nbf@namma-bengaluru.org
9591143888

Authored Articles

ಪರ್ವತೋಪಾದಿಯಲ್ಲಿ ತುಂಬಿರುವ ತ್ಯಾಜ್ಯದ ನಿವಾರಣೆ ಕಷ್ಟದ ಕೆಲಸ

ನ್ಯೂಯಾರ್ಕ್ ಟೈಮ್ಸ್‍ನಲ್ಲಿ “ಇಂಡಿಯಾಸ್ ಪ್ಲೇಗ್, ತ್ರ್ಯಾಷ್, ಡ್ರೌನ್ಸ್ ಇಟ್ಸ್ ಗಾರ್ಡನ್ ಸಿಟಿ ಡ್ಯೂರಿಂಗ್ ಸ್ಟ್ರೈಕ್’ ಲೇಖನ ಪ್ರಕಟಗೊಂಡು, “ಉದ್ಯಾನಗಳ ನಗರ’ ಜಾಗತಿಕ ಮಟ್ಟದಲ್ಲಿ “ಕಸದ ನಗರ’ವಾಗಿ ಪ್ರಖ್ಯಾತಗೊಂಡು ನಾಲ್ಕು ವರ್ಷ ಕಳೆದಿದೆ.

ಭಾರತದ ಸಿಲಿಕಾನ್ ಕಣಿವೆಯೆಂದು ಹೆಸರಾದ ಮತ್ತು ಜಗತ್ತಿನ ಅತ್ಯುತ್ತಮವಾಗಿ ನಿರ್ವಹಿಸಲ್ಪಡುತ್ತಿರುವ ಕಂಪನಿಗಳಿರುವ ನಗರಕ್ಕೆ ತನ್ನ ಸಾರ್ವಜನಿಕ ಆರೋಗ್ಯ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾಲ್ಕು ವರ್ಷ ತಾರ್ಕಿಕವಾಗಿ ಸಾಕು. ಸರ್ಕಾರದ ಸಂಸ್ಥೆಯೊಂದು, ಭಾರತೀಯ ಬಾಹ್ಯಾಕಾಶ ಸಂಶೋಧನೆ ಸಂಸ್ಥೆ(ಇಸ್ರೋ), ಕಳೆದ ಬುಧವಾಗ ಒಮ್ಮೆಲೆ 20 ಉಪಗ್ರಹಗಳನ್ನು ಹಾರಿಸಿದ್ದರೆ, ಇನ್ನೊಂದು ಸಂಸ್ಥೆ ಬಿಬಿಎಂಪಿ, ತಡರಾತ್ರಿಯಲ್ಲಿ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡುವ ಮೂಲಕ ಬೆಂಗಳೂರಿಗರನ್ನು ತಲ್ಲಣಗೊಳಿಸಿತು.

ಅಧಿಕಾರಶಾಹಿಯಲ್ಲಿ ವರ್ಗಾವಣೆ ಪ್ರತಿನಿತ್ಯದ ವ್ಯವಹಾರವಾದರೂ, ಅಧಿಕಾರಿಯ ವರ್ಗಾವಣೆಯಿಂದ ಸಿಟ್ಟಿಗೆದ್ದ ಜನರು ಶನಿವಾರ ಸಂಜೆ ಆರಂಭಿಸಿದ ಆನ್‍ಲೈನ್ ಪ್ರತಿಭಟನೆಗೆ ರಾತ್ರಿಯೊಳಗೆ 2,400 ಮಂದಿ ಸಹಿ ಹಾಕಿದ್ದರು. ಭಾನುವಾರ ಎರಡು ಕಡೆ ಪ್ರತಿಭಟನೆಗಳು ನಡೆದು, ಅವುಗಳಲ್ಲಿ ನೂರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ಬಿಬಿಎಂಪಿಯ ಹಲವು ಅಧಿಕಾರಿಗಳು ನಾಗರಿಕ ವ್ಯವಸ್ಥೆಗಳ ನಿರ್ವಹಣೆಯಲ್ಲಿ ವಿಫಲರಾಗಿ ಜನರ ಆಕ್ರೋಶಕ್ಕೆ ಸಿಲುಕುತ್ತಾರಾದರೂ, ಘನ ತ್ಯಾಜ್ಯ ನಿರ್ವಹಣೆ ವಿಶೇಷ ಆಯುಕ್ತರಾದ ಸುಬೋಧ್ ಯಾದವ್, ಸಮುದಾಯದ ಪಾಲ್ಗೊಳ್ಳುವಿಕೆ ಮೂಲಕ ವ್ಯವಸ್ಥೆ ಹಾಗೂ ಪ್ರಕ್ರಿಯೆಗಳನ್ನು ಉತ್ತಮಗೊಳಿಸಲು ಕಳೆದ ಎಂಟು ತಿಂಗಳಿನಲ್ಲಿ ನಡೆಸಿದ ಕೆಲಸಗಳಿಂದ ಸಂಬಂಧಿಸಿದ ಕಾರ್ಯಕರ್ತರು, ತ್ಯಾಜ್ಯ ನಿರ್ವಹಣೆ ಪರಿಣತರು ಹಾಗೂ ವಸತಿಗರ ಕಲ್ಯಾಣ ಸಂಘಟನೆಗಳ ವಿಶ್ವಾಸಕ್ಕೆ ಪಾತ್ರರಾಗಿದ್ದರು. ಹಲವರ ಪ್ರಕಾರ, ವರ್ಗಾವಣೆಯಿಂದ ಅವರು ಪ್ರಾರಂಭಿಸಿದ ಎಲ್ಲ ಸುಧಾರಣೆಗಳು ವ್ಯರ್ಥವಾಗಲಿವೆ.

ಬೆಂಗಳೂರಿನ ತ್ಯಾಜ್ಯದ ಸಮಸ್ಯೆಯನ್ನು ಪರಿಹರಿಸುವ ದುರ್ಬರ ಕೆಲಸಕ್ಕೆ ಕನಿಷ್ಠ ಮೂರು ವರ್ಷ ಅವಧಿಯ ಶಿಸ್ತಿನ ಹಾಗೂ ಕ್ರಮಬದ್ಧ ಕ್ರಿಯಾಯೋಜನೆಯ ಅಗತ್ಯವಿದೆ. ಮೊದಲಿಗೆ, ನಗರದಲ್ಲಿ ಪ್ರತಿ ದಿನ ಎಷ್ಟು ಪ್ರಮಾಣದ ತ್ಯಾಜ್ಯ ಸೃಷ್ಟಿಯಾಗುತ್ತದೆ ಎನ್ನುವ ಮೂಲಭೂತ ಮಾಹಿತಿ ಲಭ್ಯವಿಲ್ಲ. ನಗರ ನಿರ್ವಹಣೆಯ ಉಸ್ತುವಾರಿ ವಹಿಸಿದ್ದ ಹಿರಿಯ ಅಧಿಕಾರಿಗಳು ಕೂಡ ದಿನವೊಂದಕ್ಕೆ 3,500-4,000 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎನ್ನುವ ಅಂದಾಜನ್ನು ನಂಬುವುದಿಲ್ಲ. ವಾರ್ಡ್ ಹಂತದಲ್ಲಿ ಪ್ರತಿ ದಿನ ಉತ್ಪತ್ತಿಯಾಗುವ ತ್ಯಾಜ್ಯದ ದೈನಂದಿನ ಡ್ಯಾಶ್‍ಬೋರ್ಡ್ ಮೊದಲ ಹೆಜ್ಜೆ.

ಹೊರಗುತ್ತಿಗೆ ಈಗ ಸಾಮಾನ್ಯಗಿದ್ದರೂ, ಇತ್ತೀಚೆಗೆ ಕರೆಯಲಾದ ಟೆಂಡರ್‍ಗಳ ಹಿನ್ನೆಲೆಯಲ್ಲಿ ಗುತ್ತಿಗೆದಾರರಿಂದ ಎದುರಾಗಬಹುದಾದ ಪ್ರತಿರೋಧವನ್ನು ಗಮನದಲ್ಲಿರಿಸಿಕೊಂಡು, ಅಗತ್ಯವಿರುವಷ್ಟು ಮಾನವ ಸಂಪನ್ಮೂಲ ಹಾಗೂ ಯಂತ್ರಗಳನ್ನು ಸಿದ್ಧ ಮಾಡಿಟ್ಟುಕೊಂಡಿರಬೇಕಾಗುತ್ತದೆ. ಬಿಬಿಎಂಪಿಯ 74 ನೇ ತಿದ್ದುಪಡಿ ಕಡ್ಡಾಯಗೊಳಿಸಿರುವಂತೆ ವಾರ್ಡ್ ಸಮಿತಿಗಳನ್ನು ರಚಿಸಬೇಕು ಮತ್ತು ಗುತ್ತಿಗೆದಾರರು ಕರಾರಿನ ಅಂಶಗಳನ್ನು ಉಲ್ಲಂಘಿಸುತ್ತಾರೆಯೇ ಎಂಬುದರ ಮೇಲುಸ್ತುವಾರಿಗೆ ಸಮಿತಿಗಳನ್ನು ಬಳಸಿಕೊಳ್ಳಬೇಕು, ಒಣ ಹಾಗೂ ಹಸಿ ತ್ಯಾಜ್ಯವನ್ನು ಬೇರ್ಪಡಿಸುವಿಕೆ, ತ್ಯಾಜ್ಯದ ಸೃಷ್ಟಿ ಕಡಿಮೆಗೊಳಿಸುವಿಕೆ, ಒಣ ಕಸವನ್ನು ಎಷ್ಟು ಸಾಧ್ಯವೋ ಅಷ್ಟು ಮರುಬಳಕೆ ಮಾಡುವುದು ಮತ್ತು ಹಸಿ ಕಸವನ್ನು ಗೊಬ್ಬರವಾಗಿ ಮಾರ್ಪಡಿಸುವುದಾಗಿ ಶಪಥ ತೊಡಬೇಕು. ತ್ಯಾಜ್ಯದ ಅವೈಜ್ಞಾನಿಕ ವಿಲೇವಾರಿಯನ್ನು ನಿಲ್ಲಿಸಬೇಕು. ನಿಷ್ಕ್ರಿಯ ವಸ್ತುಗಳು ಮಾತ್ರ ಭೂಭರ್ತಿ ಸ್ಥಳಕ್ಕೆ ಹೋಗಬೇಕು. ತ್ಯಾಜ್ಯದ ನಿರ್ವಹಣೆ ವೇಳೆ ಹಲವು ಪರೀಕ್ಷೆ, ಅಡೆತಡೆ ಮೂಲಕ ವ್ಯವಸ್ಥೆಯನ್ನು ಪಾರದರ್ಶಕವಾಗಿ ನಿರ್ವಹಿಸಬೇಕು.

ಬಿಬಿಎಂಪಿ ತ್ಯಾಜ್ಯ ನಿರ್ವಹಣೆ ಎನ್ನುವುದು ಸಾಗಣೆಗೆ ಸಂಬಂಧಿಸಿದ ಸಮಸ್ಯೆ ಎನ್ನುವ ಮನಸ್ಥಿತಿಯನ್ನು ಬಿಟ್ಟು, ಜವಾಬ್ದಾರಿಯುತ ನಿರ್ವಹಣೆಗೆ ಎಲ್ಲರನ್ನೂ ಒಳಗೊಂಡ ಪರಿಸರವನ್ನು ನಿರ್ವಹಿಸದಿದ್ದರೆ, ಇದು ಆಗದ ಕೆಲಸವಾಗೇ ಉಳಿಯಲಿದೆ.

Post a comment