nbf@namma-bengaluru.org
9591143888

Authored Articles

ಬೆಂಗಳೂರಿನ ಉಳಿವಿಗೆ ಸಾಮುದಾಯಿಕ ವಿವೇಕವೇ ಕೀಲಿಕೈ

ಇಂದು ಜೂನ್ 5, ವಿಶ್ವ ಪರಿಸರ ದಿನ. ಇಂದು ನಮ್ಮನ್ನು ನಾವೇ ಕೆಲವು ಪ್ರಶ್ನೆಗಳನ್ನು ಕೇಳಿಕೊಳ್ಳುವುದು ಸೂಕ್ತ: ಬೆಂಗಳೂರಿನಲ್ಲಿ ನಮ್ಮ ಅಸ್ಥಿತ್ವವನ್ನುಬೆಂಬಲಿಸುವ ಪರಿಸರ ಕುರಿತು ನಮ್ಮ ಕಣ್ಣುಗಳನ್ನು ಕೋವಿಡ್ ಲಾಕ್‍ಡೌನ್ ತೆರೆಸಿದೆಯೇ? ನಾವು ಕಲಿತದ್ದಾದರೂ ಏನು? ಕಲಿತಿದ್ದರ ಕುರಿತುಏನನ್ನಾದರೂ ಮಾಡಲು ಸಿದ್ಧರಿದ್ದೇವೆಯೇ?

ನಮ್ಮ ಪ್ರಕಾರ, ಬೆಂಗಳೂರಿನವರಿಗೆ ಕೋವಿಡ್ ಲಾಕ್‍ಡೌನ್ ಒಂದು ರೀತಿಯ ಜೀವನ ಶಿಕ್ಷಣದಂತೆ ಪರಿಣಮಿಸಿತು. ಅದು ಅಪಾರ ಸಂಕಷ್ಟ ಹಾಗೂನೋವಿಗೆ ಕಾರಣವಾಗಿದೆ. ಆದರೆ, ಬೆಂಗಳೂರಿನ ಪರಿಸರದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಒಳಿತು ಮಾಡಿದೆ. ಮಾಲಿನ್ಯದ ಮೂಲಗಳುಮುಚ್ಚಿದ್ದರಿಂದ ಕೆರೆಗಳು ಹಾಗೂ ತೊರೆಗಳು ಶುದ್ಧಗೊಂಡವು. ರಸ್ತೆ ಮೇಲೆ ಕಾರುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ, ಗಾಳಿ ತಿಳಿಯಾಯಿತು. ಬೆಂಗಳೂರು ಹಸಿರಾಗಿ ಹಾಗೂ ಶುದ್ಧವಾಗಿ ಕಂಗೊಳಿಸಿತು. ಇದರಿಂದ ಸಾಬೀತಾಗಿದ್ದೇನೆಂದರೆ, ನಾನು ಅಂದರೆ, ನಾನು ಮತ್ತು ನೀವು, ಬೆಂಗಳೂರಿನದುರ್ಗತಿಗೆ ಕಾರಣ. ಅದು ಸಾಬೀತು ಪಡಿಸಿದ್ದೇನೆಂದರೆ, ನಾವು ಅಂದರೆ ನಾನು ಮತ್ತು ನೀವು ಒಟ್ಟಾಗಿ ಅದನ್ನು ಸರಿಪಡಿಸಬಹುದು.

ಎಲ್ಲರೂ ನೆಲೆಯೂರಲು ಇಚ್ಛಿಸುವ, ವಾಸ್ತವ್ಯ ಹೂಡುವ ಹಾಗೂ ಸಮೃದ್ಧಿ ಗಳಿಸುವ ಹಿತಕರ ವಾತಾವರಣ ಇರುವ ಬೆಂಗಳೂರನ್ನು ಪಿಂಚಣಿದಾರರಸ್ವರ್ಗ ಎಂದು ಕರೆಯಲಾಗುತ್ತಿತ್ತು. ನಾವು ವಾಸ್ತವ್ಯ ಹೂಡಿದೆವು. ಆದರೆ, ಅಷ್ಟಕ್ಕೇ ನಿಲ್ಲಿಲಿಲ್ಲ. ನಗರ ಹಾಗೂ ಅದರ ಸಂಪನ್ಮೂಲಗಳನ್ನು ಅತಿಯಾಗಿಶೋಷಣೆ ಮಾಡಿದೆವು. ಮರಗಳನ್ನು ಕತ್ತರಿಸಿದೆವು, ಕೆರೆಗಳನ್ನು ಒತ್ತುವರಿ ಮಾಡಿದೆವು, ಸ್ವಾಭಾವಿಕ ಚರಂಡಿ ವ್ಯವಸ್ಥೆಗೆ ಕೊಳಕನ್ನು ತುಂಬಿದೆವು, ನೀರಿನ ಆಶ್ರಯ ತಾಣಗಳಲ್ಲಿ ಲೇಔಟ್‍ಗಳನ್ನು ಅಭಿವೃದ್ಧಿ ಪಡಿಸಿದೆವು ಮತ್ತು ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇಂದಿನ ಬೆಂಗಳೂರು ನಮ್ಮೆಲ್ಲರಅಪಾರ ದುರಾಸೆಯ ಫಲ. ಇದರಿಂದ ನಾಲ್ಕು ಮಕ್ಕಳಲ್ಲಿ ಒಬ್ಬರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಆದರೆ, ಸುರಂಗದ ತುದಿಯಲ್ಲಿ ಬೆಳಕು ಇದೆ. ನಾವು ಹಳೆಯ ವೈಭವವನ್ನು ವಾಪಸ್ ತರಬಹುದು. ನಮ್ಮ ನಗರದ ಭವಿಷ್ಯವು ಸರ್ಕಾರ, ನಾಗರಿಕರುಹಾಗೂ ಗುಂಪುಗಳು ಒಟ್ಟಾಗಿ ಪಾರಿಸರಿಕವಾಗಿ ಸುಸ್ಥಿರ ಹಾಗೂ ತಾಂತ್ರಿಕವಾಗಿ ದೃಢವಾದ ಯೋಜನೆಗಳನ್ನು ರೂಪಿಸಿ ಹಾಗೂ ಅದನ್ನುಅನುಷ್ಠಾನಗೊಳಿಸುವುದರಲ್ಲಿ ಇದೆ. ಸಾಮೂಹಿಕ ವಿವೇಕ ಒಂದು ವರ. ಜನರ ವೇದಿಕೆಯಾದ ನಮ್ಮ ಬೆಂಗಳೂರು ಪ್ರತಿಷ್ಠಾನ ಪರಿಸರ ರಕ್ಷಣೆಗೆಅದರಲ್ಲೂ ನಿರ್ದಿಷ್ಟವಾಗಿ ಕೆರೆಗಳ ರಕ್ಷಣೆಗೆ ಸಾಮುದಾಯಿಕ ವಿವೇಕಕ್ಕೆ ಧ್ವನಿ ನೀಡುತ್ತಿದೆ.

#ವಿಶ್ವ ಪರಿಸರ ದಿನವಾದ ಇಂದು ಎಲ್ಲ ಬೆಂಗಳೂರಿಗರು ಅತ್ಯುತ್ತಮವಾದುದನ್ನೇ ಮಾಡುವುದಾಗಿ ಹಾಗೂ ನಮ್ಮ ಬೆಂಗಳೂರನ್ನು ಉಳಿಸುವುದಾಗಿಪ್ರತಿಜ್ಞೆ ಮಾಡಬೇಕಿದೆ. ತ್ಯಾಜ್ಯವನ್ನು ಪ್ರತ್ಯೇಕಗೊಳಿಸೋಣ, ಇನ್ನಷ್ಟು ಸಸಿಗಳನ್ನು ನೆಡೋಣ, ಕೆರೆಗಳ ಒತ್ತುವರಿಯನ್ನು ನಿಲ್ಲಿಸೋಣ. ನಮ್ಮ ಮಕ್ಕಳಿಗೆಸ್ವಚ್ಛ ಹಾಗೂ ಹಸಿರು ಬೆಂಗಳೂರನ್ನು ಕೊಡೋಣ. ಹಸಿರುಭರಿತ ನಾಳೆಗಾಗಿ ಪ್ರತಿಜ್ಞೆ ಮಾಡೋಣ: “ಜೈವಿಕ ವೈವಿಧ್ಯತೆಯನ್ನು ಸಂಭ್ರಮಿಸೋಣ’.

-ಹರೀಶ್ ಕುಮಾರ್, ಜನರಲ್ ಮ್ಯಾನೇಜರ್, ಎನ್‍ಬಿಎಫ್

Post a comment