nbf@namma-bengaluru.org
9591143888

Authored Articles

ಬೆಂಗಳೂರು ಬಾಗಿದೆ, ಗಾಯಗೊಂಡಿದೆ; ಆದರೆ, ಪರಾಭವಗೊಂಡಿಲ್ಲ

ಸಾವಿರಾರು ಕಠಿಣ ಪರಿಶ್ರಮಿ ನಾಗರಿಕರ ಭವಿಷ್ಯವನ್ನು ಡೋಲಾಯಮಾನಗೊಳಿಸಿದ ಭ್ರಷ್ಟ ಅಧಿಕಾರಿಗಳು ಹಾಗೂ ಕಾನೂನು ಉಲ್ಲಂಘಿಸುವ ಬಿಲ್ಡರ್‍ಗಳ ವಿರುದ್ಧ ಬೆಂಗಳೂರು ತನ್ನ ಆಕ್ರೋಶವನ್ನು ದಾಖಲಿಸಿತು.

ವ್ಯಾಪಕ ಭ್ರಷ್ಟಾಚಾರ, ಕಾನೂನಿನ ಉಲ್ಲಂಘನೆ ಹಾಗೂ ದುರಾಡಳಿತವನ್ನು ಬಹುತೇಕ ಭಾರತೀಯರು “ಜೀವನ ವಿಧಾನ’ ಎಂದು ಭಾವಿಸುತ್ತಾರೆ. ಆದರೆ, ಈ ಅಪರಾಧಗಳಿಗೆ “ಕೂಡದು’ ಎಂದರೆ ಎಲ್ಲ ರಾಜ್ಯಗಳು, ನಗರ ಹಾಗೂ ನಾಗರಿಕರಿಗೆ ಲಾಭ ವಾಗುತ್ತದೆ ಎನ್ನುವುದನ್ನು ಪರಿಗಣಿಸುವುದಿಲ್ಲ. ಒಂದು ನಗರ ಮಾತ್ರ ಅನಿಯಂತ್ರಿತ ಭ್ರಷ್ಟಾಚಾರ ಹಾಗೂ ಉತ್ತರದಾಯಿತ್ವದ ಕೊರತೆ ವಿರುದ್ಧ ಸಿಡಿದೆದ್ದಿದೆ-ಅದೇ ನಮ್ಮ ಬೆಂಗಳೂರು.

ಇತ್ತೀಚೆಗೆ ಬಿಪಿಎಂಪಿ ನಡೆಸಿದ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಯಿಂದ ಹಾನಿಗೀಡಾದ ಪ್ರದೇಶಗಳ ಜನರು ನಮ್ಮ ಬೆಂಗಳೂರು ಪ್ರತಿಷ್ಠಾನದ ಜತೆಗೂಡಿ, ಈವರೆಗೆ ಕಾಣದ ಒಗ್ಗಟ್ಟಿನಿಂದ ಪ್ರತಿಭಟಿಸಿದರು. ಇಂಥ ಹಲವಾರು ಯೋಜನೆಗಳಿಗೆ ಅನುಮತಿ ನೀಡಿದ ಭ್ರಷ್ಟ ಅಧಿಕಾರಿಗಳು ಹಾಗೂ ಕುಟಿಲ ಬಿಲ್ಡರ್‍ಗಳ ವಿರುದ್ಧ ದನಿಯೆತ್ತಿದರು. ದೊಡ್ಡಬೊಮ್ಮಸಂದ್ರ, ಯಲಹಂಕ, ಅಟ್ಟೂರು, ರಾಮಚಂದ್ರಪುರ, ತಿಂಡ್ಲು, ತಿರುಮೇನಹಳ್ಳಿ, ಹೆಬ್ಬಾಳ್ ಸರೋವರ್ ಲೇಔಟ್ ಮತ್ತು ಚೊಕ್ಕನಹಳ್ಳಿಯ ಸಾವಿರಾರು ನಾಗರಿಕರು ಎನ್‍ಬಿಎಫ್ ಕೇಂದ್ರಗಳಿಗೆ ಆಗಮಿಸಿ, ನಮ್ಮ ಬೆಂಗಳೂರು ನಾಗರಿಕ ಸಮಿತಿಗೆ ಅಕ್ರಮ ಹಾಗೂ ಉಲ್ಲಂಘನೆ ಕುರಿತು ದೂರು ದಾಖಲಿಸಿದರು.

ವೈಯಕ್ತಿಕ ಹಿತಾಸಕ್ತಿಯೇ ಆದ್ಯತೆಯಾಗುಳ್ಳವರ ಹಿಡಿತದಿಂದ ನಗರವನ್ನು ಬಿಡಿಸಬೇಕು ಎನ್ನುವುದಕ್ಕೆ ಅವರೆಲ್ಲರೂ ಸಂಪೂರ್ಣ ಬೆಂಬಲ ನೀಡಿದರಲ್ಲದೆ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಲಿದ್ದ ಮನವಿಗೆ ಸಹಿ ಹಾಕಿದರು: ಅವರ ಬೇಡಿಕೆಗಳೆಂದರೆ,

  • ಅಕ್ರಮ ಕಟ್ಟಡಗಳನ್ನು ಉರುಳಿಸುವಾಗ ತಾರತಮ್ಯ ಬೇಡ: ಶ್ರೀಮಂತರ ಹಾಗೂ ಪ್ರಭಾವಿಗಳ ಕಟ್ಟಡಗಳನ್ನೂ ತೆರವುಗೊಳಿಸಿ
  • ಬಿಬಿಎಂಪಿಯಿಂದ ಅನುಮತಿ ಪಡೆದು ಮನೆ ಕಟ್ಟಿಕೊಂಡವರಿಗೆ ಮಾನವೀಯ ಹಿನ್ನೆಲೆಯಲ್ಲಿ ಪರಿಹಾರ ನೀಡುವುದು
  • ತಪ್ಪು ಮಾಡಿದ ಎಲ್ಲ ಸರ್ಕಾರಿ ನೌಕರರು ಹಾಗೂ ಲೋಪವೆಸಗಿದ ಬಿಲ್ಡರ್‍ಗಳಿಗೆ ಅವರು ಉಲ್ಲಂಘಿಸಿದ ಎಲ್ಲ ಕಾನೂನುಗಳ ಅಡಿ ಶಿಕ್ಷೆ ವಿಧಿಸಿ.

ನಗರಾಡಳಿತದ ವಿರುದ್ಧ ಕೆಂಡ ಕಾರಿದ ದೊಡ್ಡಬೊಮ್ಮಸಂದ್ರದ ನಾಗರಿಕರೊಬ್ಬರು,” ಬಿಬಿಎಂಪಿ ಯಾವುದೇ ಮುನ್ಸೂಚನೆ ನೀಡದೆ ನಮ್ಮ ಮನೆಗಳನ್ನು ಉರುಳಿಸಿದೆ. ನಮ್ಮಲ್ಲಿ ಕೆಲವರು ಇಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದೇವೆ ಹಾಗೂ ಇದು ನಮಗೆ ಪಿತ್ರಾರ್ಜಿತವಾಗಿ ಬಂದ ಆಸ್ತಿ. ಇಲ್ಲಿ ರಾಜಕಾಲುವೆ ಇಲ್ಲ. ಹೀಗಿದ್ದರೂ ಕೂಡ ಅಧಿಕಾರಿಗಳು ಕಟ್ಟಡ ಉರುಳಿಸಿ, ನಮ್ಮ ಇಡೀ ಜೀವನವನ್ನೇ ಹಾಳುಗೆಡವಿದ್ದಾರೆ,’.”

ಒಂದೇ ದಿನ ಐನೂರಕ್ಕೂ ಹೆಚ್ಚು ಮಂದಿ ಮನವಿಗೆ ಸಹಿ ಹಾಕಿದ್ದು, ಭ್ರಷ್ಟಾಚಾರ ಹಾಗೂ ಅಕ್ರಮ ಚಟುವಟಿಕೆಗಳಿಗೆ ಅಂತ್ಯ ಹಾಡಿ ಎಂದು ಸಾಮೂಹಿಕವಾಗಿ ದನಿಯೆತ್ತಿದ್ದಾರೆ. ಇದು ಬೆಂಗಳೂರು ಜೀವಂತವಾಗಿ ಹೂತುಹೋಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಲಿ ಎಂಬ ಒತ್ತಾಯಕ್ಕೆ ಸಾಕ್ಷಿ! ಭ್ರಷ್ಟಾಚಾರವು ಅಭಿವೃದ್ಧಿಯ ನಿಜವಾದ ಶತ್ರು ಹಾಗೂ ತಮ್ಮ ನಗರ ಜಾಗತಿಕ ಮಟ್ಟದಲ್ಲಿ ಸ್ಥಾನ ಗಳಿಸಬೇಕು ಎಂದಾದಲ್ಲಿ ಬೆಂಗಳೂರಿಗರು ಸರ್ಕಾರದಿಂದ ನ್ಯಾಯ ಮತ್ತು ಉತ್ತರದಾಯಿತ್ವವನ್ನು ಹೋರಾಡಿ ಪಡೆದುಕೊಳ್ಳಬೇಕಿದೆ.

(ಒಂದು ವೇಳೆ ನೀವು ಕಟ್ಟಡ ತೆರವು ಕಾರ್ಯಾಚರಣೆಯ ಸಂತ್ರಸ್ತ ಇಲ್ಲವೇ ಭ್ರಷ್ಟ ಅಧಿಕಾರಿಗಳಿಂದ ಪೀಡಿತರಾಗಿದ್ದರೆ, ಸಂಬಂಧಿಸಿದ ದಾಖಲೆಗಳನ್ನು ನಮ್ಮ ಬೆಂಗಳೂರು ನಾಗರಿಕ ಸಮಿತಿಯೊಂದಿಗೆ ಹಂಚಿಕೊಳ್ಳಿ: nbcc@kannada.namma-bengaluru.org. ನಿಮ್ಮ ಗುರುತನ್ನು ಗೋಪ್ಯವಾಗಿಡಲಾಗುವುದು.)

Post a comment