nbf@namma-bengaluru.org
9591143888

ಅಭಿಯಾನಗಳು

ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿಯ ಸಬಲೀಕರಣ

ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ನಗರ ಅವೈಜ್ಞಾನಿಕವಾಗಿ ಬೆಳೆದಿದ್ದು, ಈಗ ನಗರಕ್ಕೆ ಬೇಕಿರುವುದು ಸೂಕ್ತವಾದ, ದೀರ್ಘಕಾಲೀನ ಶಾಸನಬದ್ಧ ಯೋಜನೆ. ನಗರದ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಬೆಂಗಳೂರು ಮೆಟ್ರೋಪಾಲಿಟನ್ ಯೋಜನಾ ಸಮಿತಿ(ಬಿಎಂಪಿಸಿ) ಎದುರು ಇಡಬೇಕಿದ್ದು, ಸಮಿತಿಯ ಸದಸ್ಯರು ಪಾರದರ್ಶಕವಾಗಿ ನಾನಾ ಯೋಜನೆಗಳನ್ನು ಕುರಿತು ಚರ್ಚಿಸುತ್ತಾರೆ. ಬಿಎಂಪಿಸಿ ಸದಸ್ಯರು ನಗರದ ಸಂರಕ್ಷಣೆಗೆ ಸಂಬಂಧಿಸಿದಂತೆ ಮೂಲಭೂತ ಕರ್ತವ್ಯ ಹಾಗೂ ಹಕ್ಕುಬಾಧ್ಯತೆಯನ್ನು ಹೊಂದಿರುತ್ತಾರೆ ಮತ್ತು ಅವರು ಬೆಂಗಳೂರಿನ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಂವಿಧಾನಿಕ ಪ್ರಕ್ರಿಯೆಗಳನ್ನು ಅನುಸರಿಸಬೇಕು ಹಾಗೂ ಜನತೆಯ ಹಕ್ಕುಗಳನ್ನು ರಕ್ಷಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾ ಗುತ್ತದೆ.

ನಮ್ಮ ಬೆಂಗಳೂರು ಪ್ರತಿಷ್ಠಾನ(ಎನ್‍ಬಿಎಫ್) ಹಾಗೂ ಸಿಟಿಜನ್ಸ್ ಆಕ್ಷನ್ ಫೋರಂ(ಸಿಎಎಫ್) ನವೆಂಬರ್ 25,2016ರಂದು ಬಿಎಂಪಿಸಿಯ ಎಲ್ಲ ಸದಸ್ಯರಿಗೆ ಜಂಟಿ ಪತ್ರವೊಂದನ್ನು ಬರೆದಿದ್ದು, ಮಾಸ್ಟರ್ ಪ್ಲಾನ್ 2031ರ ಸಿದ್ಧತೆ ಹಾಗೂ ನಗರದ ಒಟ್ಟಾರೆ ಯೋಜನೆಯನ್ನು ಸಿದ್ಧಗೊಳಿಸುವಲ್ಲಿ ಅವರ ಪಾತ್ರ ಕುರಿತು ನೆನಪಿಸಿತು.

ಮುಂಗಾಣ್ಕೆ(ವಿಷನ್) ದಾಖಲೆ ಹಾಗೂ ಮಾಸ್ಟರ್ ಪ್ಲಾನ್ 2031 ತಯಾರಿಸುವ ಪ್ರತಿ ಹಂತದಲ್ಲೂ ಬಿಎಂಪಿಸಿ ತೊಡಗಿಕೊಳ್ಳಬೇಕಾದ್ದು ಎಷ್ಟು ಅಗತ್ಯ ಎನ್ನುವುದನ್ನು ಪತ್ರ ಸ್ಪಷ್ಟವಾಗಿ ಎತ್ತಿ ತೋರಿಸುತ್ತದಲ್ಲದೆ, ಸಮಿತಿಯು ಸರ್ಕಾರದ ಏಜೆನ್ಸಿಗಳ ಬೆಂಬಲಿತ ಪ್ರಯತ್ನದ ನೇತೃತ್ವ ವಹಿಸಬೇಕು ಎನ್ನುತ್ತದೆ.

ಪ್ರಮುಖ ಅಂಶಗಳು: ಮಾಸ್ಟರ್ ಪ್ಲಾನ್ 2031ರ ತಯಾರಿಸುವಿಕೆ ಅಂತಿಮ ಹಂತದಲ್ಲಿದ್ದು, ಇದರಲ್ಲಿ ತೊಡಗಿಸಿಕೊಂಡಿರುವ ಗುತ್ತಿಗೆದಾರ ವಿಷನ್ದಾಖಲೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಈಗಾಗಲೇ ಸಲ್ಲಿಸಿದ್ದಾರೆ.

ಈ ದಾಖಲೆಯನ್ನು ಅಂತಿಮಗೊಳಿಸುವ ಮುನ್ನ ಬಿಎಂಪಿಸಿಯನ್ನು ಪರಿಗಣಿಸಿಲ್ಲ.  

ದಾಖಲೆಯನ್ನು ಹಾಗೂ ಮಾಸ್ಟರ್ ಪ್ಲಾನ್ 2031ನ್ನು ಪುನರ್‍ವಿಮರ್ಶಿಸಲು ರಚಿಸಿದ ಸಮಿತಿಯಲ್ಲಿ ಬಿಎಂಪಿಸಿಯ ಒಬ್ಬನೇ ಒಬ್ಬ ಸದಸ್ಯ ಇಲ್ಲ.

ನಗರದ ಯೋಜನೆಗಳಿಗೆ ಸಂಬಂಧಿಸಿದ ನಿರ್ಧಾರಗಳನ್ನು ಅದರಲ್ಲೂ ಮುಖ್ಯವಾಗಿ ಪ್ರಸ್ತುತ ಮಾಸ್ಟರ್ ಪ್ಲಾನ್ 2031ರ ಭಾಗವಾಗಿಲ್ಲದೆ ಇರುವಮೂಲಸೌಲಭ್ಯ ಹಾಗೂ ಸಂಚಾರಕ್ಕೆ ಸಂಬಂಧಿಸಿದ ಯೋಜನೆಗಳನ್ನು ಕೂಡ ಬಿಎಂಪಿಸಿ ಜತೆ ಯಾವುದೇ ಚರ್ಚೆ ನಡೆಸದೆಅನುಷ್ಠಾನಗೊಳಿಸಲಾಗುತ್ತಿದೆ.

Read the letter English Kannada List of BMPC members

Post a comment