನ್ನು ಹೇರಿದೆ. ನಮ್ಮ ನಗರಕ್ಕೆ ಇಂದು ಬೇಕಿರುವುದು ಪ್ರಸ್ತುತ ಪರಿಸ್ಥಿತಿಯನ್ನು ಉತ್ತಮಗೊಳಿಸುವುದಲ್ಲದೆ, ಹೆಚ್ಚುತ್ತಲೇ ಇರುವ ಸಮಸ್ಯೆಗೆ ದೀರ್ಘಕಾಲೀನ ಪರಿಹಾರ ನೀಡಬಲ್ಲ ಸಮಗ್ರ ಸಂಚಾರ ಯೋಜನೆ. 

ನಾವು ಎನ್‍ಬಿಎಫ್‍ನಲ್ಲಿ ನಂಬುವುದೇನೆಂದರೆ,

1. ಸಾರ್ವಜನಿಕ ಸಾರಿಗೆ ವ್ಯವಸ್ಥೆಯು ಇನ್ನಷ್ಟು ಪ್ರಯಾಣಿಕರನ್ನು ನಿರ್ವಹಿಸುವಂತೆ ಆಗಬೇಕು. ನಾನಾ ಸಾರಿಗೆ ವ್ಯವಸ್ಥೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಹಾಗೂ ಸಂಖ್ಯೆಯನ್ನು ಹೆಚ್ಚಳಗೊಳಿಸುವ ಮೂಲಕ ಇದನ್ನು ಸಾಧಿಸಬಹುದು

2. ಆದ್ಯತೆ ಮೇರೆಗೆ ಆಗಬೇಕಾದ್ದೇನೆಂದರೆ, ಲಭ್ಯವಿರುವ ನಾನಾ ಸಂಚಾರ ಮಾದರಿಗಳನ್ನು ಉತ್ತಮವಾಗಿ ಸಮಗ್ರಗೊಳಿಸುವ ಮೂಲಕ ವ್ಯವಸ್ಥೆಯ ಒಟ್ಟಾರೆ ಕ್ಷಮತೆಯನ್ನು ಸುಧಾರಿಸಬೇಕು

3.  ರಸ್ತೆಗಳಲ್ಲಿ ದಟ್ಟಣೆಯನ್ನು ನಿವಾರಿಸಲು ಕಾರ್‍ನ್ನು ಹಂಚಿಕೊಂಡು ಪ್ರಯಾಣಿಸುವುದನ್ನು ಉತ್ತೇಜಿಸಿ, ಪ್ರಚಾರ ನೀಡಬೇಕಿದೆ. ಕಾರ್ ಪೂಲಿಂಗ್ ವಾಹನ ದಟ್ಟಣೆಯನ್ನು ಕಡಿಮೆ ಮಾಡುವುದಲ್ಲದೆ, ನಗರದಲ್ಲಿ ಗಾಳಿಯ ಗುಣಮಟ್ಟ ಉತ್ತಮಗೊಳಿಸಲು ನೆರವಾಗುತ್ತದೆ. ಬೆಂಗಳೂರಿಗರು ಅನುಸರಿಸಬಹುದಾದ ಇನ್ನೊಂದು ಮಾರ್ಗವೆಂದರೆ, ಸ್ವಯಂ ಚಾಲನೆಗೊಳ್ಳುವ ಕಾರ್‍ಗಳ ಬಳಕೆ. ಇವು ವಾಹನ ದಟ್ಟಣೆಯನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಚಾಲಕರ ಚಾಲನೆ ವರ್ತನೆಯಿಂದ ಉಂಟಾಗುವ ನಿಲ್ಲಿಸು ಮತ್ತು ಹೊರಡು ಅಲೆಗಳನ್ನು ನಿವಾರಿಸುವ ಮೂಲಕ ದಟ್ಟಣೆಯನ್ನು ಕಡಿಮೆಗೊಳಿಸುತ್ತವೆ.

4. ನಗರಕ್ಕೆ ಅಗತ್ಯವಾದ ವಿಶ್ಲೇಷಣ ಆಧಾರವೊಂದನ್ನು ನಿರ್ಮಿಸಬೇಕು. ಇದು ನಗರ ಯೋಜನೆಗೆ ಒಳಸುರಿಗಳನ್ನು ನೀಡಬಲ್ಲದು. ದೀರ್ಘ ಕಾಲದಲ್ಲಿ ಇದು ಬಹು ಪರಿಸ್ಥಿತಿಗಳ ವಿಶ್ಲೇಷಣೆಗೆ ನೆರವಾಗಲಿದೆ.

ಗ್ರಿಡ್‍ಲಾಕ್ ಹ್ಯಾಕಥಾನ್‍ನ ಮೂವರು ವಿಜೇತರಲ್ಲದೆ ಇನ್ನುಳಿದ ಸ್ಪರ್ಧಾರ್ಥಿಗಳೊಂದಿಗೆ ಎನ್‍ಪಿಎಫ್ ಕಾರ್ಯ ನಿರ್ವಹಿಸಲಿದ್ದು, ಬೆಂಗಳೂರಿನ ಸಂಚಾರ ಸವಾಲುಗಳಿಗೆ ಕಾರ್ಯಸಾಧು ಸುಸ್ಥಿರ ಪರಿಹಾರಗಳನ್ನು ಅಭಿವೃದ್ಧಿ ಪಡಿಸಲು ಕೆಲಸ ಮಾಡಲಿದೆ.

ನಗರವನ್ನು ದಟ್ಟಣೆರಹಿತವಾಗಿಸಲು ನಮ್ಮೊಡನೆ ಕೈ ಜೋಡಿಸಬೇಕು ಹಾಗೂ ಸೂಕ್ತ ಸಲಹೆಗಳನ್ನು ನೀಡಬೇಕು ಎಂದು ನಾಗರಿಕರನ್ನು ಕೋರುತ್ತೇವೆ. ಸಾರಿಗೆ ಚಲನೆಯನನು ಉತ್ತಮಪಡಿಸುವ ಮೂಲಕ ನಾವು ಪ್ರೀತಿಸುವ ಸಗರವನ್ನು  ರಕ್ಷಿಸೋಣ ಹಾಗೂ ಮತ್ತೆ ವಾಪಸ್ ಪಡೆಯಲು ಕೆಲಸ ಮಾಡೋಣ.

ನಮ್ಮ ಸಂಪರ್ಕ: nbf@kannada.namma-bengaluru.org

Post a comment