ಅಕ್ಟೋಬರ್ 4,2016ರಂದು ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದ್ದ ಜಾಗಗಳನ್ನುಕಡಿಮೆಗೊಳಿಸುವ ಅಂಶಗಳಿದ್ದ ವಿವಾದಾತ್ಮಕ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಮಸೂದೆ, 2016ನ್ನು ಸರ್ಕಾರಕ್ಕೆ ವಾಪಸ್ ಮಾಡಿದರು. ರಾಜ್ಯಪಾಲರ ಈ ಕ್ರಮದ ಹಿಂದೆ ಇದ್ದುದು ನಗರ ಪ್ರದೇಶಗಳಲ್ಲಿನ ಹಸಿರು ಹಾಗೂ ತೆರೆದ ಪ್ರದೇಶಗಳನ್ನು ಸರ್ಕಾರ ಕೈವಶ ಮಾಡಿಕೊಳ್ಳುವುದರ ವಿರುದ್ಧ ಸಂಸದ ರಾಜೀವ್ ಚಂದ್ರಶೇಖರ್ ಹಾಗೂ ನಮ್ಮ ಬೆಂಗಳೂರು ಪ್ರತಿಷ್ಠಾನ ನಡೆಸಿದ ನಿರಂತರ ಪ್ರಯತ್ನ.
ಕರ್ನಾಟಕದ 250 ನಗರಗಳು ಹಾಗೂ ಪಟ್ಟಣಗಳ ಮೇಲೆ ಪರಿಣಾಮ ಬೀರಬಹುದಾಗಿದ್ದ ಈ ಮಸೂದೆಯ ಹಿಂದೆ ರಿಯಲ್ ಎಸ್ಟೇಟ್ ಲಾಬಿ ಇದ್ದಿತ್ತು.ಮಸೂದೆಯನ್ನು ಹೇಗಾದರೂ ಮಾಡಿ ತಡೆಯಬೇಕಿತ್ತು.
ಜುಲೈ 20,2016ರಂದು ರಾಜ್ಯಪಾಲರಿಗೆ ಎನ್‍ಬಿಎಫ್ ಬರೆದ ಪತ್ರದಲ್ಲಿ “ಮುಕ್ತ ಸ್ಥಳಾವಕಾಶ ಕುಗ್ಗಿಸುವ’ ಮಸೂದೆಯನ್ನು ತಿರಸ್ಕರಿಸಬೇಕು ಹಾಗೂ ಮಸೂದೆಯನ್ನು ಶಾಸನಸಭೆಯಲ್ಲಿ ಅಂಗೀಕರಿಸುವ ಮುನ್ನ ಈ ಬಗ್ಗೆ ಸಾರ್ವಜನಿಕವಾಗಿ ಚರ್ಚೆ ನಡೆಯಬೇಕು ಎಂದು ಒತ್ತಾಯಿಸಿತ್ತು.
ಮಸೂದೆಯನ್ನು ಜುಲೈನಲ್ಲಿ ಶಾಸನಸಭೆಯ ಎರಡೂ ಸದನಗಳಲ್ಲಿ ಯಾವುದೇ ಚರ್ಚೆ ನಡೆಸದೆ, ಅಂಗೀಕರಿಸಲಾಗಿತ್ತು. ಹೊಸ ಬಡಾವಣೆಗಳನ್ನು ನಿರ್ಮಿಸುವಾಗ ಉದ್ಯಾನಗಳು ಹಾಗೂ ಆಟದ ಮೈದಾನಕ್ಕೆ ಮೀಸಲಿಡಬೇಕಾದ ಜಾಗವನ್ನು ಶೇ.15ರಿಂದ 10ಕ್ಕೆ ಹಾಗೂ ಸಾರ್ವಜನಿಕ ಸೌಲಭ್ಯಕ್ಕೆ ಮೀಸಲಿಡಬೇಕಾದ ಜಾಗವನ್ನು ಶೇ.10ರಿಂದ ಶೇ.5ಕ್ಕೆ ಇಳಿಸುವ ಪ್ರಸ್ತಾವವನ್ನು ಮಸೂದೆ ಒಳಗೊಂಡಿತ್ತು. ಈ ತಿದ್ದುಪಡಿಯು ಬೆಂಗಳೂರು ಮೆಟ್ರೋಪಾಲಿಟ್ ಪ್ರದೇಶ ಹೊರತುಪಡಿಸಿ, ರಾಜ್ಯದ ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಸ್ಥಳೀಯ ಯೋಜನಾ ಪ್ರಾಧಿಕಾರಗಳಿಗೆ ಅನ್ವಯಿಸುತ್ತಿತ್ತು.
“ಮುಕ್ತ ಸ್ಥಳಾವಕಾಶ ಕುಗ್ಗಿಸುವ’ ಮಸೂದೆ ವಾಪಸು: ಡಿಸೆಂಬರ್ 7,2016ರಂದು ಸಚಿವ ಸಂಪುಟವು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ತಿದ್ದುಪಡಿ)ಮಸೂದೆ-2016ನ್ನು ರಾಜ್ಯಪಾಲರಿಗೆ ಮತ್ತೊಮ್ಮೆ ಕಳುಹಿಸಲು ನಿರ್ಧರಿಸಿತು. ತಿದ್ದುಪಡಿಯಿಂದ ಸರ್ಕಾರಿ ಮನೆ ನಿವೇಶನಗಳ ವೆಚ್ಚ ಕಡಿಮೆಯಾಗಲಿದೆ ಎಂದು ತಿದ್ದುಪಡಿ ಮಸೂದೆಯನ್ನು ಸರ್ಕಾರ ಸಮರ್ಥಿಸಿಕೊಂಡಿತ್ತು. ಕರ್ನಾಟಕವು ರಾಜ್ಯಪಾಲರ ನಿರ್ಧಾರವೇನು ಎಂದು ಕಾಯುತ್ತಿರುವ ಹೊತ್ತಲ್ಲೇ ಎನ್‍ಬಿಎಫ್ ರಾಜ್ಯದ ಸಾರ್ವಜನಿಕ ಮುಕ್ತ ಸ್ಥಳಗಳನ್ನು ರಕ್ಷಿಸುವ ಹೋರಾಟದ ಮುಂದುವರಿಕೆಯನ್ನು ಖಾತ್ರಿಗೊಳಿಸುತ್ತದೆ.
Post a comment