nbf@namma-bengaluru.org
9591143888

Authored Articles

ನಮ್ಮ ಬೆಂಗಳೂರು ಫೌಂಡೇಷನ್‍ನ ಜನರಲ್ ಮ್ಯಾನೇಜರ್ ಹರೀಶ್ ಕುಮಾರ್ ಅವರ ಮಾತು:

ಬೆಂಗಳೂರು ಗಂಭೀರ ಸಮಸ್ಯೆಯನ್ನು ಎದುರಿಸುತ್ತಿದೆ-ನಾಗರಿಕರಿಗೆ ಜೀವಿಸಲು ಆಗದ ನಗರ, ಆರೋಗ್ಯ, ಸಂಚಾರ ಹಾಗೂ ಪರಿಸರವನ್ನುಸ್ಥಿತ್ಯಂತರಗೊಳಿಸುವ ಸಂಕಷ್ಟ ಎದುರಾಗಿದೆ. ಪೂರ್ವದ ಸಿಲಿಕಾನ್ ಕಣಿವೆ ಎಂದೇ ಹೆಸರಾದ ಬೆಂಗಳೂರು ಕಳೆದ ನಾಲ್ಕು ದಶಕದಲ್ಲಿಊಹಿಸಲಾಗದಂತೆ ಬೆಳೆದಿದೆ. ಆದರೆ, ನಗರದ ಬೆಳವಣಿಗೆ ಜೊತೆಗೆ ಸುಸ್ಥಿರ ಬದುಕಿಗೆ ಬೇಕಾದ ಸೌಕರ್ಯಗಳು, ಪ್ರಮುಖ ಸಾರ್ವಜನಿಕ ಸೇವೆಗಳಸಾಮಥ್ರ್ಯ ಸೃಷ್ಟಿ ಇಲ್ಲವೇ ಸೂಕ್ತ ಯೋಜನೆಗಳು ರೂಪುಗೊಳ್ಳಲಿಲ್ಲ. ಬಳಕೆಯಿಂದ ತ್ಯಜಿಸುವವರೆಗೆ ನೀರು/ತ್ಯಾಜ್ಯದ ನಿರ್ವಹಣೆ, ಆರೋಗ್ಯ, ವಿದ್ಯುತ್, ಸಂಚಾರ ಹಾಗೂ ಬಡಜನರಿಗೆ ನೆರಳು ಇತ್ಯಾದಿ ಪೂರಕವಾಗಿ ಬೆಳೆಯಲಿಲ್ಲ. 

ನಮ್ಮ ಬೆಂಗಳೂರಿನ ಅತಿರೇಕದ ದುರ್ಬಳಕೆಗೆ ಕೆರೆಗಳ ಹತ್ಯೆ ಒಂದು ಅತ್ಯುತ್ತಮ ಉದಾಹರಣೆ. ನಗರ ಎದುರಿಸುತ್ತಿರುವ ನಿಜವಾದ ಸವಾಲುಗಳನ್ನುಎದುರಿಸಲು ಸರ್ಕಾರ, ನಾಗರಿಕರು ಹಾಗೂ ನಾಗರಿಕ ಸಂಸ್ಥೆಗಳು ಒಟ್ಟಾದರೆ ಮಾತ್ರ ಸಾಧ್ಯವಿದೆ. ಮುಂದಿನ ಪೀಳಿಗೆಯ ಒಳಿತಿಗೆ ನಿರ್ಲಕ್ಷ್ಯ, ಭ್ರಷ್ಟಾಚಾರ ಹಾಗೂ ಯೋಜನಾರಹಿತ ಬೆಳವಣಿಗೆ ಪ್ರವೃತ್ತಿಯನ್ನು ತಿರುಗಿಸಬೇಕಿದೆ.

ನಮ್ಮ ಬೆಂಗಳೂರು ಪ್ರತಿಷ್ಠಾನ ಬೆಂಗಳೂರಿನ ನಾಗರಿಕರ ಧ್ವನಿಯನ್ನು ಪ್ರತಿನಿಧಿಸುವ ಗುರಿಯುಳ್ಳ ಸಂಘಟನೆ. ನಗರವನ್ನು ಉತ್ತಮಗೊಳಿಸಲುಹಾಗೂ ನಗರದ ಒಳಿತಿಗೆ ನಾಗರಿಕರು ಜವಾಬ್ದಾರಿಯಿಂದ ವರ್ತಿಸುವಂತೆ ಹಾಗೂ ಸಾಮೂಹಿವಾಗಿ ಕೆಲಸ ಮಾಡು ವುದನ್ನು ನಾವುಪ್ರೋತ್ಸಾಹಿಸುತ್ತೇವೆ. ಎನ್‍ಬಿಎಫ್ ಹಲವು ಸಾರ್ವಜನಿಕ ಮತ್ತು ಆನ್‍ಲೈನ್(ಇತ್ತೀಚೆಗೆ) ಆಂದೋಲನಗಳನ್ನು ಹಮ್ಮಿಕೊಂಡಿದೆ ಮತ್ತು ಪರಿಸರಸಂರಕ್ಷಣೆಗೆ ಸಂಬಂಧಿಸಿದಂತೆ ಹಲವು ಆರ್‍ಟಿಐ ಮತ್ತು ಪಿಐಎಲ್‍ಗಳನ್ನು ಹೂಡಿದೆ.

ವಿಶ್ವ ಪರಿಸರ ದಿನವಾದ ಇಂದು, ನಮ್ಮ ಬೆಂಗಳೂರನ್ನು ಉಳಿಸಲು ಬೆಂಗಳೂರಿಗರು ಸಾಧ್ಯವಿರುವುದನ್ನೆಲ್ಲ ಮಾಡೋಣ. ತ್ಯಾಜ್ಯವನ್ನುಪ್ರತ್ಯೇಕಿಸೋಣ, ಇನ್ನಷ್ಟು ಸಸಿಗಳನ್ನು ನೆಡೋಣ,ಕೆರೆಗಳ ಅತಿಕ್ರಮಣವನ್ನು ತಡೆಯೋಣ. ನಮ್ಮ ಮಕ್ಕಳಿಗೆ ಸ್ವಚ್ಛ ಹಾಗೂ ಹಸಿರು ಬೆಂಗಳೂರನ್ನುಕೊಡೋಣ. ಹಸಿರುಭರಿತ ನಾಳೆಗಾಗಿ ಪ್ರತಿಜ್ಞೆ ಮಾಡೋಣ: “ಜೈವಿಕ ವೈವಿಧ್ಯತೆಯನ್ನು ಸಂಭ್ರಮಿಸೋಣ’.

Post a comment