ಬೆಂಗಳೂರು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ-ನಾಗರಿಕರಿಗೆ ಜೀವಿಸಲು ಆಗದ ನಗರ, ಆರೋಗ್ಯ, ಸಂಚಾರ ಹಾಗೂ ಪರಿಸರವನ್ನುಸ್ಥಿತ್ಯಂತರಗೊಳಿಸುವ ಸಂಕಷ್ಟ ಎದುರಾಗಿದೆ. ಪೂರ್ವದ ಸಿಲಿಕಾನ್ ಕಣಿವೆ ಎಂದೇ ಹೆಸರಾದ ಬೆಂಗಳೂರು ಕಳೆದ ನಾಲ್ಕು ದಶಕದಲ್ಲಿಊಹಿಸಲಾಗದಂತೆ ಬೆಳೆದಿದೆ. ಆದರೆ, ನಗರದ ಬೆಳವಣಿಗೆ ಜೊತೆಗೆ ಸುಸ್ಥಿರ ಬದುಕಿಗೆ ಬೇಕಾದ ಸೌಕರ್ಯಗಳು, ಪ್ರಮುಖ ಸಾರ್ವಜನಿಕ ಸೇವೆಗಳಸಾಮಥ್ರ್ಯ ಸೃಷ್ಟಿ ಇಲ್ಲವೇ ಸೂಕ್ತ ಯೋಜನೆಗಳು ರೂಪುಗೊಳ್ಳಲಿಲ್ಲ. ಬಳಕೆಯಿಂದ ತ್ಯಜಿಸುವವರೆಗೆ ನೀರು/ತ್ಯಾಜ್ಯದ ನಿರ್ವಹಣೆ, ಆರೋಗ್ಯ, ವಿದ್ಯುತ್, ಸಂಚಾರ ಹಾಗೂ ಬಡಜನರಿಗೆ ನೆರಳು ಇತ್ಯಾದಿ…...
ಬೆಂಗಳೂರಿನ ಉಳಿವಿಗೆ ಸಾಮುದಾಯಿಕ ವಿವೇಕವೇ ಕೀಲಿಕೈ
ಇಂದು ಜೂನ್ 5, ವಿಶ್ವ ಪರಿಸರ ದಿನ. ಇಂದು ನಮ್ಮನ್ನು ನಾವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸೂಕ್ತ: ಬೆಂಗಳೂರಿನಲ್ಲಿ ನಮ್ಮ ಅಸ್ಥಿತ್ವವನ್ನುಬೆಂಬಲಿಸುವ ಪರಿಸರ ಕುರಿತು ನಮ್ಮ ಕಣ್ಣುಗಳನ್ನು ಕೋವಿಡ್ ಲಾಕ್‍ಡೌನ್ ತೆರೆಸಿದೆಯೇ? ನಾವು ಕಲಿತದ್ದಾದರೂ ಏನು? ಕಲಿತಿದ್ದರ ಕುರಿತುಏನನ್ನಾದರೂ ಮಾಡಲು ಸಿದ್ಧರಿದ್ದೇವೆಯೇ? ನಮ್ಮ ಪ್ರಕಾರ, ಬೆಂಗಳೂರಿನವರಿಗೆ ಕೋವಿಡ್ ಲಾಕ್‍ಡೌನ್ ಒಂದು ರೀತಿಯ ಜೀವನ ಶಿಕ್ಷಣದಂತೆ ಪರಿಣಮಿಸಿತು. ಅದು ಅಪಾರ ಸಂಕಷ್ಟ ಹಾಗೂನೋವಿಗೆ ಕಾರಣವಾಗಿದೆ. ಆದರೆ, ಬೆಂಗಳೂರಿನ ಪರಿಸರದ ಆರೋಗ್ಯಕ್ಕೆ ಹಲವು…...
ಬೆಂಗಳೂರಿನ ಉಳಿವಿಗೆ ಸಾಮೂಹಿಕ ಜ್ಞಾನ ಪ್ರಮುಖವಾದುದು
ಇಂದು, ಜೂನ್ 5 ರಂದು ವಿಶ್ವ ಪರಿಸರ ದಿನ, ನಮ್ಮಲ್ಲಿ ಕೆಲವು ಪ್ರಶ್ನೆಗಳನ್ನು ಇಡುವುದು ಸೂಕ್ತವಾಗಿದೆ ಕೋವಿಡ್ ಲಾಕ್‌ಡೌನ್ ಬೆಂಗಳೂರಿನಲ್ಲಿ ನಮ್ಮ ಅಸ್ತಿತ್ವವನ್ನು ಗುರುತಿಸಿ ಪರಿಸರಕ್ಕಾಗಿ ನಮ್ಮ ಕಣ್ಣು ತೆರೆಯಲು ಸಹಾಯ ಮಾಡಿದೆ. ನಾವು ಏನು ಕಲಿತಿದ್ದೇವೆ? ನಾವು ಕಲಿತ ವಿಷಯಗಳ ಬಗ್ಗೆ ಏನಾದರೂ ಮಾಡಲು ನಾವು ಬಯಸುತ್ತೇವೆಯೇ? ನಮಗೆ, ಬೆಂಗಳೂರು ಕೋವಿಡ್ ಲಾಕ್‌ಡೌನ್ ನಿಂದಾಗಿ ನಮ್ಮ ಜೀವನಕ್ಕೆ ಒಂದು ಪಾಠವಾದಂತಾಗಿದೆ. ಇದು ನಮಗೆ ಅಪಾರ ಕಷ್ಟಗಳನ್ನು ಮತ್ತು ಸಂಕಟಗಳನ್ನುಂಟುಮಾಡಿದೆ.…...
2017 ಹೊಸ ವರ್ಷದ ಮುನ್ನಾದಿನ: ನಮ್ಮ ಬೆಂಗಳೂರು ಎಷ್ಟು ಸುರಕ್ಷಿತ?
ನಮ್ಮ ನಗರಕ್ಕೆ ಬೇಕಿರುವುದು ಏನೆಂದರೆ, ಮಹಿಳೆಯರ ಜೊತೆಗೆ ಐಕಮತ್ಯ ಹೊಂದಿರುವ ಪುರುಷರು, ಎಲ್ಲವನ್ನು ಸಹಿಸಿಕೊಂಡು ಮೌನವಾಗಿರದ ಮಹಿಳೆಯರು ಹಾಗೂ ಈ ಜೀವಂತ ಸಮಸ್ಯೆಗೆ ಪ್ರತಿಕ್ರಿಯಿಸಲು ಸನ್ನದ್ಧವಾದ ರಾಜ್ಯದ ರಕ್ಷಣಾ ವ್ಯವಸ್ಥೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಬಲಾತ್ಕಾರ ಪ್ರಕರಣಗಳು ಮಹಿಳೆಯರು ಮಾತ್ರವಲ್ಲ, ಎಲ್ಲ ನಾಗರಿಕರಿಗೂ ರಕ್ಷಣೆ ನೀಡುವ ಸಾಮಥ್ರ್ಯವನ್ನು ರಾಜ್ಯ ಸರ್ಕಾರ ಹಾಗೂ ಪೊಲೀಸ್ ವ್ಯವಸ್ಥೆ ಹೊಂದಿದೆಯೇ ಎನ್ನುವ ಪ್ರಶ್ನೆಯನ್ನು ಕೇಳುವಂತೆ ಮಾಡಿದೆ. ಸಾವಿರಾರು ನಾಗರಿಕರು ಶನಿವಾರ ಬ್ರಿಗೇಡ್ ರಸ್ತೆ(ಹೊಸ ವರ್ಷದ…...
ತಾತ್ಕಾಲಿಕ ಯೋಜನೆಗಳು ಬೆಂಗಳೂರನ್ನು ಹಾಳುಗೆಡವಿದೆ
ಬೆಂಗಳೂರು ಅಭೂತಪೂರ್ವ ಬೆಳವಣಿಗೆ ಹಾಗೂ ಅನುಷ್ಠಾನಗೊಂಡ ದುರ್ಬಲ ಯೋಜನೆಗಳಿಗೆ ದಂಡ ತೆರುತ್ತಿದೆ. ನಾನಾ ಏಜೆನ್ಸಿಗಳು ಮನಬಂದಂತೆ ರೂಪಿಸಿದ ತಾತ್ಕಾಲಿಕ ಮ್ಯಾಜಿಕ್ ಬಾಕ್ಸ್‍ಗಳು, ಕೆಳ ಸೇತುವೆಗಳು ಹಾಗೂ ಮೇಲ್ಸೇತುವೆಗಳ ನಿರ್ಮಾಣದಿಂದ ಸಾರ್ವಜನಿಕ ಹಣ ವ್ಯರ್ಥವಾಗಿದೆ. ಮತ್ತು ಧಾಂಧೂಂ ಎಂದು ಆರಂಭವಾದ ಹಲವು ಭಾರಿ ಯೋಜನೆಗಳಿಂದ ಅಂತಿಮವಾಗಿ ಸಂಚಾರ ದಟ್ಟಣೆ ಒಂದು ಕಡೆಯಿಂದ ಇನ್ನೊಂದು ಸ್ಥಳಕ್ಕೆ ವರ್ಗಾವಣೆಯಾಗಿದೆ. ಇಡೀ ಬೆಂಗಳೂರು ಮೆಟ್ರೋಪಾಲಿಟನ್ ಪ್ರದೇಶಕ್ಕೆ ಮುಂದಿನ 25 ವರ್ಷಗಳ ಅವಧಿಗೆ ಸೂಕ್ತವಾದ ಕಾರ್ಯಯೋಜನೆಗಳು, ಕಾರ್ಯನೀತಿಗಳು…...
ಬೆಂಗಳೂರು ಬಾಗಿದೆ, ಗಾಯಗೊಂಡಿದೆ; ಆದರೆ, ಪರಾಭವಗೊಂಡಿಲ್ಲ
ಸಾವಿರಾರು ಕಠಿಣ ಪರಿಶ್ರಮಿ ನಾಗರಿಕರ ಭವಿಷ್ಯವನ್ನು ಡೋಲಾಯಮಾನಗೊಳಿಸಿದ ಭ್ರಷ್ಟ ಅಧಿಕಾರಿಗಳು ಹಾಗೂ ಕಾನೂನು ಉಲ್ಲಂಘಿಸುವ ಬಿಲ್ಡರ್‍ಗಳ ವಿರುದ್ಧ ಬೆಂಗಳೂರು ತನ್ನ ಆಕ್ರೋಶವನ್ನು ದಾಖಲಿಸಿತು. ವ್ಯಾಪಕ ಭ್ರಷ್ಟಾಚಾರ, ಕಾನೂನಿನ ಉಲ್ಲಂಘನೆ ಹಾಗೂ ದುರಾಡಳಿತವನ್ನು ಬಹುತೇಕ ಭಾರತೀಯರು “ಜೀವನ ವಿಧಾನ’ ಎಂದು ಭಾವಿಸುತ್ತಾರೆ. ಆದರೆ, ಈ ಅಪರಾಧಗಳಿಗೆ “ಕೂಡದು’ ಎಂದರೆ ಎಲ್ಲ ರಾಜ್ಯಗಳು, ನಗರ ಹಾಗೂ ನಾಗರಿಕರಿಗೆ ಲಾಭ ವಾಗುತ್ತದೆ ಎನ್ನುವುದನ್ನು ಪರಿಗಣಿಸುವುದಿಲ್ಲ. ಒಂದು ನಗರ ಮಾತ್ರ ಅನಿಯಂತ್ರಿತ ಭ್ರಷ್ಟಾಚಾರ ಹಾಗೂ ಉತ್ತರದಾಯಿತ್ವದ…...
ಮನೆ ಮಾಲೀಕರಿಗೆ ಸಂಕಟ: ಅಧಿಕಾರಿಗಳು-ಬಿಲ್ಡರ್‍ಗಳಿಗೆ ಯಾವುದೇ ಶಿಕ್ಷೆಯಿಲ್ಲ
ಬಿಬಿಎಂಪಿ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುತ್ತಿರುವ ಹೊತ್ತಿನಲ್ಲೇ ಇನ್ನೊಂದು ಮುಖ್ಯ ಕೆಲಸವನ್ನು ಮರೆಯಿತು: ಇಂಥ ಕಟ್ಟಡಗಳು ತಲೆಯೆತ್ತಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವುದು! ಅಕ್ರಮ ಕಟ್ಟಡಗಳನ್ನು ಗುರುತಿಸಿದ ಬಿಬಿಎಂಪಿಗೆ ಅವುಗಳ ನಿರ್ಮಾಣಕ್ಕೆ ಅನುಮತಿ ನೀಡಿದ ಅಧಿಕಾರಿಗಳನ್ನು ಪತ್ತೆ ಹಚ್ಚುವುದು ಕಷ್ಟವಾಗುತ್ತಿರಲಿಲ್ಲ. ಸರ್ಕಾರದ ಏಜೆನ್ಸಿಗಳು ಕಟ್ಟಡದ ಯೋಜನೆ ಅಂಗೀಕಾರ, ಆರಂಭದ ಪ್ರಮಾಣಪತ್ರ, ಅಂತ್ಯಗೊಂಡ ಬಳಿಕ ನೀಡುವ ಪ್ರಮಾಣಪತ್ರ ಮತ್ತು ಖಾತೆಯನ್ನು ಕಟ್ಟಡ ನಿರ್ಮಾಣದ ನಾನಾ ಹಂತದಲ್ಲಿ ನೀಡಿರುತ್ತವೆ. ಇಷ್ಟೆಲ್ಲ ಅನುಮತಿ ನೀಡಿಕೆಗಳ…...
ಪರ್ವತೋಪಾದಿಯಲ್ಲಿ ತುಂಬಿರುವ ತ್ಯಾಜ್ಯದ ನಿವಾರಣೆ ಕಷ್ಟದ ಕೆಲಸ
ನ್ಯೂಯಾರ್ಕ್ ಟೈಮ್ಸ್‍ನಲ್ಲಿ “ಇಂಡಿಯಾಸ್ ಪ್ಲೇಗ್, ತ್ರ್ಯಾಷ್, ಡ್ರೌನ್ಸ್ ಇಟ್ಸ್ ಗಾರ್ಡನ್ ಸಿಟಿ ಡ್ಯೂರಿಂಗ್ ಸ್ಟ್ರೈಕ್’ ಲೇಖನ ಪ್ರಕಟಗೊಂಡು, “ಉದ್ಯಾನಗಳ ನಗರ’ ಜಾಗತಿಕ ಮಟ್ಟದಲ್ಲಿ “ಕಸದ ನಗರ’ವಾಗಿ ಪ್ರಖ್ಯಾತಗೊಂಡು ನಾಲ್ಕು ವರ್ಷ ಕಳೆದಿದೆ. ಭಾರತದ ಸಿಲಿಕಾನ್ ಕಣಿವೆಯೆಂದು ಹೆಸರಾದ ಮತ್ತು ಜಗತ್ತಿನ ಅತ್ಯುತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಕಂಪನಿಗಳಿರುವ ನಗರಕ್ಕೆ ತನ್ನ ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾಲ್ಕು ವರ್ಷ ತಾರ್ಕಿಕವಾಗಿ ಸಾಕು. ಸರ್ಕಾರದ ಸಂಸ್ಥೆಯೊಂದು, ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ), ಕಳೆದ ಬುಧವಾಗ…...